ಗದಗ,: ಇಲ್ಲಿಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಗದಗ ಘಟಕದ ಆಶ್ರಯದಲ್ಲಿ ವಿಶ್ವ ಮಕ್ಕಳ ಪುಸ್ತಕ ದಿನಾಚರಣೆಯ ಅಂಗವಾಗಿ ಗದುಗಿನ ಪ್ರತಿಭಾವಂತ ಬಾಲಕವಿಯಿತ್ರಿ ರಾಜ್ಯ ಸರ್ಕಾರದಿಂದ ಅಸಾಧಾರಣ ಪ್ರತಿಭಾ ಪುರಸ್ಕಾರ ಪಡೆದ 8ನೇ ತರಗತಿ ಓದುತ್ತಿರುವ ಗದುಗಿನ ಕುಮಾರಿ ಪ್ರಣತಿ .ಆರ್.ಗಡಾದ ಬರೆದ “ನಾನು ಮಳೆಯಾದರೆ” ಎಂಬ ಮಕ್ಕಳ ಪದ್ಯ ಸಂಕಲನ ಲೋಕಾರ್ಪಣೆಯಾಗಲಿದೆ.
ಇದೇ ಏ.13 ರಂದು ಶನಿವಾರ ಸಂಜೆ 6 ಗಂಟೆಗೆ ಕೆ.ಸಿ. ರಾಣಿ ರಸ್ತೆ ಹತ್ತಿರ ಇರುವ ಜಿಲ್ಲಾ ಕಸಾಪ ಕಾರ್ಯಾಲಯದ ತೋಂಟದ ಸಿದ್ದಲಿಂಗ ಶ್ರೀಗಳ ಕನ್ನಡ ಭವನದಲ್ಲಿ ನಡೆಯಲಿರುವ ಪುಸ್ತಕ ಲೋಕಾರ್ಪಣೆಯ ಸಮಾರಂಭದಲ್ಲಿ ಹೆಸರಾಂತ ಸಾಹಿತಿಗಳು ವಿಮರ್ಶಕರು ಆದ ಪ್ರೋ. ಚಂದ್ರಶೇಖರ ವಸ್ತ್ರದ ಅವರು “ನಾನು ಮಳೆಯಾದರೆ “ಎಂಬ ಪುಸ್ತಕ ಲೋಕಾರ್ಪಣೆ ಮಾಡಲಿದ್ದಾರೆ.
ಖ್ಯಾತ ಮಕ್ಕಳ ಸಾಹಿತಿಗಳು ಮತ್ತು ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಸಾಹಿತಿಗಳಾದ ಡಾ. ನಿಂಗು ಸೊಲಗಿ ಅವರು ಪುಸ್ತಕಾವಲೋಕನ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರು ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿಯ ನೂತನ ಸದಸ್ಯರಾದ ಡಾ.ಅರ್ಜುನ ಗೊಳಸಂಗಿ ಆಗಮಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನ ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವಿವೇಕಾನಂದಗೌಡ ಪಾಟೀಲ ವಹಿಸಲಿದ್ದು, ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ರಾಜೇಂದ್ರ.ಎಸ್. ಗಡಾದ ಆತಿಥ್ಯ ವಹಿಸಲಿದ್ದಾರೆ.
ಈ ಸಮಾರಂಭಕ್ಕೆ ಎಲ್ಲ ಮಕ್ಕಳ ಮನಸ್ಸುಗಳಿಗೆ ಕನ್ನಡ ಮನಸುಗಳಿಗೆ ಆದರ ಸ್ವಾಗತವಿದ್ದು ಆಸಕ್ತರು ಸಮಾರಂಭದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಸಮಾರಂಭದ ಪರವಾಗಿ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಎಸ್.ವಿ. ಕಮ್ಮಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
More Stories
ಪತ್ರಕರ್ತ ರಾಜೀವ ಕಿದಿಯೂರುಗೆ ಸಿರಿಗನ್ನಡ ಸಿರಿ ಪ್ರಶಸ್ತಿ ಪ್ರದಾನ
ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ವಾಲ್ಮೀಕಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ
ಮಾಜಿ ಸೈನಿಕರಿಂದ ಪಿಎಸ್ಐ ಲಕ್ಷ್ಮಪ್ಪ ಆರಿಗೆ ಸನ್ಮಾನ