ಶಾಸಕರಾದ ಗಾಲಿ ಜನಾರ್ಧನ ರೆಡ್ಡಿ ಹೇಳಿಕೆ
ಗಂಗಾವತಿ,: ಸಮಾಜದಲ್ಲಿ ಸರಿ, ತಪ್ಪುಗಳು ನಡೆಯುತ್ತವೆ, ಪತ್ರಕರ್ತರು ಮನಸಾಕ್ಷಿ ಅನುಗುಣವಾಗಿ ಸತ್ಯಾಸತ್ಯತೆ ವರದಿ ಬರೆಯಬೇಕು ಎಂದು ಶಾಸಕರಾದ ಗಾಲಿ ಜನಾರ್ಧನ ರೆಡ್ಡಿ ಅವರು ಹೇಳಿದರು.
ತಾಲೂಕು ಪಂಚಾಯತ್ ಮಂಥನ ಸಭಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಘಟಕದಿಂದ ಭಾನುವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಪತ್ರಕರ್ತರು ಯಾವುದೇ ಸುಳ್ಳು ಸುದ್ದಿ ನಂಬಿ ಬರೆಯಬಾರದು, ನೈಜ ಸುದ್ದಿಗಳನ್ನು ಬಿತ್ತರಿಸಬೇಕು ಎಂದರು.
ಈ ಹಿಂದೆ ನಾನು ಕೂಡ ಬಳ್ಳಾರಿ ಜಿಲ್ಲೆಯಲ್ಲಿ ಈ ನಮ್ಮ ಕನ್ನಡನಾಡು ದಿನ ಪತ್ರಿಕೆ ಸಂಪಾದಕನಾಗಿ ಕೆಲಸ ಮಾಡಿರುವ ಹೆಮ್ಮೆ ಇದೆ ಎಂದರು.ಗಂಗಾವತಿ ಪತ್ರಿಕಾ ಭವನ ಪಕ್ಕದಲ್ಲಿ ನಿರ್ಮಾಣ ಆಗುತ್ತಿರುವ ಸಂಘದ ಗ್ರಂಥಾಲಯ ನಿರ್ಮಾಣಕ್ಕೆ 5 ಲಕ್ಷ ರೂ. ಅನುದಾನ ನೀಡಲಾಗುವುದು. ಜೊತೆಗೆ ಪತ್ರಕರ್ತರಿಗೆ ನಿವೇಶನ ಹಾಗೂ ಮನೆ ನಿರ್ಮಾಣಕ್ಕೆ ಯೋಜನೆ ರೂಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ವಿದ್ಯಾನಿಕೇತನ ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ನೆಕ್ಕಂಟಿ ಸೂರಿಬಾಬು ಮಾತನಾಡಿ, ಸಾಮಾಜಿಕ ಜಾಲತಾಣಗಳ ಅಬ್ಬರದಲ್ಲೂ ಮುದ್ರಣ ಮಾಧ್ಯಮ ನಂಬಿಕೆ, ವಿಶ್ವಾಸ, ಜೊತೆಗೆ ತನ್ನ ಓದುಗರನ್ನು ಉಳಿಸಿಕೊಂಡಿದೆ. ಕೈಗಾರಿಕೆ, ಶೈಕ್ಷಣಿಕ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಪತ್ರಿಕೆಗಳ ಪಾತ್ರ ಹೆಚ್ಚಿದೆ ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷರಾದ ನಾಗರಾಜ ಇಂಗಳಿಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಪತ್ರಿಕಾ ಭವನ ಹಾಗೂ ಗ್ರಂಥಾಲಯಕ್ಕೆ ಅನುದಾನ ನೀಡಬೇಕು. ಪತ್ರಕರ್ತರಿಗೆ ನಿವೇಶನ ಹಾಗೂ ಮನೆ ನಿರ್ಮಾಣ ಮಾಡಿಕೊಡಬೇಕು. ಭವನದಲ್ಲಿ ಸ್ವಚ್ಛತಾ ಕಾರ್ಯ ಮಾಡುವ ಖಾಜಾಬೀ ಅವರಿಗೆ ನಿವೇಶನ ನೀಡುವಂತೆ ಶಾಸಕರಿಗೆ ಮನವಿ ಮಾಡಿದರು.
