ಗದಗ,: ಇತ್ತಿಚಿಗೆ ನಡೆದ 2024-25ನೇ ಸಾಲಿನ ಪ್ರೌಢಶಾಲೆಗಳ ಗ್ರುಪ್-ಸಿ ಮಟ್ಟದ ಕ್ರೀಡಾಕೂಟವೂ ಕೆ.ಎಚ್. ಪಾಟೀಲ್ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿತ್ತು. ಬೆಟಗೇರಿಯ ಎಸ್.ಎಸ್.ಕೆ. ಶ್ರೀ ಜಗದಂಬಾ ಪ್ರೌಢಶಾಲೆಯ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಶಾಲೆಯ ವಿದ್ಯಾರ್ಥಿಗಳಾದ ಚಿನ್ಮಯ ಐಲಿ ಎತ್ತರ ಜಿಗಿತ (ದ್ವೀತಿಯಸ್ಥಾನ), ಮೇಘರಾಜ ಆಮ್ರದ ಎತ್ತರ ಜಿಗಿತ (ತೃತೀಯಸ್ಥಾನ), ಉದಯಶಂಕರ ಕುಣಿಗೇರಿ 500 ಮೀ. ನಡಿಗೆ (ದ್ವಿತೀಯ ಸ್ಥಾನ), ಮೇಘರಾಜ ಆಮ್ರದ ಭಲ್ಲೆ ಎಸೆತ (ದ್ವಿತೀಯ ಸ್ಥಾನ), ವಿಕಾಸ ಐಲಿ (ದ್ವಿತೀಯ ಸ್ಥಾನ), ನಂದಿನಿ ಬಸವಾ ಎತ್ತರ ಜಿಗಿತ (ದ್ವಿತೀಯ ಸ್ಥಾನ), ಮಧುಶ್ರೀ ಐಲಿ ಎತ್ತರ ಜಿಗಿತ (ತೃತೀಯ ಸ್ಥಾನ), ಬಾಲಕಿಯರ ವಿಭಾಗದಲ್ಲಿ ಥ್ರೋಭಾಲ್ (ದ್ವಿತೀಯ ಸ್ಥಾನ) ಹೀಗೆ ಈ ವಿದ್ಯಾರ್ಥಿಗಳು ಭಾಗವಹಿಸಿ ಸಂಸ್ಥೆಗೆ ಕೀರ್ತಿಯನ್ನು ತಂದಿರುತ್ತಾರೆ. ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಲೋಕನಾಥ ಬಿ. ಕಬಾಡಿ, ಚೇರಮನರಾದ ಜಿ.ವಿ. ಬಸವಾ, ವೈಸ್ ಚೇರಮನ್‍ರಾದ ದತ್ತು ಯು. ಪವಾರ ಹಾಗೂ ಶಾಲೆಯ ಆಡಳಿತ ಮಂಡಳಿಯವರು, ಶಾಲೆಯ ಮುಖ್ಯೋಪಾಧ್ಯಾಯನಿಯರಾದ ಶ್ರೀಮತಿ ಎಸ್.ಡಿ. ಬೆನಕಲ್ ಮತ್ತು ಶ್ರೀಮತಿ ಸಿ.ಎಸ್. ಹವಳದ ಹಾಗೂ ಶಾಲೆಯ ಸಹ ಶಿಕ್ಷಕರು ಹರ್ಷ ವ್ಯಕ್ತಪಡಿಸಿದ್ದಾರೆ.
More Stories
ಪತ್ರಕರ್ತ ರಾಜೀವ ಕಿದಿಯೂರುಗೆ ಸಿರಿಗನ್ನಡ ಸಿರಿ ಪ್ರಶಸ್ತಿ ಪ್ರದಾನ
ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ವಾಲ್ಮೀಕಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ
ಮಾಜಿ ಸೈನಿಕರಿಂದ ಪಿಎಸ್ಐ ಲಕ್ಷ್ಮಪ್ಪ ಆರಿಗೆ ಸನ್ಮಾನ