ಕೊಪ್ಪಳ,: ಜಿಲ್ಲಾ ಗಾಣಿಗ ಸಂಘ ಕೊಪ್ಪಳ ವತಿಯಿಂದ ಸೆಪ್ಟಂಬರ್ 15ರಂದು ರವಿವಾರ ಕೊಪ್ಪಳ ನಗರದ ಹೊಸಪೇಟೆ ರಸ್ತೆಯ ಮಧುಶ್ರೀ ಗಾರ್ಡನ್ ನಲ್ಲಿ ಗಾಣಿಗ ಸಮಾಜದ ಅಂತರಾಜ್ಯ ವಧು-ವರರ ಗಾಣಿಗ ಸಮಾಜದ ಅಂತರರಾಜ್ಯ ವಧು ವರರ ದ್ವಿತೀಯ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಗಾಣಿಗ ಸಂಘದ ಅಧ್ಯಕ್ಷ ತೋಟಪ್ಪ ಕಾಮನೂರು ಹೇಳಿದರು.
ರವಿವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಗಾಣಿಗ ಸಮುದಾಯದ ಕರ್ನಾಟಕ, ಆಂಧ್ರ, ತೆಲಂಗಾಣ, ಗೋವಾ, ತಮಿಳುನಾಡು ಮತ್ತು ಮಹಾರಾಷ್ಟ್ರ , ಕೇರಳ ಅಂತರರಾಜ್ಯ ವಧು ವರರ ದ್ವಿತೀಯ ಸಮಾವೇಶ ಹಮ್ಮಿಕೊಳ್ಳುವ ಮಹತ್ವದ ಉದ್ದೇಶ ಹಿನ್ನೆಲೆಯಲ್ಲಿ ಜಿಲ್ಲಾ ಗಾಣಿಗರ ಸಂಘದ ಪೂರ್ವಭಾವಿ ಸಭೆಯಲ್ಲಿ ಸವಿಸ್ತಾರವಾಗಿ ಚರ್ಚಿಸಲಾಗಿತ್ತು, ಹೀಗಾಗಿ ಈ ವಧು ವರರ ಸಮಾವೇಶ ಹಮ್ಮಿಕೊಂಡಿದ್ದು ಸಮಾಜ ಬಾಂಧವರು ಈ ಸಮಾವೇಶ ಯಶಸ್ವಿಗೊಳಿಸಲು ಶ್ರಮಿಸಬೇಕು ಹಾಗೂ ಸಮಾವೇಶದಲ್ಲಿ ಭಾಗವಹಿಸಲಿಚ್ಚಿಸುವ ವಧು ವರರು ತಮ್ಮಗಳ ಮಾಹಿತಿಯವರ, ಒಂದು ಫೋಟೋ, ಪ್ರವೇಶ ಶುಲ್ಕವಾಗಿ 500 ರುಾ. ವ್ಯಾಟ್ಸಪ್ 9036676197 ಫೋನ್ ಪೇ ಮುಖಾಂತರ ಪಾವತಿಸಿ ತಮ್ಮಗಳ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಗಾಣಿಗ ಸಮಾಜದ ಗೌರವಾಧ್ಯಕ್ಷ ರುದ್ರಮುನಿ ಗಾಳಿ,ಸಮಾಜದ ಮುಖಂಡರಾದ ಮಹೇಶ್ ಹಳ್ಳಿ, ಉಮಾಪತಿ ಚೌದರಿ ಮುದ್ದೇಬಿಹಾಳ, ಡಾ. ಕೇಶವ ಕಾಬಾ ಉಪಸ್ಥಿತರಿದ್ದರು.
More Stories
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸರ್ಕಾರಿ ಶಾಲಾ ವಿದ್ಯಾರ್ಥಿಗಳು
ಬಿಎಸ್ ಪಿ ಸಂಘಟನೆ ಬೆಳೆಸಲು ಶ್ರಮಿಸಿ : ಕೃಷ್ಣಮೂರ್ತಿ
ಪರಿಸರ ಸಮತೋಲನಕ್ಕೆ ವನ್ಯಜೀವಿಗಳ ಪಾತ್ರ ಪ್ರಮುಖವಾಗಿದೆ : ಕೆ.ರಾಜಶೇಖರ ಹಿಟ್ನಾಳ