ಗದಗ,: ಕರಾಟೆ ತರಬೇತಿ ಪಡೆಯುವುದರೊಂದಿಗೆ ಕರಾಟೆ ಕ್ರೀಡೆಯಲ್ಲಿ ಭಾಗವಹಿಸುವ ಮೂಲ ವಿದ್ಯಾರ್ಥಿಗಳು ದೈಹಿಕವಾಗಿ ಸಬಲರಾಗುವುದರೊಂದಿಗೆ ಮಾನಸಿಕವಾಗಿಯೂ ಸದೃಢರಾಗಬಹುದು ಎಂದು ಪಿ.ಎಸ್. ಹಬೀಬ ತಿಳಿಸಿದರು.
ಅವರು 7ನೇ ರಾಷ್ಟ್ರಮಟ್ಟದ ಮುಕ್ತ ಕರಾಟೆ ಪಂದ್ಯಾವಳಿಯಲ್ಲಿ ಗದಗ ನಗರದ ಚೇತನ ಕರಾಟೆ ಕ್ಲಬ್ನ ವಿದ್ಯಾರ್ಥಿಗಳು ಭಾಗವಹಿಸಿ, ಫೈಟ್ ಮತ್ತು ಕಥಾ ವಿಭಾಗದಲ್ಲಿ ಪ್ರಶಸ್ತಿಗಳನ್ನು ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರ್ಕಾರವು ಎಲ್ಲ ಶಾಲಾ ಕಾಲೇಜುಗಳಲ್ಲಿ ಕರಾಟೆ ತರಬೇತಿ ಕಡ್ಡಾಯವಾಗಿ ಮಾಡಿ ಎಲ್ಲ ವಿದ್ಯಾರ್ಥಿಗಳಿಗೂ ಆತ್ಮ ರಕ್ಷಣಾ ಕಲೆಯನ್ನು ಕಲಿಸಿ ಸದೃಢ ಸಮಾಜವನ್ನು ನಿರ್ಮಾಣ ಮಾಡಬಹುದೆಂದುರು.ಪ್ರಶಸ್ತಿ ಪಡೆದವರಲ್ಲಿ ಮೊದಲನೆಯದಾಗಿ ಕಿರಣ್ ಪ್ರಥಮ ಸ್ಥಾನ, ಕೃಷಿಯ ತೃತೀಯ ಸ್ಥಾನ, ಕೋನ ಜಸ್ವಿತಾ ರೆಡ್ಡಿ ದ್ವಿತೀಯ ಸ್ಥಾನ, ಕೋನ ವೇದಾಂತ್ ರೆಡ್ಡಿ ಪ್ರಥಮ ಸ್ಥಾನ, ಯಶ ಖಟವಟೆ ದ್ವಿತೀಯ ಸ್ಥಾನ, ವಿಜಯಾನಂದಯಾ ಗುಡಿಮಠ ದ್ವಿತೀಯ ಸ್ಥಾನ ಮತ್ತು ಕುಶಾಲ್ ಪ್ರಥಮ ಸ್ಥಾನ ಹಾಗೂ ಬ್ಲ್ಯಾಕ್ಬೆಲ್ಟ್ ವಿಭಾಗದಲ್ಲಿ ಖುಷಿ ವರ್ಣೇಕರ್ ಪ್ರಥಮ ಸ್ಥಾನ ಮತ್ತು ಸುಮಂತ್ ಮೆಣಸಿನಕಾಯಿ ಬ್ಲ್ಯಾಕ್ಬೆಲ್ಟ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ.
ಕಾರ್ಯಕ್ರಮದಲ್ಲಿ ಕಿರಣ್ ವೆರ್ಣೇಕರ್, ಕೋನ ಗೋವಿಂದ್ ರೆಡ್ಡಿ, ತರಬೇತಿದಾರರಾದ ಅಮೃತ್, ಇಂತಿಯಾಜ್, ವಿಜಯ್ ಕುರ್ತಕೋಟಿ, ಶಿವರಾಜ್ ಗಡಾದ, ದ್ಯಾಮಪ್ಪ ಹಾವೇರಿ, ಚೇತನ ಹಬೀಬ್ ಎಲ್ಲ ಪಾಲಕರು ಉಪಸ್ಥಿತರಿದ್ದರು.
More Stories
ಪತ್ರಕರ್ತ ರಾಜೀವ ಕಿದಿಯೂರುಗೆ ಸಿರಿಗನ್ನಡ ಸಿರಿ ಪ್ರಶಸ್ತಿ ಪ್ರದಾನ
ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ವಾಲ್ಮೀಕಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ
ಮಾಜಿ ಸೈನಿಕರಿಂದ ಪಿಎಸ್ಐ ಲಕ್ಷ್ಮಪ್ಪ ಆರಿಗೆ ಸನ್ಮಾನ