ಎರಡು ದಿನಗಳ ಕಾಲ ಕೊಪ್ಪಳದಲ್ಲಿ ಶ್ರೀಕೃಷ್ಣ ಜಯಂತಿಯ ಕಾರ್ಯಕ್ರಮ
ಕೊಪ್ಪಳ,: ನಗರದ ಪ್ರಶಾಂತ ಬಡಾಣೆಯಲ್ಲಿ ಇದೇ ಅಗಷ್ಟ್ 26 ಮತ್ತು 27 ರಂದು ಎರಡು ದಿನಗಳ ಕಾಲ ಶ್ರೀಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಶ್ರೀ ಮದ್ಯೋಗೀಶ್ವರ ಯಾಜ್ಞವಲ್ಕ್ಯ ಪ್ರತಿಷ್ಠಾನದಿಂದ ಕಾರ್ಯಕ್ರಮ ಆಯೋಜಿಸಲಾಗಿದ್ದು, ಶ್ರೀಕೃಷ್ಣ ಜನ್ಮಾಷ್ಠಮಿ ಅಂಗವಾಗಿ 23 ಶುಕ್ರವಾರ ದಿಂದ 27 ಮಂಗಳವಾರದ ವರೆಗೆ ವಿವಿಧ ದಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಆಗಷ್ಟ್ 23 ಶುಕ್ರವಾರ ದಿಂದ 27 ರವರೆಗೆ ಪ್ರತಿದಿನ ಸಂಜೆ 6 ರಿಂದ 7 ರವರೆಗೆ ಪಂ, ರಘುಪ್ರೇಮಾಚಾರ್ಯ ಮುಳಗುಂದ ಇವರಿಂದ “ಶ್ರೀ ಭಾಗವತ ಪ್ರವಚನ” ಜರುಗಲಿದೆ.
ಶ್ರೀಕೃಷ್ಣ ಜನ್ಮಾಷ್ಠಮಿ ಅಂಗವಾಗಿ ಆ. 26ರಂದು ಸೋಮವಾರದಂದು ಬೆಳಿಗ್ಗೆ ಸುಪ್ರಭಾತ, ನಿರ್ಮಾಲ್ಯಾಭಿಷೇಕ, ಮಹಾಭೀಷೇಕ, ವಿಷ್ಣು ಸಹರ್ಸನಾಮ ಪಾರಾಯಣ ಅಲಂಕಾರ ಜರುಗಲಿದ್ದು, ಸಂಜೆ ಶ್ರೀಕೃಷ್ಣ ದೇವರಿಗೆ ಬೆಣ್ಣೆ ಅಲಂಕಾರ, ನಂತರ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಮಕ್ಕಳಿಂದ ವೇಷಭೂಷಣ ಪ್ರದರ್ಶನ, ರಾತ್ರಿ ಶ್ರೀಕೃಷ್ಣ ದೇವರಿಗೆ ಅರ್ಘ್ಯ ಪ್ರಧಾನ ಜರುಗಲಿದೆ.
ಆ. 27 ರಂದು ಮಂಗಳವಾರ ಬೆಳಿಗ್ಗೆ ಸುಪ್ರಭಾತ, ನಿರ್ಮಾಲ್ಯಾಭಿಷೇಕ, ತೋಟ್ಟಿಲು ಸೇವೆ, ಪಂಚಾಮೃತ ಅಭಿಷೇಕ ನೈವೇದ್ಯ, ಮಹಾಮಂಗಳಾರತಿ ತೀರ್ಥ ಪ್ರಸಾದ ಜರುಗಲಿದೆ, ಸಂಜೆ 4ಕ್ಕೆ ಪಂಡಿತರಿಂದ ಪ್ರವಚನ ಸೇವಾಕರ್ತರಿಗೆ ಫಲ ಮಂತ್ರಾಕ್ಷತೆ, ಗ್ರಾಮ ಪ್ರದಕ್ಷಿಣೆ, ಗೋಪಾಲ ಕಾವಲಿ, ಪಲ್ಲಕ್ಕಿ ಸೇವೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ವಿಠ್ಠಲ ಶ್ರೀಕೃಷ್ಣ ದೇವಸ್ಥಾನ ಸಮಿತಿ ತಿಳಿಸಿದೆ.
More Stories
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸರ್ಕಾರಿ ಶಾಲಾ ವಿದ್ಯಾರ್ಥಿಗಳು
ಬಿಎಸ್ ಪಿ ಸಂಘಟನೆ ಬೆಳೆಸಲು ಶ್ರಮಿಸಿ : ಕೃಷ್ಣಮೂರ್ತಿ
ಪರಿಸರ ಸಮತೋಲನಕ್ಕೆ ವನ್ಯಜೀವಿಗಳ ಪಾತ್ರ ಪ್ರಮುಖವಾಗಿದೆ : ಕೆ.ರಾಜಶೇಖರ ಹಿಟ್ನಾಳ