ಗದಗ-ಮುಳಗುಂದ,: ಸ್ಥಳೀಯ ಅಂಜುಮನ್- ಏ -ಇಸ್ಲಾಂ ಸಂಸ್ಥೆ ಮುಳಗುಂದ ಪಟ್ಟಣದ ಕಮೀಟಿಯ ಚುನಾವಣೆ ಅಂಗವಾಗಿ ಖಿದ್ಮತ್-ಎ-ಮಿಲ್ಲತ್ ಗ್ರೂಪ್‍ನ ವತಿಯಿಂದ ಮಹತ್ವದ ಪಂಚ ಗ್ಯಾರಂಟಿಯನ್ನು ಯೋಜನೆಗಳನ್ನು ಪಟ್ಟಣದ ಹಿರಿಯರು ಹಾಗೂ ಮುಖಂಡರು ಬಿಡುಗಡೆ ಮಾಡಿದರು.
ಪಂಚ ಗ್ಯಾರಂಟಿ ಯೋಜನೆಗಳಾದ ಮುಸ್ಲಿಂ ಸಮುದಾಯದ ಜನಗಣತಿ, ಅಂಜುಮನ್ ಬೈಲಾ ತಿದ್ದುಪಡಿ, ಉರ್ದು ಸರಕಾರಿ ಶಾಲಾ ಮಕ್ಕಳಿಗೆ ಬಸ ವ್ಯವಸ್ಥೆ, ಜಶ್ನೆ-ಏ-ಈದ ಮಿಲಾದುನ್ನಬಿ ಸಂಭ್ರಮಾಚರಣೆ, ಬಡ ಮಕ್ಕಳ ಶೈಕ್ಷಣಿಕ ದತ್ತು ಮತ್ತು ಅತಿ ಬಡ ಹೆಣ್ಣು ಮಕ್ಕಳ ಮದುವೆ, ಈ ಪಂಚ ಯೋಜನೆಗಳು ಮುಸ್ಲಿಂ ಸಮುದಾಯದ ಜನರ ಅಭಿವೃದ್ಧಿ ಹಾಗೂ ಸಮಾಜದ ಅಭಿವೃದ್ಧಿಯ ಕುರಿತಂತೆ ಮಾಡಲಾಗಿದ್ದು, ಈ ಯೋಜನೆಗಳನ್ನು ಜಾರಿಗೆ ತರುವುದು ನಮ್ಮ ಜವಾಬ್ದಾರಿಯಾಗಿದೆ. ಆದ್ದರಿಂದ ತಾವುಗಳು ತಮ್ಮ ಮತಗಳನ್ನು ನಮಗೆ ನೀಡಿ ಸಂಪೂರ್ಣ ಬಹುಮತದಿಂದ ಆರಿಸಿ ತರಬೇಕೆಂದು ಸಮದಾಯದ ಮತದಾರ ಬಾಂಧವರಲ್ಲಿ ಕೇಳಿಕೊಳ್ಳುತ್ತೇವೆ.
ಈ ಸಂದರ್ಭದಲ್ಲಿ ಹಿರಿಯರಾದ ವಿಜಯಕುಮಾರ ನೀಲಗುಂದ, ಅಶೋಕ ಹುಣಸಿಮರದ, ಪಕ್ರುಸಾಬ ಇಮಾಮಸಾಬ ಅಬ್ದುಲಖಾದರ ದುರ್ಗಿಗುಡಿ ಹಚ,ಎಂ, ನದ್ದೀಮುಲ್ಲಾ ಇಮಾಮಸಾಬ ಖವಾಸ ಇಬ್ರಾಹಿಂಸಾಬ ಹಣಗಿ ಮುನ್ನಾ ದುರ್ಗಿಗುಡಿ ಮುಸ್ತಾಕ ಅಕ್ಕಿ ಜಿಲಾನಿ ಮಾಬುಸಬಾನಿ ಮುಜಾವರ ಚಾಂದಸಾಬ ಅಕ್ಕಿ ಶರೀಪಸಾಬ ಒಂಟಿ ಇಮಾಮಹುಸೇನ ಮುಜಾವರ ಡಿ ಡಿ ಮುಜಾವರ ಹಸನಸಾಬ ಹೊಸೂರ ಹಾಗೂ ವಿವಿಧ ಜಮಾತಿನ ಗುರುಹಿರಿಯರು ಭಾಗವಹಿಸಿದ್ದರು.
More Stories
ಪತ್ರಕರ್ತ ರಾಜೀವ ಕಿದಿಯೂರುಗೆ ಸಿರಿಗನ್ನಡ ಸಿರಿ ಪ್ರಶಸ್ತಿ ಪ್ರದಾನ
ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ವಾಲ್ಮೀಕಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ
ಮಾಜಿ ಸೈನಿಕರಿಂದ ಪಿಎಸ್ಐ ಲಕ್ಷ್ಮಪ್ಪ ಆರಿಗೆ ಸನ್ಮಾನ