ಕೊಪ್ಪಳ,: ಶಿಕ್ಷಕ ವೃತ್ತಿ ಎನ್ನುವದು ಕೇವಲ ಒಂದು ಹುದ್ದೆಯಲ್ಲಾ ಅದೊಂದು ಅತ್ಯಂತ ಜವಾಬ್ದಾರಿ ಹಾಗೂ ಪವಿತ್ರವಾದ ಸ್ಥಾನವಾಗಿದೆ ಎಂದು ಪ್ರಾಂಶುಪಾಲ ಡಾ.ಬಸವರಾಜ ಹನಸಿ ಹೇಳಿದರು.
ಗದಗ ರಸ್ತೆಯಲ್ಲಿರುವ ಶಿವಪ್ರೀಯಾ ಲಾ ಕಾಲೇಜಿನಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಗುರಿಗಳನ್ನ ಹೊಂದಿರಬೇಕು ಅವುಗಳನ್ನ ಗೆಲ್ಲುವ ಛಲ ಇರಬೇಕು ಹಾಗೂ ಇದರಿಂದ ನಿಮಗೆ ವಿದ್ಯ ಕಲಿಸಿದ ಹಾಗೂ ನಿಮಗೆ ಜನ್ಮ ನೀಡಿದ ತಂದೆ ತಾಯಿಗಳಿಗೆ ಅತ್ಯಂತ ಖುಷಿಯ ವಿಚಾರ ಆಗಾಗಿ ಎಲ್ಲಾ ವಿದ್ಯಾರ್ಥಿಗಳು ಸಮಾಜಮುಖಿ ಕೆಲಸದಲ್ಲಿ ಹೆಚ್ಚಾಗಿ ಭಾಗವಹಿಸಬೇಕು ಇದರಿಂದ ನಿಮ್ಮಲ್ಲಿ ಸಮಾಜ ಸೇವೆ ಮನೋಭಾವನೆ ಮೂಡುತ್ತದೆ ಇದರಿಂದ ಸಮಾಜಕ್ಕೆ ನಿಮ್ಮಿಂದ ಕೊಡುಗೆಗಳು ಸಿಗುತ್ತವೆ ಆದ್ದರಿಂದ ನೀವು ಉತ್ತಮ ನಾಗರಿಕರಾಗಿ ಬಾಳಬೇಕು ಹಾಗೂ ತಂದೆ ತಾಯಿ ಹಾಗೂ ವಿದ್ಯೆ ಕಲಿಸಿದ ಗುರುಗಳಿಗೆ ಗೌರವ ನೀಡುವದನ್ನ ಮರೆಯಬಾರದು ಅಂದಾಗ ಮಾತ್ರ ಶಿಕ್ಷಕರ ದಿನಾಚರಣೆಗೆ ಒಂದು ಅರ್ಥ ಬರುತ್ತದೆ ಎಂದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ರಜೀಯಾಬೇಗಂ. ಮಹಾಲಕ್ಷ್ಮಿ. ಸೋಮಶೇಖರ್. ಹೊನ್ನಪ್ಪ ಕಲ್ಗುಡಿ. ಲಕ್ಷ್ಮಿ. ಪ್ರದೀಪ್ ಹಾಗೂ ಕಾನೂನು ವಿದ್ಯಾರ್ಥಿಗಳಾದ ಶ್ರೀದೇವಿ. ದೇವಿ.ಪೂಜಾ. ಸಾವಿತ್ರಿ.ಅರುಣ್, ಶಿವಕುಮಾರ ಮ್ಯಾಗೇರಿ, ಹರ್ಷ, ಮಂಜುನಾಥ ನಾಯಕ್, ನರೇಂದ್ರ, ಜಗದೀಶ, ಗದ್ದೇಶ, ಇಜಾದ್ ಸೇರಿದಂತೆ ಇನ್ನೀತರರು ಹಾಜರಿದ್ದರು.
More Stories
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸರ್ಕಾರಿ ಶಾಲಾ ವಿದ್ಯಾರ್ಥಿಗಳು
ಬಿಎಸ್ ಪಿ ಸಂಘಟನೆ ಬೆಳೆಸಲು ಶ್ರಮಿಸಿ : ಕೃಷ್ಣಮೂರ್ತಿ
ಪರಿಸರ ಸಮತೋಲನಕ್ಕೆ ವನ್ಯಜೀವಿಗಳ ಪಾತ್ರ ಪ್ರಮುಖವಾಗಿದೆ : ಕೆ.ರಾಜಶೇಖರ ಹಿಟ್ನಾಳ