December 23, 2024

AKSHARA KRAANTI

AKSHARA KRAANTI




ಸಿಎನ್‌ಜಿ ಮದರ್ ಸ್ಟೇಷನ್ ಉದ್ಘಾಟನೆ

ಮೊದಲ ಸಿಎನ್‌ಜಿ ಮದರ್ ಸ್ಟೇಷನ್ ಕೊಪ್ಪಳದಲ್ಲಿ ಉದ್ಘಾಟನೆ ಪರಿಸರ ಸ್ನೇಹಿ ಸಾರಿಗೆಯನ್ನು ಪ್ರೋತ್ಸಾಹಿಸಲು ಹಾಗೂ ಕೊಪ್ಪಳ ನಗರವನ್ನು ಹೆಚ್ಚು ಸ್ವಚ್ಛವಾದ ಭವಿಷ್ಯದ ಕಡೆಗೆ ಒಯ್ಯಲು ಗ್ರೀನ್ ಕೊಪ್ಪಳ- ಸಿಎನ್‌ಜಿ ರ‍್ಯಾಲಿಯಲ್ಲಿ 35 ಕಿಂತ ಅಧಿಕ್ ಸಿಎನ್‌ಜಿ ವಾಹನಗಳು ಭಾಗವಹಿಸಿದ್ದವು

ಕೊಪ್ಪಳ, : ಭಾರತದಲ್ಲಿ ಮುಂಚೂಣಿಯ ನಗರ ಅನಿಲ ವಿತರಣಾ ಸಂಸ್ಥೆಯಾಗಿರುವ ಎಜಿ&ಪಿ ಪ್ರಥಮ್ ಈಗ ತನ್ನ ಮೊದಲ ಕಂಪನಿ ಮಾಲೀಕತ್ವದ, ಕಂಪನಿ ಕಾರ್ಯಾಚರಣೆ ನಡೆಸುವಂತಹ (ಕೊಕೊ) ಸಿಎನ್‌ಜಿ ಮದರ್ ಸ್ಟೇಷನ್ ಅನ್ನು ಕೊಪ್ಪಳದಲ್ಲಿ ಗ್ರೀನ್ ಕೊಪ್ಪಳ-ಸಿಎನ್‌ಜಿ
ಪೂಜ್ಯ ಶ್ರೀ ಗವಿಸಿದ್ಧೇಶ್ವರ ಸ್ವಾಮಿಜಿಗಳವರು ಉದ್ಘಾಟಿಸಿದರು.

ಹೆಚ್ಚು ಸ್ವಚ್ಛವಾದ ಸಂಚಾರ ಪರಿಹಾರಗಳು, ಶಕ್ತಿ ದಕ್ಷತೆಯ ಕೈಗಾರಿಕಾ ಮತ್ತು ವಾಣಿಜ್ಯ ಮೂಲಸೌಕರ್ಯಗಳನ್ನು ಪೋಷಿಸುವತ್ತ ಮತ್ತು ಈ ಪ್ರದೇಶಗಳಲ್ಲಿ ಮನೆಗಳಿಗೆ ಹೆಚ್ಚು ಸುರಕ್ಷಿತ ಅನಿಲ ಪೂರೈಕೆ ಕೈಗೊಳ್ಳುವತ್ತ ಇದು ಪ್ರಮುಖ ಹೆಜ್ಜೆಯಾಗಿದೆ.

ಹೊಸಪೇಟೆ-ಹುಬ್ಬಳ್ಳಿ ರಸ್ತೆಯ ಕೊಪ್ಪಳ ಬೈಪಾಸ್‌ನಲ್ಲಿ ನೂತನ ವಾಣಿಜ್ಯೀಕೃತ ಸಿಎನ್‌ಜಿ ಮದರ್ ಸ್ಟೇಷನ್ ದೊಡ್ಡ ಪ್ರಮಾಣದ ಸಿಎನ್‌ಜಿಯನ್ನು ಇಂಧನ ಸ್ಟೇಷನ್‌ಗಳಿಗೆ ಕ್ಯಾಸ್ಕೇಡ್ ಫಿಲ್ಲಿಂಗ್‌ಗಳ ಮೂಲಕ ಪೂರೈಸಲು ಸಜ್ಜಾಗಿದೆ.

