ಗಂಗಾವತಿ,: ತಮ್ಮ ಮನೆ ಕೆಲಸ ಮಾಡುವವರಿಗೂ ವೇದಿಕೆ ಮುಂಭಾಗದ ಆನೆಗುಂದಿ ಉತ್ಸವ ವಿಕ್ಷಿಸಲು ಸ್ವತಃ ತಮ್ಮ ಕಾರಿನಲ್ಲಿ ಕರೆ ತಂದ ಐಎಎಸ್ ಅಧಿಕಾರಿ, ಯಾರೆಂದರೆ, ಅವರೇ ಕೊಪ್ಪಳ ಜಿಲ್ಲಾ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆಯೆ.
ಹೌದು, ಮಂಗಳವಾರ ಆನೆಗುಂದಿ ಉತ್ಸವದ ಸಮಾರೋಪ ಸಮಾರಂಭ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆಯ ಅವರು ತಮ್ಮ ಮನೆಯಲ್ಲಿ ಕೆಲಸ ಮಾಡುವವರಿಗೆ ಸ್ವತಃ ತಮ್ಮ ಕಾರಿನಲ್ಲಿ ಸಂಬಂಧಿಕರಂತೆ ಕರೆ ತಂದು ಅವರನ್ನು ವೇದಿಕೆಯ ಮುಂಭಾಗ ಕೂಡಿಸಲು ಗೃಹರಕ್ಷಕದವರಿಗೆ ತಿಳಿಸಿದರು.
ಸ್ವತಃ ಸಾಮಾನ್ಯರಂತೆ ಕಾರಿನಿಂದ ಕೆಳಗಿಳಿದು ರಸ್ತೆಯಲ್ಲಿ ಅವರಿಗೆ ವೇದಿಕೆಗೆ ಹೋಗುವಂತೆ ಸೂಚಿಸಿ ಹೋದರು.
ಇದನ್ನು ನೋಡುಗರು ಯಾರಿವರು ಎನ್ನುವಂತೆ ಆಶ್ಚರ್ಯದಿಂದ ಗಮನಿಸಿದ ಘಟನೆ ಆನೆಗುಂದಿ ಉತ್ಸವದಲ್ಲಿ ನಡಿದಿದೆ. ಇದು ಅವರ ಮಾನವೀಯತೆಯ ಸರಳ ವ್ಯಕ್ತಿತ್ವದ ಗುಣ ಇರುವ ಒಬ್ಬ ಐಎಎಸ್ ಅಧಿಕಾರಿಯ ಈ ಕಾರ್ಯ ಎಲ್ಲಡೆ ಪ್ರಶಂಸೆಗೆ ವ್ಯಕ್ತವಾಗಿದೆ.
More Stories
ಸಾರಿಗೆ ಸಂಸ್ಥೆಯ ಸಿಬ್ಬಂದಿಗಳ ನಿವೃತ್ತಿ : ಬಿಳ್ಕೊಡುಗೆ ಸಮಾರಂಭ
371(ಜೆ) ಅನುಷ್ಠಾನಕ್ಕೆ ಹಿನ್ನಡೆ : ಶಾಸಕ ಜನಾರ್ದನ್ ರೆಡ್ಡಿ
ಮನಸಾಕ್ಷಿ ಅನುಗುಣವಾಗಿ ಸುದ್ದಿ ಬಿತ್ತರಿಸಿ