ಕೊಪ್ಪಳ,: ದೇಶದ ಅಭಿವೃದ್ಧಿಗಾಗಿ ಆರ್ಥಿಕ ಬೆಳವಣಿಗೆಗಾಗಿ, ಜನರ ಹಿತಕ್ಕಾಗಿ. ವಿಶ್ವಗುರು ದೇಶವನ್ನಾಗಿಸಲು ಮತದಾರರು ಈ ಬಾರಿ ಬಿಜೆಪಿಗೆ ಮತನೀಡಿ ಮೋದಿಯವರಿಗೆ ಕೈ ಬಲಪಡಿಸಬೇಕು ಎಂದು ಕೊಪ್ಪಳ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್ ಹೇಳಿದರು.
ಶನಿವಾರ ನಗರದ ಮಧುಶ್ರೀ ಗಾರ್ಡನ್ ನಲ್ಲಿ ಬೂತ್ ವಿಜಯ ಅಭಿಯಾನ ಮತ್ತು ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ಸಮನ್ವಯ ಸಭೆ ಕಾರ್ಯಕ್ರಮಕ್ಕೆ ದೀಪ ಹಚ್ಚುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಭಾರತ ಮಾತೆ ಪುತ್ರ ಹೆಮ್ಮೆಯ ನಾಯಕರಾದ ನರೇಂದ್ರ ಮೋದಿ ಮಹಾನ್ ವ್ಯಕ್ತಿ ಸಿಕ್ಕಿದ್ದು ನಮ್ಮೆಲ್ಲರ ಸೌಭಾಗ್ಯ. ಕಟ್ಟಕಡೆಯ ವ್ಯಕ್ತಿಗೂ ಉನ್ನತ ಹುದ್ದೆ ನೀಡಿಯುವ ಏಕೈಕ ಪಕ್ಷ ಎಂದರೆ ಬಿಜೆಪಿ ಪಕ್ಷವಾಗಿದೆ. ಭಾರತ ದೇಶವನ್ನು ಇನ್ನೂ ಸುಭದ್ರ ಗೊಳಿಸಲು ಮೋದಿಯವರು ಮತ್ತೆ ಪ್ರಧಾನಿಯಾಗಿಸಲು ಶ್ರಮಿಸೋಣ ಎಂದರು.
ಕಳೆದು ಹತ್ತು ವರ್ಷಗಳಲ್ಲಿ ಭಾರತ ಎಲ್ಲಾ ರಂಗಗಳಲ್ಲೂ ಅಭೂತಪೂರ್ವ ಪ್ರಗತಿ ಸಾಧಿಸಿದೆ. ಅದಕ್ಕೆ ನಾವೆಲ್ಲಾ ಸಾಕ್ಷಿಯಾಗಿದ್ದೇವೆ. ಮೂಲಭೂತ ಸೌಕರ್ಯ ಕ್ಷೇತ್ರಗಲ್ಲಿ ದಾಖಲೆ ಪ್ರಮಾಣದಲ್ಲಿ ಪ್ರಗತಿ ಸಾಧಿಸಲಾಗಿದೆ. ಹೆದ್ದಾರಿ ಹಾಗೂ ರೇಲ್ವೆ ವಲಯಗಳಲ್ಲಿ ಅನೇಕ ಯೋಜನೆಗಳು ರಾಷ್ಟ್ರಕ್ಕೆ ಸಮರ್ಪಣೆಗೊಂಡಿವೆ. ವಿಕಸಿತ ಭಾರತಕ್ಕಾಗಿ ನಾವೆಲ್ಲರೂ ಹಗಲಿರುಳು ದುಡಿಯಬೇಕಿದೆ ಎಂದರು.
ರಾಜ್ಯಸಭಾ ಸದಸ್ಯ ಮತ್ತು ಲೋಕಸಭಾ ಕ್ಷೇತ್ರದ ಉಸ್ತುವಾರಿ ನಾರಾಯಣಸಾ ಬಾಂಡಗೆ ಮಾತನಾಡಿ, ಲೋಕಸಭಾ ಚುನಾವಣೆಯು ರಾಷ್ಟ್ರದ ಭವಿಷ್ಯದ ಚುನಾವಣೆಯಾಗಿದೆ. ಹಾಗಾಗಿ ರಾಷ್ಟ್ರ ಬಲಿಷ್ಠಗೊಳಿಸಲು ಪ್ರಧಾನಿ ಮೋದಿಯವರಿಗೆ ಮತ ಹಾಕಬೇಕು ಎಂದರು.
ಸಂಸದ ಸಂಗಣ್ಣ ಕರಡಿ ಮಾತನಾಡಿ, ರಾಷ್ಟ್ರ ಬಲಿಷ್ಠ ಗೊಳಿಸಲು ಮೋದಿಗೆ ಮತ್ತು ಬಸವರಾಜಗೆ ಮತ ಹಾಕಿ. ಮೋದಿಗಾಗಿ ಕೆಲಸ ಮಾಡಿ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಮಹಾಂತೇಶ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣನವರ, ಜೆಡಿಎಸ್ ಜಿಲ್ಲಾಧ್ಯಕ್ಷ ಸುರೇಶ ಬೂಮರೆಡ್ಡಿ, ಮುಖಂಡರಾದ ಚಂದ್ರಶೇಖರ ಪಾಟೀಲ ಹಲಗೇರಿ, ಗುರುಮೂರ್ತಿಸ್ವಾಮಿ ಅಳವಂಡಿ, ರಮೇಶ್ ಕವಲೂರು, ಮಂಜುನಾಥ ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.
More Stories
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸರ್ಕಾರಿ ಶಾಲಾ ವಿದ್ಯಾರ್ಥಿಗಳು
ಬಿಎಸ್ ಪಿ ಸಂಘಟನೆ ಬೆಳೆಸಲು ಶ್ರಮಿಸಿ : ಕೃಷ್ಣಮೂರ್ತಿ
ಪರಿಸರ ಸಮತೋಲನಕ್ಕೆ ವನ್ಯಜೀವಿಗಳ ಪಾತ್ರ ಪ್ರಮುಖವಾಗಿದೆ : ಕೆ.ರಾಜಶೇಖರ ಹಿಟ್ನಾಳ