ನಗರಗಳು ಮತ್ತು ಗ್ರಾಮೀಣ ಕ್ಷೇತ್ರಗಳಿಗೆ ಹಸಿರು ಶಕ್ತಿಯ ಪರಿಹಾರವನ್ನು ಇದು ಪೂರೈಸುತ್ತಿದೆ. ಎಜಿ&ಪಿ ಪ್ರಥಮ್‌ನಿಂದ ಈ ಸೌಲಭ್ಯ ಕರ್ನಾಟಕದಲ್ಲಿ ಎರಡನೇ ಸಿಎನ್‌ಜಿ ಮದರ್ ಸ್ಟೇಷನ್ ಆಗಿದ್ದು, ಎಲ್ಲೆಡೆ ಸಮಗ್ರ ನಗರ ಗ್ಯಾಸ್ ವಿತರಣೆ ಮೂಲಸೌಕರ್ಯ ನಿರ್ಮಿಸುವಲ್ಲಿ ಸಂಸ್ಥೆಯ ಬದ್ಧತೆಯನ್ನು ಒತ್ತಿ ಹೇಳುತ್ತದೆ. ಕೊಪ್ಪಳದಲ್ಲಿ 5 ಸಿಎನ್‌ಜಿ ಸ್ಟೇಷನ್‌ಗಳು ಮತ್ತು ನೆರೆಯ ಬಾಗಲಕೋಟೆಯಲ್ಲಿ 14 ಹಾಗೂ ವಿಜಯಪುರದಲ್ಲಿ 5, ಅನಂತಪುರ ಪ್ರದೇಶದಲ್ಲಿ 2 ಸಿಎನ್‌ಜಿ ಸ್ಟೇಷನ್‌ಗಳಿಗೆ ಈ ಮದರ್ ಸ್ಟೇಷನ್ ಬೆಂಬಲ ನೀಡುತ್ತಿದೆ. ಕೊಪ್ಪಳ ಜಿಲ್ಲೆಯಲ್ಲಿ 4೦,೦೦೦ಕ್ಕೂ ಹೆಚ್ಚಿನ ಸಂಖ್ಯೆಯ ಮನೆಗಳಿಗೆ ಈ ಸಿಎನ್‌ಜಿ ಸ್ಟೇಷನ್ ಅನುಕೂಲ ಮಾಡಿಕೊಡಲಿದೆ. ಗಂಗಾವತಿ, ಕುಷ್ಟಗಿ, ಕಾರಟಗಿ, ತಾವರೆಗೆರೆ, ಯೆಲಬುರ್ಗ, ಕುಕನೂರು ತಾಲೂಕುಗಳನ್ನು ಈ ಯೋಜನೆ ಒಳಗೊಂಡಿದ್ದು, ಈ ಪ್ರದೇಶದಲ್ಲಿ 5೦ಕ್ಕೂ ಹೆಚ್ಚಿನ ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ.2೦ ಕಿಲೋ ಮೀಟರ್‌ನ ಗ್ರೀನ್ ಕೊಪ್ಪಳ -ಸಿಎನ್‌ಜಿ ರ‍್ಯಾಲಿಯನ್ನು ಒಳಗೊಂಡಿದ್ದು, ಇದರಲ್ಲಿ 35 ಕಿಂತ ಅಧಿಕ್ ಸಿಎನ್‌ಜಿ ಚಾಲಿತ ವಾಹನಗಳು ಕಾಣಿಸಿಕೊಂಡಿದ್ದು ಸಾಂಪ್ರದಾಯಿಕ ಇಂಧನಗಳಿಗೆ ಪರಿಸರಸ್ನೇಹಿ ಬದಲಿ ಇಂಧನವಾಗಿ ಸಿಎನ್‌ಜಿಯ ಲಾಭಗಳನ್ನು ಪ್ರೋತ್ಸಾಹಿಸಲಿವೆ.
ಈ ರ‍್ಯಾಲಿ ಎಜಿ&ಪಿ ಪ್ರಥಮ್ ಮದರ್ ಸ್ಟೇಷನ್‌ನಿಂದ ಆರಂಭವಾಗಿ ಪಟ್ಟಣದ ಪ್ರಮುಖ ಪ್ರದೇಶಗಳಾದ ಡಿಸಿ ಕಚೇರಿ, ಬಸವೇಶ್ವರ್ ಸರ್ಕಲ್, ಗವಿಮಠ ರಸ್ತೆ, ಗಡಿಯಾರ ಕಂಬ, ಜವಹರ ರಸ್ತೆ, ಅಶೋಕ್ ಸರ್ಕಲ್, ಬಸ್‌ಸ್ಟಾಂಡ್, ಬನ್ನಿಕಟ್ಟಿ, ಅಶೋಕ್ ಸರ್ಕಲ್, ಗುಂಜ್ ಸರ್ಕಲ್, ಡಿಸಿ ಕಚೇರಿ, ಮದರ್‌ಸ್ಟೇಷನ್(ಅಂತಿಮ ಸ್ಥಳ)ಗಳಲ್ಲಿ ಸಾಗಿ ಆರಂಭದ ಸ್ಥಳದಲ್ಲಿಯೇ ಮುಕ್ತಾಯಗೊಂಡಿತು.

