ಕರ್ನಾಟಕ ಮಾದಿಗ ಸಂಘರ್ಷ ಸಮಿತಿ ಗದಗ ಜಿಲ್ಲಾ ಘಟಕದ ವತಿಯಿಂದ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಯನ್ನು ಜಾರಿ ಮಾಡಲು ಸರ್ವೋಚ್ಛ ನ್ಯಾಯಾಲಯ ಸಂಪೂರ್ಣ ಅಧಿಕಾರಿವನ್ನು ರಾಜ್ಯಗಳಿಗೆ ನೀಡಿದೆ ರಾಜ್ಯ ಸರ್ಕಾರ ಒಳ ಮೀಸಲಾತಿಯನ್ನು ಜಾರಿಗೆ ತರುವಂತೆ ಮುಖ್ಯಮಂತ್ರಿಗಳಿಗೆ ಮನವಿ
ಅಕ್ಷರಕ್ರಾಂತಿ ನ್ಯೂಸ್
ಗದಗ,: ನಗರದ ಡಿ.ಸಿ. ಮಿಲ್ ರೋಡ ತಳಗೇರಿ ಓಣಿಯಲ್ಲಿರುವ ಡಾ. ಬಿ. ಆರ್. ಅಂಬೇಡ್ಕರವರ ಪುತ್ಥಳಿಗೆ ಮಾಲಾರ್ಪಣೆಯನ್ನು ಮಾಡುವ ಮುಖಾಂತರ ಕರ್ನಾಟಕ ಮಾದಿಗ ಸಂಘರ್ಷ ಸಮಿತಿ, ಗದಗ ಜಿಲ್ಲಾ ಘಟಕದ ಅಧ್ಯಕ್ಷ ರಾಘವೇಂದ್ರ ಪರಸಪ್ಪ ಪರಾಪೂರ ಇವರ ನೇತೃತ್ವದಲ್ಲಿ ಗದಗ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ ರಾಜ್ಯ ಸರ್ಕಾರ ಒಳಮೀಸಲಾತಿಯನ್ನು ತಕ್ಷಣವೇ ಜಾರಿ ತಂದು ಮಾದಿಗ ಸಮಾಜಕ್ಕೆ ನ್ಯಾಯ ಕೊಡಿಸಬೇಕೆಂದು ಘೋಷಣೆಗಳೊಂದಿಗೆ ಗದಗ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ಮಾದಿಗ ಸಂಘರ್ಷ ಸಮಿತಿ ಗದಗ ಜಿಲ್ಲಾಧ್ಯಕ್ಷರಾದ ರಾಘವೇಂದ್ರ ಪರಸಪ್ಪ ಪರಾಪೂರ ಅವರು ಮಾತನಾಡಿ, ಭಾರತದಲ್ಲಿ ಹಲವಾರು ಜಾತಿಗಳಿವೆ. ಇಲ್ಲಿ ಮೇಲ್ಜಾತಿಗಳು, ಶತಮಾನಗಳ ಕಾಲ ಕೆಳಜಾತಿಯ ಜನರಿಗೆ ಶಿಕ್ಷಣದ ಹಕ್ಕು, ಆಸ್ತಿಯ ಹಕ್ಕು, ಸ್ವಾತಂತ್ರ್ಯದ ಹಕ್ಕು ಇತ್ಯಾದಿಗಳನ್ನು ನಿರಾಕರಿಸಿ ಶೋಷಿತ ಗುಲಾಮರಂತೆ ನಡೆಸಿಕೊಂಡು ಬರಲಾಯಿತು. ಈ ರೀತಿಯ ಅಸಮಾನತೆಯ ಹೋಗಲಾಡಿಸಿ ಸಮಾನತೆಯನ್ನು ತರಬೇಕೆಂಬುದು ಡಾ. ಬಾಬಾಸಾಹೇಬ್ ಅಂಬೇಡ್ಕರ್ ರವರ ಕನಸಾಗಿತ್ತು. ಶೂದ್ರ ಹಾಗೂ ಅತಿ ಶೂದ್ರವಾದ ಪರಿಶಿಷ್ಟ ಜನಾಂಗಗಳಲ್ಲಿಯೂ ಸಹ ಶ್ರೇಣಿಕೃತ ವ್ಯವಸ್ಥೆ ತನ್ನ ಕೆನ್ನಾಲಿಗೆ ಚಾಚಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಒಟ್ಟು ಜನಸಂಖ್ಯೆಯ ಆಧಾರದ ಮೇಲೆ ಕ್ರಮವಾಗಿ ಮೀಸಲಾತಿಯು ಶಿಕ್ಷಣ, ಉದ್ಯೋಗ ಹಾಗೂ ರಾಜಕೀಯ ರಂಗಗಳಲ್ಲಿ ಜಾರಿಯಲ್ಲಿದೆ. ಪರಿಶಿಷ್ಟ ಜಾತಿಗಳಲ್ಲಿ ಮಾದಿಗ ಸಮುದಾಯವು ಇಡೀ ದಕ್ಷಿಣ ಭಾರತದಲ್ಲಿ ಮಾದಿಗ ಸಮುದಾಯವು ಅತ್ಯಂತ ಶೋಷಿತ ಸಮಾಜವಾಗಿದ್ದು, ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ಔದ್ಯೋಗಿಕ ಮತ್ತು ರಾಜಕೀಯ ವಲಯದಲ್ಲಿ ಅವಕಾಶವಂಚಿತರಾಗಿ ಅತ್ಯಂತ ಹಿಂದುಳಿದಿದೆ. ಈ ಎಲ್ಲಾ ಕ್ಷೇತ್ರಗಳಲ್ಲಿ ಸಮಾನತೆ ಸಾಧಿಸಲು ಮಾದಿಗ ಸಮುದಾಯ ಕಳೆದ ಆರು ದಶಕಗಳಿಂದ ಹೋರಾಟ, ಧರಣಿ, ಸತ್ಯಾಗ್ರಹ, ಚಳುವಳಿ, ಉಪವಾಸ, ಅರೆಬೆತ್ತಲೆ ಮೆರವಣಿಗೆ, ಪಾದಯಾತ್ರೆ ಮಾಡಿದ್ದೇವೆ. ಇಲ್ಲಿಯವರೆಗೆ ಸಾಕಷ್ಟು ಮಾದಿಗರು ತಮ್ಮ ಪ್ರಾಣವನ್ನು ಬಲಿಕೊಟ್ಟಿದ್ದಾರೆ. ಈ ಬಗ್ಗೆ ನಮ್ಮ ಒಳಮೀಸಲಾತಿಗೆ ದಿ. 01-08-2024 ರಂದು ಘನ ಸರ್ವೋಚ್ಛ ನ್ಯಾಯಾಲಯದ 7 ಜನ ಸದಸ್ಯ ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುವ ಮೂಲಕ “ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು” ಎಂಬ ಆಶಯದಂತೆ ಪ. ಜಾತಿ- ಪ. ಪಂಗಡದ 151 ಉಪಜಾತಿಗಳಿಗೆ ಆಯಾ ಜಾತಿ ಜನಸಂಖ್ಯಾವಾರು ಒಳಮೀಸಲಾತಿಯನ್ನು ಕೊಡಬೇಕು ಎಂದು ಐತಿಹಾಸಿಕ ತೀರ್ಪುಕೊಟ್ಟಿದೆ. ಈ ತೀರ್ಪು ನೊಂದ, ಶೋಷಿತ ತಳ ಸಮುದಾಯಗಳ ದಶಕಗಳ ಹೋರಾಟಕ್ಕೆ ಸಂದ ಗೆಲವುವಾಗಿದೆ. ಆದರೆ ರಾಜ್ಯ ಸರ್ಕಾರ ಒಳ ಮೀಸಲಾತಿ ತೀರ್ಪನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಇಲ್ಲಿಯವರೆಗೆ ಒಳಮೀಸಲಾತಿ ಅನುಷ್ಠಾನಕ್ಕೆ ಸರಕಾರ ಮುಂದಾಗದೇ ಇರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಚುನಾವಣೆ ಸಂದರ್ಭದಲ್ಲಿ ಒಳಮೀಸಲಾತಿಯನ್ನು ಜಾರಿಗೆ ತರುವುದಾಗಿ ಶೋಷಿತ ಸಮುದಾಯಗಳಿಗೆ ಭರವಸೆ ನೀಡಿದ್ದು ಆದರೆ ಸರ್ವೋಚ್ಛ ನ್ಯಾಯಾಲಯದ ತೀರ್ಪು ಕೊಟ್ಟ ನಂತರವು ಇನ್ನೂವರೆಗೆ ಒಳಮೀಸಲಾತಿಗೆ ಜಾರಿಗೆ ತರದೇ ಇರುವುದಕ್ಕೆ ಮಾದಿಗ ಸಮಾಜಕ್ಕೆ ಅನ್ಯಾಯ ಮಾಡಿದಂತಾಗುತ್ತದೆ.
ಮಾನ್ಯ ರಾಜ್ಯ ಸರ್ಕಾರ ಕೂಡಲೇ ಒಳಮೀಸಲಾತಿಯನ್ನು ಜಾರಿಗೆ ತಂದು ಕಳೆದ ಆರು ದಶಕಗಳ ಹೋರಾಟಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ಕರ್ನಾಟಕ ಮಾದಿಗ ಸಂಘರ್ಷ ಸಮಿತಿ ಗದಗ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರಾದ ರಾಘವೇಂದ್ರ ಪರಸಪ್ಪ ಪರಾಪೂರ ಅವರು ಮನವಿ ಸಲ್ಲಿಸಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾದಿಗ ಸಮಾಜದ ಹಿರಿಯರಾದ ಅಶೋಕ ಹಾದಿಮನಿ, ಮಾದಿಗ ಸಮಾಜದ ಯುವ ನಾಯಕರಾದ ಪಂಪಾಪತಿ ಅಗಸಿನಕೊಪ್ಪ, ವಿರುಪಾಕ್ಷಪ್ಪ ಗೌಡರ, ಮಂಜುನಾಥ ತೌಜಲ್, ರಮೇಶ ರಾಲದೊಡ್ಡಿ, ಸುಂಕಣ್ಣ ಗುತ್ತಿ, ಮರಿಯಪ್ಪ ಪರಾಪೂರ, ಪರಶುರಾಮ ಸಂಗಾಪೂರ, ಸದಾಶಿವ ಕೋಟ್ನಿಕಲ್, ಗೋಪಾಲ ಕೋಣಿಮನಿ, ಗೋವಿಂದ ಗುತ್ತಿ, ಮಂಜುನಾಥ ಪರಾಪೂರ, ವಿಕ್ರಮ ಮಾದರ, ವಿನಾಯಕ ಹೊಸಳ್ಳಿ, ವಿಶಾಲ ಹಾದಿಮನಿ ಸೇರಿದಂತೆ ಮಾದಿಗ ಸಮಾಜದ ಹಿರಿಯರು, ಯುವಕರು, ಇದ್ದರು.
More Stories
ಪತ್ರಕರ್ತ ರಾಜೀವ ಕಿದಿಯೂರುಗೆ ಸಿರಿಗನ್ನಡ ಸಿರಿ ಪ್ರಶಸ್ತಿ ಪ್ರದಾನ
ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ವಾಲ್ಮೀಕಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ
ಮಾಜಿ ಸೈನಿಕರಿಂದ ಪಿಎಸ್ಐ ಲಕ್ಷ್ಮಪ್ಪ ಆರಿಗೆ ಸನ್ಮಾನ