December 23, 2024

AKSHARA KRAANTI

AKSHARA KRAANTI




ರೇವಣಸಿದ್ದೇಶ್ವರ ಜಯಂತಿ ಆಚರಣೆ

ಕೊಪ್ಪಳ,: ಹಾಲುಮತ ಮಹಾಸಭಾ ಕೊಪ್ಪಳ ವತಿಯಿಂದ ಮನುಕುಲದ ಎಲ್ಲಾ ಸಮುದಾಯಕ್ಕೆ ಲಿಂಗದೀಕ್ಷೆ ನೀಡಿದ ಆದಿಗುರು, ಕುಲಗುರು ಶ್ರೀ ರೇವಣಸಿದ್ದೇಶ್ವರ ಜಯಂತಿಯನ್ನು ಭಾಗ್ಯನಗರದ ಶ್ರೀಬೀರಲಿಂಗೇಶ್ವರ ದೇವಸ್ಥಾನದಲ್ಲಿ ರೇವಣಸಿದ್ದೇಶ್ವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಜಯಂತಿಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಹಾಲುಮತ ಮಹಾಸಭಾ ಜಿಲ್ಲಾಧ್ಯಕ್ಷ ಹನುಮಂತಪ್ಪ ಕೌದಿ, ರಾಜ್ಯ ಸಂಘಟನೆ ಕಾರ್ಯದರ್ಶಿ ದ್ಯಾಮಣ್ಣ ಕರಿಗಾರ್, ಜಿಲ್ಲಾ ಉಪಾಧ್ಯಕ್ಷ ಕುಬೇರ್ ಮಜ್ಜಿಗೆ , ಹನುಮಂತಪ್ಪ ಹನುಮಾಪುರ, ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ಬಸವರಾಜ್ ಗುರಿಕಾರ್ ಲೇಬಗೆರಾ, ಮಂಜುನಾಥ್ ಬಂಗಾಳಿ, ಪರಶುರಾಮ್ ಅಣ್ಣಿಗೇರಿ, ಮಲ್ಲೇಶ್ ಹದ್ದಿನ್, ಬೀರಪ್ಪ ಮೇಟಿ ಲೇಬಗೆರಾ, ನಿಂಗಜ್ಜ ಬುಡಶೆಟ್ನಾಳ, ಗಿರಿಜಮ್ಮ ಪರಸಪ್ಪ ಬುಡಶೆಟ್ನಾಳ, ರಾಮಣ್ಣ ದೊಡ್ಮನಿ ಲೇಬಗೆರಾ ಸೇರಿದಂತೆ ಅನೇಕರು ಇದ್ದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!