December 23, 2024

AKSHARA KRAANTI

AKSHARA KRAANTI




ಕನ್ನಡ ನಾಡು ನುಡಿ ಜಾಗೃತಿ ಮೂಡಿಸಿದ ಕನ್ನಡ ಜ್ಯೋತಿ ರಥ ಯಾತ್ರೆ

ಕನ್ನಡ ನಾಡು ನುಡಿ ಜಾಗೃತಿ ಮೂಡಿಸಿದ ಕನ್ನಡ ಜ್ಯೋತಿ ರಥ ಯಾತ್ರೆ

ಅಕ್ಷರಕ್ರಾಂತಿ ನ್ಯೂಸ್

ಗದಗ,: ಬೆಟಗೇರಿ ಅವಳಿ ನಗರಕ್ಕೆ ಕನ್ನಡ ನೆಲ-ಜಲ-ನಾಡು-ನುಡಿ ಜಾಗೃತಿ ಮೂಡಿಸಿದ ಕನ್ನಡ ಜ್ಯೋತಿ ರಥ ಯಾತ್ರೆ ಕವಿ ಮನಸ್ಸುಗಳಿಗೆ ಹಾಗೂ ಕನ್ನಡ ಅಭಿಮಾನಿಗಳಿಗೆ ಸಂತಸ ತಂದಿದೆ ಎಂದು ಕನ್ನಡ ಜಾನಪದ ಸಾಹಿತ್ಯ ಪರಿಷತ್ತು ಗದಗ ಶಹರ ಘಟಕ ಅದ್ಯಕ್ಷರಾದ ಸಂಗಮೇಶ ಹಾದಿಮನಿ ಹರ್ಷ ವ್ಯಕ್ತಪಡಿಸಿ ಮಾತನಾಡಿ, ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕನ್ನಡ ಭುವನೇಶ್ವರಿ ಜ್ಯೋತಿ ಹೊತ್ತ ಕನ್ನಡ ರಥ ಯಾತ್ರೆಯು ಗದಗ ಬೆಟಗೇರಿ ಅವಳಿ ನಗರದಲ್ಲಿ ಸಂಚರಿಸಿರುವುದು ಹರ್ಷದಾಯಕವಾಗಿದೆ ಎಂದರು.

ದಾರಿ ಉದ್ದಕ್ಕೂ ಕನ್ನಡ ಘೋಷಣೆಗಳನ್ನ ಅಭಿಮಾನಿ ಬಳಗ ಹಾಗೂ ಕವಿ ಮನಸ್ಸುಗಳು ಉತ್ಸಾಹದಿಂದ ಕೂಗಿದರು. ಕವಿ ಮನಸ್ಸುಗಳ ಪರವಾಗಿ ಕನ್ನಡ ಜ್ಯೋತಿ ರಥ ಯಾತ್ರೆಯನ್ನು ಸ್ವಾಗತಿಸಿದ ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅದ್ಯಕ್ಷರಾದ ವಿವೇಕಾನಂದಗೌಡ ಪಾಟೀಲರವರಿಗೆ ಹಾಗೂ ಎಲ್ಲಾ ಪದಾಧಿಕಾರಿಗಳಿಗೆ ಸಂಘಟಿಕರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.

 

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!