ಈ ಮೈಲುಗಲ್ಲು ಕುರಿತು ಎಜಿ&ಪಿ ಪ್ರಥಮ್‌ನ ಉಪಪ್ರಧಾನ ವ್ಯವಸ್ಥಾಪಕ(ರಾಜ್ಯ ಸಮನ್ವಯಕಾರರು -ಸಾರ್ವಜನಿಕ ಸಂಪರ್ಕ)ರಾದ ಸುನೀಲ್ ರಾಯಂಕಿ ಅವರು ಮಾತನಾಡಿ, “ರಾಜ್ಯದಲ್ಲಿ ಎರಡನೇಯದಾದ ಹಾಗೂ ಕೊಪ್ಪಳದಲ್ಲಿ ಮೊದಲನೇಯದಾದ ಸಿಎನ್‌ಜಿ ಮದರ್ ಸ್ಟೇಷನ್‌ನ ಉದ್ಘಾಟನೆ ದೃಢವಾದ ಹಸಿರು ಶಕ್ತಿ ಮೂಲಸೌಕರ್ಯವನ್ನು ಸ್ಥಾಪಿಸುವಲ್ಲಿ ನಮ್ಮ ಗಂಭೀರ ಬದ್ಧತೆಯನ್ನು ಒತ್ತಿ ಹೇಳುತ್ತದೆಯಲ್ಲದೆ, ಇದು ಕರ್ನಾಟಕಕ್ಕೆ ಅಪಾರ ಲಾಭ ನೀಡಲಿದೆ.

