December 23, 2024

AKSHARA KRAANTI

AKSHARA KRAANTI




ಹುಲಿಗೆಮ್ಮ ದೇವಿ ದಸರಾ ಮಹೋತ್ಸವ

ಅಕ್ಟೋಬರ್ 3 ರಿಂದ 12 ರವರೆಗೆ ವಿವಿಧ ಕಾರ್ಯಕ್ರಮಗಳು

ಅಕ್ಷರಕ್ರಾಂತಿ ನ್ಯೂಸ್

ಕೊಪ್ಪಳ,: ಹುಲಿಗೆಮ್ಮ ದೇವಿ ದೇವಸ್ಥಾನದ ಧಾರ್ಮಿಕ ದತ್ತಿ ಇಲಾಖೆಯಿಂದ ದಸರಾ ಮಹೋತ್ಸವ ಅಂಗವಾಗಿ ಅಕ್ಟೋಬರ್ 3 ರಿಂದ ಅಕ್ಟೋಬರ್ 12 ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಅ. 3 ರಂದು ಸಂಜೆ 06.30ಕ್ಕೆ ಘಟಸ್ಥಾಪನೆ ಅಂಗವಾಗಿ ದೇವಸ್ಥಾನದ ಸಿಬ್ಬಂದಿಯಿಂದ ಮಂಗಳವಾದ್ಯ ಹಾಗೂ ಕುಮಾರಿ ಮೀರಾ ಹಾಗೂ ತಂಡ, ಹೊಸಪೇಟೆ ಇವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಲಿವೆ.

ಅ. 4ರ ಸಂಜೆ 06.30ಕ್ಕೆ ಗೀತಪ್ರಿಯ ಮತ್ತು ಅಂಜಲಿ ಭರತನಾಟ್ಯ ಕಲಾ ಕೇಂದ್ರ ಹುಲಿಗಿ ಇವರಿಂದ ಭರತನಾಟ್ಯ ಹಾಗೂ ಕುಮಾರಶ್ಯಾಮ್ ಬಿ.ತಂದೆ ದುರುಗಪ್ಪ ಬಿ. ಸಾ.ಕೆಂಚಟನಹಳ್ಳಿ ಇವರಿಂದ ಯೋಗ ಕಾರ್ಯಕ್ರಮ ಹಾಗೂ ಸ್ಥಳೀಯ ಶಾಲಾ ಮಕ್ಕಳಿಂದ ವೈವಿಧ್ಯಮಯ ಕಾರ್ಯಕ್ರಮ ನಡೆಯಲಿವೆ.ಅ. 5 ರಂದು ಸಂಜೆ 06.30ಕ್ಕೆ ಶಾಲಿನಿ ಹೆಬ್ಬಾರ್, ನಾಟ್ಯನಾದ ಕಲಾ ಕೇಂದ್ರ ಹುಲಿಗಿ ಇವರಿಂದ ಭರತನಾಟ್ಯ, ಶಿವರಾಯಪ್ಪ ತಂದೆ ಬಸಪ್ಪ ಚೌಡ್ಕಿ ಸಾ. ತೆಗ್ಗಿಹಾಳ ಇವರಿಂದ ಚೌಡ್ಕಿ ಪದಗಳು ಹಾಗೂ ಸ್ಥಳೀಯ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಕೃತಿ ಹ್ಯಾಟಿ, ಹುಲಿಗಿ, ಖ್ಯಾತ ಸಂಗೀತ ಕಲಾವಿದರು ಇವರಿಂದ ಸುಗಮ ಸಂಗೀತ, ಶಕುಂತಲಾ ಬೆನ್ನಾಳ, ಭಾಗ್ಯನಗರ ಇವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿವೆ.

ಅ.6 ರಂದು ಸಂಜೆ 06.30ಕ್ಕೆ ನಾರಾಯಣಪ್ಪ ಯಾಡ, ಶಿರಿವಾರ, ಕರ್ನಾಟಕ ಜಾನಪದ ಸಾಂಸ್ಕೃತಿಕ ಕಲಾ ತಂಡ ಸಿಂಧನೂರು ಇವರಿಂದ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ.

ಅ.7 ರಂದು ಸಂಜೆ 06.30 ಗಂಟೆಗೆ (ಲಲಿತಾ ಪಂಚಮಿ) ರಾಮಚಂದ್ರಾಚಾರ್ಯರು, ಮೈಸೂರು ಇವರಿಂದ ಭಕ್ತಿಗೀತ ದರ್ಶನ ಬೆಳ್ಳಿ ಮಂಟಪದಲ್ಲಿ ಶ್ರೀ ದೇವಿಯರಿಗೆ ಶಾರ್ದೂಲ ವಾಹನ ಪೂಜೆ ನಡೆಯಲಿದೆ.