ಕುವೆಂಪು ಕನ್ನಡ ಭಾಷಾ ಭಾರತಿ ಪ್ರಾಧಿಕಾರದ ಸದಸ್ಯರಾದ
ಜಾಜಿ ದೇವೇಂದ್ರಪ್ಪ ಅವರು, ಕರ್ನಾಟಕದಲ್ಲಿ ಪತ್ರಿಕೋಧ್ಯಮ ನಡೆದು ಬಂದ ದಾರಿ ಹಾಗೂ ಪ್ರಸ್ತುತ ಎದುರಿಸುತ್ತಿರುವ ಸವಾಲುಗಳ ಕುರಿತು ಉಪನ್ಯಾಸ ನೀಡಿದರು.ಪ್ರಮುಖರಾದ ಜೋಗದ ನಾರಾಯಣಪ್ಪ ನಾಯಕ, ಕಲ್ಯಾಣಂ ಜಾನಕಿರಾಮ್, ವೆಂಕಟೇಶ ಜಿ. ಅಮರಜ್ಯೋತಿ, ಜಗನ್ನಾಥ ಆಲಪಂಲ್ಲಿ, ರವಿಚೇತನ ರೆಡ್ಡಿ, ಹಿರಿಯ ಪತ್ರಕರ್ತರಾದ ಜೋಗದ ಕೃಷ್ಣಪ್ಪ ನಾಯಕ, ದೇವರಾಜ, ಎಂ.ಜೆ.ಶ್ರೀನಿವಾಸ, ವಿಶ್ವನಾಥ ಬೆಳಗಲ್ ಮಠ, ಚಂದ್ರಶೇಖರ ಮುಕ್ಕುಂದಿ, ವಿ.ಎಸ್. ಪಾಟೀಲ್, ಹರೀಶ್ ಕುಲಕರ್ಣಿ, ಸುದರ್ಶನ ವೈದ್ಯ, ಶಿವಪ್ಪ ನಾಯಕ, ಕೆ.ಎಂ.ಶರಣಯ್ಯಸ್ವಾಮಿ, ವೆಂಕಟೇಶ ಮಹಾಂತ,ವೆಂಕಟೇಶ ಉಪ್ಪಾರ,ಜೋಗದ ರಮೇಶ, ಮಂಜುನಾಥ ಹೊಸ್ಕೇರಿ, ಮಂಜುನಾಥ ಗುಡ್ಲಾನೂರು, ದಿವಾಕರ, ಹನುಮೇಶ ಬಟಾರಿ, ದಶರಥ, ಮಲ್ಲಿಕಾರ್ಜುನ ಗೊಟೂರು, ಗಾದಿಲಿಂಗಪ್ಪ ನಾಯಕ್, ಅಕ್ಷಯ, ಟಾಕಪ್ಪ, ಶರಣಪ್ಪ ಸೇರಿದಂತೆ ಇತರರು ಇದ್ದರು.
More Stories
ಸಾರಿಗೆ ಸಂಸ್ಥೆಯ ಸಿಬ್ಬಂದಿಗಳ ನಿವೃತ್ತಿ : ಬಿಳ್ಕೊಡುಗೆ ಸಮಾರಂಭ
371(ಜೆ) ಅನುಷ್ಠಾನಕ್ಕೆ ಹಿನ್ನಡೆ : ಶಾಸಕ ಜನಾರ್ದನ್ ರೆಡ್ಡಿ
SSLC Result : ಶ್ರೀರಾಮನಗರದ ದೊನೆಪೂಡಿ ಶಾಲೆ ಉತ್ತಮ ಸಾಧನೆ