ಪ್ರದೀಪ್ ಭಟ್ ಅವರು ಮಾತನಾಡಿ, ಕೊಪ್ಪಳದಲ್ಲಿ ಉನ್ನತ ತಂತ್ರಜ್ಞಾನದ ಸೌಲಭ್ಯವನ್ನು ಸ್ಥಾಪಿಸುವತ್ತ ನಾವು ಪ್ರಮುಖವಾಗಿ ಗಮನ ಕೇಂದ್ರೀಕರಿಸಿದ್ದೇವೆ. ಇದು ನೈಸರ್ಗಿಕ ಅನಿಲವನ್ನು ಭೂಗತ ಅನಿಲ ಕೊಳವೆ ಮಾರ್ಗಗಳು, ಆನ್‌ಲೈನ್ ಕಂಪ್ರೆಸರ್, ಸ್ಟೇಷನರಿ ಕ್ಯಾಸ್ಕೇಡ್‌ಗಳು, ಡಿಸ್ಪೆನ್ಸರ್‌ಗಳು ಮತ್ತು ಮೊಬೈಲ್ ಕ್ಯಾಸ್ಕೇಡ್ ಫಿಲ್ಲಿಂಗ್ ಸೌಲಭ್ಯಗಳ ಮೂಲಕ ಪೂರೈಸಲಿದೆ. ಕಾರ್ಯಾಚರಣೆಯ ದಕ್ಷತೆಯ ಖಾತ್ರಿ ಮಾಡಿಕೊಳ್ಳುವಲ್ಲಿ ಈ ಉದ್ಘಾಟನೆ ಗಮನಾರ್ಹ ಹೆಜ್ಜೆಯಾಗಿದೆ. ಈ ಭೂಪ್ರದೇಶದಲ್ಲಿ ನೈಸರ್ಗಿಕ ಅನಿಲ ಪೂರೈಕೆ ಕ್ಷಿಪ್ರ ಗತಿಯಲ್ಲಿ ಹೆಚ್ಚಲಿದೆ. ಕೊಳವೆ ಮೂಲಕ ಪೂರೈಕೆಯಾಗುವಂತಹ ಮತ್ತು ನಮ್ಮ ಅನುಕೂಲಕರ ರೀತಿಯಲ್ಲಿ ಲಭ್ಯವಿರುವ ಅನಿಲವನ್ನು ಮನೆಗಳು, ವಾಣಿಜ್ಯ ಉಪಯೋಗ ಮತ್ತು ಕೈಗಾರಿಕಾ ಬಳಕೆಗಳಿಗೆ ಸೂಕ್ತವಾಗುವಂತೆ ರೂಪಿಸಲಾಗಿದೆ. ಜೊತೆಗೆ ಅನೇಕ ಮನೆಗಳಿಗೆ ಅನಿಲದ ಕೊರತೆಯನ್ನು ತುಂಬಲು, ಬೆಂಕಿಯ ಅಪಾಯಗಳನ್ನು ಕಡಿಮೆ ಮಾಡಲು ಮತ್ತು ಕಡಿಮೆ ವೆಚ್ಚದ ಪರಿಹಾರಗಳನ್ನು ನೀಡಲು ಅಲ್ಲದೆ, ಕಡಿಮೆ ವೆಚ್ಚದ ಸಂಚಾರ ಪರಿಹಾರಗಳನ್ನು ಪೂರೈಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ರಾಜ್ಯ ಮಹಿಳಾ ಕಾಂಗ್ರೆಸ್ ನ ಉಪಾಧ್ಯಕ್ಷಶ್ರೀಮತಿ ಕಿಶೋರಿ ಬೂದನೂರ್, ಮತ್ತು ರಜನೀಕಾಂತ್ – ವೈಷ್ಣವಿ ಪೆಟ್ರೋಲಿಯಂ ಡೀಲರ್ ಅವರು ಕಾರ್ಯಕ್ರಮದಲ್ಲಿ ತಮ್ಮ ಚಿಂತನೆಗಳನ್ನು ಹಂಚಿಕೊಂಡು ಮಾತನಾಡಿ, “ಕೊಪ್ಪಳದಲ್ಲಿ ಸಿಎನ್‌ಜಿ ಮದರ್ ಸ್ಟೇಷನ್‌ನ ಉದ್ಘಾಟನೆ ನಮ್ಮ ಪ್ರದೇಶದಲ್ಲಿ ಪ್ರಮುಖ ಕ್ಷಣವಾಗಿದೆ. ನಮ್ಮ ಸಮುದಾಯದಲ್ಲಿ ಸಿಎನ್‌ಜಿ (ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್) ಲಭ್ಯವಾಗುವಂತೆ ಮಾಡುವ ಎಜಿ&ಪಿ ಪ್ರಥಮ್‌ನ ಪ್ರಯತ್ನಗಳು ಶ್ಲಾಘನೀಯ. ಈ ರ‍್ಯಾಲಿ ಮತ್ತು ನೂತನ ಮದರ್ ಸ್ಟೇಷನ್‌ಗಳು ಸಿಎನ್‌ಜಿನ ಗಮನಾರ್ಹ ಪರಿಸರ ಸಂಬಂಧಿತ ಮತ್ತು ಆರ್ಥಿಕ ಲಾಭಗಳನ್ನು ಎತ್ತಿ ತೋರುತ್ತವೆ. ಹೆಚ್ಚು ಸ್ವಚ್ಛವಾದ ಬದಲಿ ಇಂಧನಗಳನ್ನು ಪ್ರೋತ್ಸಾಹಿಸುವುದರೊಂದಿಗೆ, ಸುಸ್ಥಿರ ಭವಿಷ್ಯದ ನಿಟ್ಟಿನಲ್ಲಿ ನಾವು ನಿರ್ಣಾಯಕ ಹೆಜ್ಜೆಗಳನ್ನಿಡುತ್ತಿದ್ದೇವೆ. ಸುಸ್ಥಿರ ಅಭಿವೃದ್ಧಿಗೆ ಈ ಉಪಕ್ರಮ ಹೆಗ್ಗುರುತನ್ನು ಸ್ಥಾಪಿಸಿದೆಯಲ್ಲದೆ, ನಮ್ಮ ಸಮುದಾಯದಲ್ಲಿ ಈ ಪರಿವರ್ತನೆಯನ್ನು ವೀಕ್ಷಿಸಲು ನಾನು ಹೆಮ್ಮೆ ಪಡುತ್ತೇನೆ’’ ಎಂದರು. ಇದೆ ಶುಭ ಸಂರ‍್ಭದಲ್ಲಿ ೩ ಹೊಸ ಆಟೋಗಳನ್ನು ಗ್ರಾಹಕರಿಗೆ ವಿತರಣೆ ಮಾಡಿದರು.

