December 23, 2024

AKSHARA KRAANTI

AKSHARA KRAANTI




ಮಹಾನ್ ವ್ಯಕ್ತಿಗಳು ತಿರುವು ಪಡೆದುಕೊಂಡು ಸಾಧನೆ ಮಾಡಿದ್ದಾರೆ: ಶಿವರಾಜ ಗುರಿಕಾರ

ಕೊಪ್ಪಳ,: ಸಿ.ವಿ ರಾಮನ್, ಐನ್‍ಸ್ಟೀನ್, ಮೇರಿ ಕ್ಯೂರಿ ನಂತಹ ಎಲ್ಲ ಮಹಾನ್ ವ್ಯಕ್ತಿಗಳು ತಿರುವುಗಳನ್ನು ಪಡೆದುಕೊಂಡು ಸಾಧನೆಗಳನ್ನು ಮಾಡಿದ್ದಾರೆ ಎಂದು ಗಂಗಾವತಿಯ ಸರಕಾರಿ ಪದವಿ ಮಹಾವಿದ್ಯಾನಿಲಯದ ಭೌತಶಾಸ್ತ್ರದ ಪ್ರಾಧ್ಯಾಪಕ ಶಿವರಾಜ ಗುರಿಕಾರ ಹೇಳಿದರು.
ಮಂಗಳವಾರ ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದ ಪ್ರಥಮ ನೋಬೆಲ್ ಪಾರಿತೋಷಕ ಪಡೆದ ಸಿ.ವಿ.ರಾಮನ್ ಅವರ ರಾಮನ್ ಎಫೆಕ್ಟ್ ಸಂಶೋಧನೆಯ ನೆನುಪಿಗಾಗಿ ಪ್ರತಿ ವರ್ಷ ಫೆ.28 ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನಾಗಿ ಆಚರಿಸುತಿದ್ದಾರೆ. ಸಿವಿ.ರಾಮನ್ ಅವರು ಎರಡು ಸಾವಿರ ಸಂಶೋಧನೆಗಳನ್ನು ಲೇಖನಗಳನ್ನು ಬರೆದಿದ್ದಾರೆ. ಅವರು ಬೆಳಕಿನ ಪ್ರಕರತೆಯ ಕುರಿತು ಮತ್ತು ಬೆಳಕಿನ ವಿಭಜನೆಯ ಕುರಿತು ಸಂಶೋಧನೆ ಮಾಡಿದ್ದಾರೆ. ರಾಮನ್ ಎಫೆಕ್ಟ್ ಸಂಶೋಧನೆದಿಂದ ಲೇಸರ್ ವಿಕೀರಣಗಳನ್ನು ಕಂಡುಹಿಡಿದಿದ್ದಾರೆ. ಈ ಲೇಸರ್‍ದಿಂದ ಅಸ್ಪತ್ರೆಗಳಲ್ಲಿ ಕಣ್ಣು ಮತ್ತು ಹೃದಯ ಸೇರಿದಂತೆ ಇನ್ನಿತರ ಅರೋಗ್ಯದ ಚಿಕೆತ್ಸೆಗಳನ್ನು ಮಾಡುತ್ತಿದ್ದಾರೆ. ಯಾರೂ ಮನಸ್ಸುನ್ನು ನಿಗ್ರಹಿಸುತ್ತಾರೋ ಅವರು ಇಡೀ ಜಗತ್ತನ್ನು ನಿಗ್ರಹಿಸುತ್ತಾರೆ. ಜೀವನದಲ್ಲಿ ಒಳಗೊಳುವಿಕೆ ಇರಬೇಕು. ಒಳಗೋಳ್ಳುವಿಕೆ ಇದ್ದಾಗ ಮಾತ್ರ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದರು.
ಕಾಲೇಜಿನ ಭೂಗೋಳಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ಅಂತರಿಕ ಗುಣಮಟ್ಟ ಭರವಸೆಯ ಕೋಶದ ಸಂಚಾಲಕರಾದ ಡಾ.ಅಶೋಕ ಕುಮಾರ ಮಾತನಾಡಿ, ರಾಮನ್ ಎಫೆಕ್ಟ್ ಸಂಶೋಧನೆದಿಂದ ನಮ್ಮ ಭೂಗೋಳಶಾಸ್ತ್ರಕ್ಕೆ ಬಹಳ ಸಹಾಯವಾಗಿದೆ. ಉಪಗ್ರಹ ಆದಾರಿತದಿಂದ ನಕ್ಷೆ, ಭೂಪಟ ಮತ್ತು ನೀರು ಇನ್ನಿತರ ಚಿತ್ರಗಳನ್ನು ತೆಗೆಯಲು ಮತ್ತ ಅವುಗಳನ್ನು ಕಂಡುಹಿಡಿಯಲು ಭೂಗೋಳಶಾಸ್ತ್ರ ವಿದ್ಯಾರ್ಥಿಗಳಿಗೆ ಬಹಳ ಅನುಕೂಲವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕಾಲೇಜಿನ ದೈಹಿಕ ಶಿಕ್ಷಣದ ಭೋಧಕರಾದ ಡಾ.ಪ್ರದೀಪ್ ಕುಮಾರ್ ಮಾತನಾಡಿ, ವಿಜ್ಞಾನವೆಂದರೆ ಕಠೀಣವಾದ ಕೆಲಸ. ಶ್ರಮಪಟ್ಟು ಆಧ್ಯಯನ ಮಾಡಿದರೆ ನೀವು ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ. ನೀವು ಗುರಿಯಿಟ್ಟಕೊಳ್ಳಬೇಕು. ಇದಕ್ಕೆ ತಕ್ಕಂತೆ ಪ್ರಯತ್ನ ಮಾಡಬೇಕು ಎಂದರು.