ಅ.8 ರಂದು ಸಂಜೆ 06.30 ಗಂಟೆಗೆ ಶ್ರೀಕಾಂತ ಬಾಕಳೆ ಮತ್ತು ತಂಡ ಹುಬ್ಬಳ್ಳಿ ಇವರಿಂದ ಸುಗಮ ಸಂಗೀತ ಕಾರ್ಯಕ್ರಮ ಬೆಳ್ಳಿ ಮಂಟಪದಲ್ಲಿ ಶ್ರೀ ದೇವಿಯವರಿಗೆ ಸಿಂಹ ವಾಹನ ಪೂಜೆ ನಡೆಯಲಿದೆ.ಅ.9 ರಂದು ಸಂಜೆ 06.30 ಗಂಟೆಗೆ (ಸರಸ್ವತಿ ಆವಾಹನೆ) ರಾಜಶೇಖರ್ ಹೆಬ್ಬಾರ್, ಯಕ್ಷಗಾನ ಕಲಾ ಕೇಂದ್ರ ಅಂಗಾರಕಟ್ಟೆ ಬ್ರಹ್ಮಾವರ ತಾಲೂಕಿನ ಉಡುಪಿ ಜಿಲ್ಲೆ ಇವರಿಂದ ಯಕ್ಷಗಾನ ಪ್ರದರ್ಶನ ಬೆಳ್ಳಿ ಮಂಟಪದಲ್ಲಿ ಶ್ರೀ ದೇವಿಯವರಿಗೆ ಮಯೂರ ವಾಹನ ಪೂಜೆ ನಡೆಯಲಿದೆ.

ಅ.10 ರಂದು ಸಂಜೆ 06.30 ಗಂಟೆಗೆ (ಸರಸ್ವತಿ ಪೂಜೆ, ದುರ್ಗಾಷ್ಟಮಿ) ಕನ್ನಡ ರಾಜ್ಯ ಪ್ರಶಸ್ತಿ ಪುರಸ್ಕೃತ ಜಗದೀಶ್ ಪುತ್ತೂರು ಇವರಿಂದ ಸಂಗೀತಗಾನ ಸಂಭ್ರಮ ಮತ್ತು ಬೆಳ್ಳಿ ಮಂಟಪದಲ್ಲಿ ಶ್ರೀ ದೇವಿಯವರಿಗೆ ಅಶ್ವ ವಾಹನ ಪೂಜೆ ನಡೆಯಲಿದೆ.

ಅ.11 ರಂದು ಸಂಜೆ 06.30 ಗಂಟೆಗೆ (ಮಹಾನವಮಿ, ಆಯುಧ ಪೂಜೆ) ಡಾ. ಬೇಲೂರು ರಘುನಂದನ್ ಬೆಂಗಳೂರು ಅವರ ನಿರ್ದೇಶನದ ‘ಮಾತಾ” ನಾಟಕ ಪ್ರದರ್ಶನ ಮತ್ತು ಬೆಳ್ಳಿ ಮಂಟಪದಲ್ಲಿ ಶ್ರೀ ದೇವಿಯವರಿಗೆ ಗಜವಾಹನ ಪೂಜೆ ನಡೆಯಲಿದೆ.

ಅ.12 ರಂದು ವಿಜಯದಶಮಿಯ ಪ್ರಯುಕ್ತ ಮಧ್ಯಾಹ್ನ 03.00 ಗಂಟೆಯಿಂದ ಶ್ರೀ ದೇವಿಯವರ ದಶಮಿ ದಿಂಡಿನ ಉತ್ಸವದೊಂದಿಗೆ ಶಮಿ ವೃಕ್ಷಕ್ಕೆ ತೆರಳಿ, ಶಮಿ ವೃಕ್ಷಕ್ಕೆ ಪೂಜೆ ಸಲ್ಲಿಸಲಾಗುವುದು. ನಂತರ ದೇವಸ್ಥಾನದಲ್ಲಿ ತೊಟ್ಟಿಲು ಸೇವೆ, ಮಹಾಮಂಗಳಾರತಿ, ಮಂತ್ರ ಪುಷ್ಪದೊಂದಿಗೆ ಕಾರ್ಯಕ್ರಮಗಳು ಮುಕ್ತಾಯಗೊಳ್ಳುತ್ತವೆ ಎಂದು ಹುಲಿಗೆಮ್ಮದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿಗಳಾದ ಎಂ.ಹೆಚ್.ಪ್ರಕಾಶ್‌ರಾವ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ವಾಲಿಬಾಲ್ ಪಂದ್ಯ : ಅಕ್ಟೋಬರ್ 7 ರಿಂದ 9 ರವರೆಗೆ ಹುಲಿಗಿಯ ಹಳೇ ತುಂಗಭದ್ರಾ ಪ್ರೌಢಶಾಲೆಯಲ್ಲಿ ಪುರುಷರ ಹಾಗೂ ಮಹಿಳೆಯರ ರಾಜ್ಯಮಟ್ಟದ ಮುಕ್ತ ಹೊನಲು-ಬೆಳಕಿನ ವಾಲಿಬಾಲ್ ಪಂದ್ಯಾವಳಿಗಳು ನಡೆಯಲಿವೆ ಎಂದು ಅವರು ತಿಳಿಸಿದ್ದಾರೆ.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!