ಸಂಸ್ಥೆಯು ಈಗಾಗಲೇ ಬಾಗಲಕೋಟೆ, ಕೊಪ್ಪಳ ಮತ್ತು ರಾಯಚೂರು ನಗರಗಳಲ್ಲಿ/ಪ್ರದೇಶಗಳಲ್ಲಿ 25 ಸಿಎನ್‌ಜಿ ಸ್ಟೇಷನ್‌ಗಳನ್ನು ಆರಂಭಿಸಿದ್ದು, 2024ರ ಅಂತ್ಯದ ಹೊತ್ತಿಗೆ ಇನ್ನೂ 6 ಸ್ಟೇಷನ್‌ಗಳನ್ನು ಆರಂಭಿಸುವ ಯೋಜನೆ ಹೊಂದಿದೆ. ಸಿಎನ್‌ಜಿ ಮದರ್ ಸ್ಟೇಷನ್ ಸೌಲಭ್ಯವನ್ನು ಯಶಸ್ವಿಯಾಗಿ ಆರಂಭಿಸುವುದರೊಂದಿಗೆ, ನೈಸರ್ಗಿಕ ಅನಿಲದ ಲಭ್ಯತೆ ಹೆಚ್ಚಲಿದ್ದು, ಪೈಪ್‌ಲೈನ್ ಜಾಲದ ಮೂಲಕ ಪ್ರಸ್ತುತ 67 ಕಿಲೋಮೀಟರ್‌ಗಳ ಕಾರ್ಯಾಚರಣೆ ಹೊಂದಿರುವ ಸ್ಟೀಲ್ ಪೈಪ್‌ಲೈನ್‌ನಲ್ಲಿ ಅನಿಲ ಹರಿಯಲು ಅವಕಾಶ ಲಭಿಸಲಿದೆ. 2024ರ ಡಿಸೆಂಬರ್ ಹೊತ್ತಿಗೆ ಒಟ್ಟಾರೆಯಾಗಿ 82 ಕಿಲೋಮೀಟರ್ ಪೈಪ್‌ಲೈನ್(ಭವಿಷ್ಯದ ಯೋಜನೆಗಳು) ಕಾರ್ಯಾಚರಣೆ ಕೈಗೊಳ್ಳುವ ನಿರೀಕ್ಷೆ ಇದೆ. ಅಲ್ಲದೇ ಇದು ಜಿಲ್ಲೆಯಲ್ಲಿನ ಸಾರಿಗೆ ಕ್ಷೇತ್ರ, ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳ ಇಂಧನ ಅವಶ್ಯಕತೆಗಳನ್ನು ಪೂರೈಸಲಿದೆ.

ಕಾರ್ಯಕ್ರಮದಲ್ಲಿ ರಜನಿಕಾಂತ್-ವೈಷ್ಣವಿ ಪೆಟ್ರೋಲಿಯಂ ಡೀಲರ್ ಕೊಪ್ಪಳ ಸೇರಿದಂತೆ ಅನೇಕರು ಇದ್ದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!