ಕೊಪ್ಪಳ,: ಶ್ರದ್ದೆಯಿಂದ ಅಭ್ಯಾಸ ಮಾಡಿದರೆ ಜೀವನ ಯಶಸ್ವಿ ಸಾಧ್ಯವೆಂದು ಇರಕಲ್ಲಗಡ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಶಂಕರಯ್ಯ ಅಬ್ಬಿಗೇರಿಮಠ ಹೇಳಿದರು.
ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ವಿಭಾಗದ ಎರಡನೇ ಸೆಮಿಸ್ಟರ್ ಮತ್ತು ನಾಲ್ಕನೇ ಸೆಮಿಸ್ಟರ್ ವಿದ್ಯಾರ್ಥಿನಿಯರು ಅಂತಿಮ ವರ್ಷದ ವಿದ್ಯಾರ್ಥಿನಿಯರಿಗೆ ಆಯೋಜಿಸಿದ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಇಂದು ಹೆಚ್ಚು ಸ್ಪರ್ಧೆ ಇದೆ. ಪ್ರತಿಯೊಂದು ಉದ್ಯೋಗಗಳು ಸ್ಪರ್ಧೆ ಕೇಂದ್ರೀಕೃತವಾಗಿವೆ. ಉದ್ಯೋಗಗಳಿಗೆ ವ್ಯವಸ್ಥಿತಿವಾಗಿ ತಯಾರಿ ಮಾಡಿಕೊಂಡು ಪರೀಕ್ಷೆ ಬರೆಯುವವರು ಶೇ. 25 ರಷ್ಟು ಮಾತ್ರ. ನೀವು ಪರೀಕ್ಷೆಗಳಿಗೆ ನೆನೆಪಿಡುವ ತಂತ್ರ ಗಳನ್ನು ಕಲಿಯಬೇಕು. ನಾವು ಹೆಚ್ಚಾಗಿ ಯಾವುದನ್ನೂ ಓದುತ್ತೇವೋ ಅದು ಚನ್ನಾಗಿ ನೆನುಪು ಇರುತ್ತವೆ. ನೀವು ಪುಸ್ತಕಗಳನ್ನು ಪದೇ ಪದೇ ಓದಬೇಕು ಆಗ ಮಾತ್ರ ಚನ್ನಾಗಿ ನೆನುಪಿರುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ವಾಣಿಜ್ಯಶಾಸ್ತ್ರದ ಮುಖ್ಯಸ್ತರಾದ ವಿಠೋಬ ಎಸ್ ಅವರು ಮಾತನಾಡಿ, ಉತ್ತಮ ಮತ್ತು ಕಠಿಣ ಶ್ರಮದಿಂದ ಜೀವನದಲ್ಲಿ ಯಶಸ್ಸು ಸಾದಿಸಿ ಕುಟುಂಬಕ್ಕೆ ಕಾಲೇಜಿಗೆ ಗೌರವ ತನ್ನಿ. ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಿರಂತರ ಶ್ರಮ ಅವಶ್ಯಕವಾಗಿದೆ. ವಿಶೇಷವಾಗಿ ವಾಣಿಜ್ಯ ಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಿಗೆ ಸಂವಹನ ಕೌಶಲ್ಯಗಳು ಬಹಳ ಮುಖ್ಯ. ಅವುಗಳನ್ನು ಅಳವಡಿಸಿಕೊಂಡು ಉತ್ತಮ ಸಾಧನೆಗಳನ್ನು ಮಾಡಿ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ಸುಮಿತ್ರಾ ಅವರು ಮಾತನಾಡಿ, ವಿದ್ಯಾರ್ಥಿಗಳು ಇಲ್ಲಿಯವರೆಗೆ ಸೇಫ್ ಜೋನ್ ನಲ್ಲಿ ಇದ್ದಿರಿ. ಆದರೆ ಈಗ ಪ್ರಪಂಚ ಬಹಳ ವಿಶಾಲವಾಗಿದೆ. ಎಲ್ಲಾರು ದೈರ್ಯವಾಗಿ ಸಮಸ್ಯೆಗಳನ್ನು ಎದುರಿಸಿ ಗೆಲುವು ಪಡೆಯಿರಿ. ಎಲ್ಲಾ ವಿದ್ಯಾರ್ಥಿಗಳು ಸಂಪಾದನೆ ಮಾಡಿ. ಆಗ ಜೀವನ ಸುಖವಾಗಿರುತ್ತೇದೆ ಅಂತ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಚಾರ್ಯರಾದ ಡಾ. ಗಣಪತಿ ಲಮಾಣಿ ಅವರು ಮಾತನಾಡಿ, ಮಹಿಳೆಯರು ಆರ್ಥಿಕವಾಗಿ ಸಬಲೀಕರಣವಾಗಬೇಕು. ಪದವಿ ಮುಗಿದ ನಂತರ ವಿದ್ಯಾಬ್ಯಾಸ ನಿಲ್ಲಿಸಬೇಡಿ. ನೀವೆಲ್ಲರೂ ಉನ್ನತ ಶಿಕ್ಷಣ ಪಡೆದು ಸುಖ ಜೀವನ ಸಾಗಿಸಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಧ್ಯಾಪಕಾರದ ಡಾ. ಹುಲಿಗೆಮ್ಮ, ಡಾ. ಪ್ರದೀಪ್ ಕುಮಾರ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಗವಿಸಿದ್ದಪ್ಪ ಮುತ್ತಾಳ, ಡಾ. ಮಲ್ಲಿಕಾರ್ಜುನ, ಶ್ರೀಮತಿ ನಾಗರತ್ನ ತಮ್ಮಿನಾಳ, ಡಾ.ಅಶೋಕ್ ಕುಮಾರ, ಶ್ರೀಮತಿ ಸಂತೋಷಿ ಬೆಲ್ಲದು, ಶ್ರೀಮತಿ ಉಮಾದೇವಿ, ಶ್ರೀಮತಿ ಪರಿಮಳ, ಎಚ್. ಜಿ ಬೊಮ್ಮನಾಳ ಹಾಗೂ ವಿದ್ಯಾರ್ಥಿನಿಯರು ಇದ್ದರು.
More Stories
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸರ್ಕಾರಿ ಶಾಲಾ ವಿದ್ಯಾರ್ಥಿಗಳು
ಬಿಎಸ್ ಪಿ ಸಂಘಟನೆ ಬೆಳೆಸಲು ಶ್ರಮಿಸಿ : ಕೃಷ್ಣಮೂರ್ತಿ
ಪರಿಸರ ಸಮತೋಲನಕ್ಕೆ ವನ್ಯಜೀವಿಗಳ ಪಾತ್ರ ಪ್ರಮುಖವಾಗಿದೆ : ಕೆ.ರಾಜಶೇಖರ ಹಿಟ್ನಾಳ