ಕಾರ್ಯಕ್ರಮದ ಆಧ್ಯಕ್ಷತೆಯನ್ನು ವಹಿಸಿ ಕಾಲೇಜಿನ ಪ್ರಾಚಾರ್ಯ ಡಾ.ಗಣಪತಿ ಲಮಾಣಿ ಮಾತನಾಡಿ, ಕಾಲೇಜಿನಲ್ಲಿ ವಿಜ್ಞಾನ ವಿಭಾಗ ಪ್ರಾರಂಭ ಮಾಡಿರುವುದರಿಂದ ಬಡ ವಿದ್ಯಾರ್ಥಿಗಳಿಗೆ ಬಹಳ ಅನುಕೂಲವಾಗಿದೆ. ವಿಜ್ಞಾನ ಎಂದರೆ ವಿಶೇಷವಾದ ಜ್ಞಾನ ಎಂದರ್ಥ. ಇದು ಸಮಾಜಕ್ಕೆ ಬಹಳ ಬೇಕಾದ ಜ್ಞಾನ. ಇಂದು ಕೃಷಿಯಲ್ಲಿ ವಿಜ್ಞಾನವನ್ನು ಬಳುಸುತ್ತಿದ್ದಾರೆ. ನೀವು ಉನ್ನತ ಶಿಕ್ಷಣವನ್ನು ಪಡೆದುಕೊಳ್ಳಬೇಕು. ಉನ್ನತ ಶಿಕ್ಷಣ ಪಡೆದರೆ ಸಮಾಜಕ್ಕೆ ಬಹಳ ಅನುಕೂಲ. ನೀವು ಸಮಾಜದಲ್ಲಿ ಒಳ್ಳೆಯ ಹೆಸರು ಪಡೆಯಬೇಕು. ಕಾಲೇಜಿಗೆ ಕೀರ್ತಿ ತರಬೇಕು ಎಂದರು.

ಕಾಲೇಜಿನ ಉಪನ್ಯಾಸಕರಾದ ಡಾ.ಹುಲಿಗೆಮ್ಮ, ಡಾ.ನರಸಿಂಹ. ಸುಮಿತ್ರಾ, ಶ್ರೀರಾಮ, ಸುಶ್ಮಾ ದೇಶಪಾಂಡೆ, ಯಶೋಧ, ಪಲ್ಲವಿ, ಮಂಜುಳ, ಆಶಾ, ವಿದ್ಯಾಜಂಗಿನ್, ಬಸವರಾಜು, ಬೊಮ್ಮನಾಳ ವಿರೂಪಾಕ್ಷಪ್ಪ ಮುತ್ತಾಳ ಸೇರಿದಂತೆ ಅನೇಕರು ಇದ್ದರು.
ಕಾರ್ಯಕ್ರಮದಲ್ಲಿ ಮೊದಲಿಗೆ ಗಿರಿಜ ಮತ್ತು ಶಿಲ್ಪಾ ಪ್ರಾರ್ಥಿಸಿ, ಭೂಮಿಕಾ ಸ್ವಾಗತಿಸಿ, ಸುಶ್ಮಾ ದೇಶಪಾಂಡೆ ನಿರೂಪಿಸಿ, ಸುನಿತಾ ವಂದಿಸಿದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!