December 23, 2024

AKSHARA KRAANTI

AKSHARA KRAANTI




ಸಾರಿಗೆ ಸಂಸ್ಥೆಯ ಸಿಬ್ಬಂದಿಗಳ ನಿವೃತ್ತಿ : ಬಿಳ್ಕೊಡುಗೆ ಸಮಾರಂಭ

ಗಂಗಾವತಿ,: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಗಂಗಾವತಿ ಘಟಕದ ನಿವೃತ್ತಿಯಾದ ಮೂವರು ಸಿಬ್ಬಂದಿಗಳನ್ನು ಬಿಳ್ಕೋಡಲಾಯಿತು.

ಸಿಬ್ಬಂದಿಗಳಾದ ಬಾಲಕೃಷ್ಣ ದೇಸಾಯಿ, ಪರಶುರಾಮ ಹಾಗೂ ಬಸವರಾಜ ಈ ಮೂವರು ಗುರುವಾರ ನಿವೃತ್ತಿಗೊಂಡ ಹಿನ್ನೆಲೆಯಲ್ಲಿ ಸಾರಿಗೆ ಘಟಕದ ಆವರಣದಲ್ಲಿ ಘಟಕಾಧಿಕಾರಿ ಸುಶೀಲಾ ಅವರ ಅಧ್ಯಕ್ಷತೆಯಲ್ಲಿ ಬೀಳ್ಕೊಡಲಾಯಿತು.

ನಂತರ ಸುಶೀಲಾ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಘಟಕದ ಮೂವರು ಸಿಬ್ಬಂದಿಗಳು ನಿವೃತ್ತಿಕೊಳ್ಳುತ್ತಿರುವುದು ಒಂದು ಕಡೆ ದುಃಖ, ಮತ್ತೊಂದು ಕಡೆ ಸಂತಸ ಎನಿಸುತ್ತಿದೆ. ತಮ್ಮ ವೃತ್ತಿ ಜೀವನದಲ್ಲಿ ಯಾವುದೇ ರೀತಿಯ ಕಪ್ಪು ಚುಕ್ಕೆ ಬಾರದಂತೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿ, ಸಾರಿಗೆ ಸಂಸ್ಥೆಯೇ ತಮ್ಮ ಬದುಕಿನ ಉಸಿರೆಂದು ಭಾವಿಸಿ ಅತ್ಯಂತ ಪ್ರಾಮಾಣಿಕತೆಯಿಂದ ನಿಷ್ಠೆಯಿಂದ ಸೇವೆ ಸಲ್ಲಿಸುತ್ತ ಬಂದಿದ್ದ ನಮ್ಮ ಸಿಬ್ಬಂದಿ ವರ್ಗದವರಿಗೆ ನಿವೃತ್ತಿಯ ವಿಶ್ರಾಂತ ಜೀವನ ಸುಖಕರವಾಗಿರಲಿ ಎಂದರು.

ಇದೇ ವೇಳೆ ಸಾರಿಗೆ ಸಂಸ್ಥೆಯ ಬಾಲಕೃಷ್ಣ ದೇಸಾಯಿ ಅವರಿಗೆ ಶ್ರೀಮಠದ ಪರವಾಗಿ ನಾರಾಯಣರಾವ್ ವೈದ್ಯ ಹಾಗೂ ತಂಡದವರು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.

ನಂತರ ನಾರಾಯಣರಾವ್ ವೈದ್ಯ ಅವರು ಮಾತನಾಡಿ, ಬಾಲಕೃಷ್ಣ ದೇಸಾಯಿ ಅವರು ಆರ್ಥಿಕವಾಗಿ ಸದೃಢ ಆಗಿದ್ದರೂ ಸಹ ಉದ್ಯೋಗಂ ಪುರುಷ ಲಕ್ಷಣಂ ಎನ್ನುವಂತೆ ಸಾರಿಗೆ ಸಂಸ್ಥೆಗೆ ನೇಮಕಗೊಂಡು ಕಳೆದ 37 ವರ್ಷದಿಂದ ಸಾರ್ಥಕ ಸೇವೆಯನ್ನು ಯಶಸ್ವಿಗೊಳಿಸಿರುವುದು ಸಂತಸದಾಯಕವಾಗಿದೆ. ತಮ್ಮ ವೃತ್ತಿಯ ಜೊತೆಗೆ ಶ್ರೀಮಠದ ಸದಸ್ಯರಾಗಿ ವಿಶೇಷ ಸೇವೆ ಸಲ್ಲಿಸುತ್ತಿರುವುದು ನಮಗೆ ಹೆಮ್ಮೆ ಅನಿಸುತ್ತದೆ ಎಂದು ತಿಳಿಸಿದರು.

ಬಳಿಕ ಬಾಲಕೃಷ್ಣ ದೇಸಾಯಿ, ಹಾಗೂ ಇತರರು ತಮ್ಮ ಸೇವೆಯನ್ನು ಕುರಿತು ಮಾತನಾಡಿದರು.

ಈ ಸಂದರ್ಭದಲ್ಲಿ ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ದೇಸಾಯಿ ಅವರ ಪರಿವಾರದವರು ಉಪಸ್ಥಿತರಿದ್ದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!