ಕೊಪ್ಪಳ,: ಹುಬ್ಬಳ್ಳಿಯ ಸಮೀಪದ ಹೆಬಸೂರು ಹತ್ತಿರ ರಸ್ತೆ ಅಪಘಾತದಲ್ಲಿ ಕೊಪ್ಪಳ ತಾಲೂಕಿನ ಮಂಗಳಾಪುರ ಗ್ರಾಮದ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಉಳಿದ ಮೂವರು ತೀವ್ರವಾಗಿ ಗಾಯಗೊಂಡ ಧಾರವಾಡದ ಎಸ್‌ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶುಕ್ರವಾರ ರಾತ್ರಿ ಓಮಿನಿ ಕಾರು, ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕೊಪ್ಪಳ ತಾಲೂಕಿನ ಮಂಗಳಾಪುರ ಗ್ರಾಮದ ಜಾಫರ್‌ಸಾಬ್ (60), ಮೊಹ್ಮದ್ ಮುಸ್ತಫಾ (36), ಶೋಹೆಬ್ (6) ಮೃತಪಟ್ಟಿದ್ದು, ಇವರು ಪಾರ್ಶವಾಯುಗೆ ಔಷಧಿ ತರಲೆಂದು ಜಾಫರ್‌ಸಾಬ್ ಕುಟುಂಬದ ಜೊತೆ ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಹಲಗಾ ಗ್ರಾಮದಲ್ಲಿರುವ ಸೇಂಟ್ ಮೇರಿ ಆಸ್ಪತ್ರೆಗೆ ಎರಡು ದಿನಗಳ ಹಿಂದೆ ಹೋಗಿದ್ದರು. ಊರಿಗೆ ವಾಪಸ್ ಬರುವಾಗ ರಾತ್ರಿ ಹೆಬಸೂರ ಗ್ರಾಮದ ಬಳಿ ಈ ಘಟನೆ ನಡೆದಿದೆ. ಓಮಿನಿ ಕಾರು ಮತ್ತು ಅಪಘಾತ ಸಂಭವಿಸಿದ ರಭಸಕ್ಕೆ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಎಸ್‌ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.ಈ ಘಟನೆ ಕೊಪ್ಪಳದ ಮಂಗಳಾಪುರು ಗ್ರಾಮದಲ್ಲಿ ಜನರಲ್ಲಿ ಆಘಾತ ಉಂಟು ಮಾಡಿದ್ದು, ಜನರು ಜಾಫರ್ ಸಾಬ್ ಮನೆಗೆ ತೆರಳಿ ಸಮಾದಾನ ಹೇಳುತ್ತಿದ್ದಾರೆ. ಮೃತದೇಹಗಳನ್ನು ಮಂಗಳಾಪುರಕ್ಕೆ ತರಲಾಗಿದೆ. ಅನೇಕರು ಬಂದು ಅಂತಿಮ ದರ್ಶನ ಪಡೆಯುತ್ತಿದ್ದಾರೆ.
ಗವಿಶ್ರೀಗಳಿಂದ ಮೃತರ ಅಂತಿಮ ದರ್ಶನ :
ಹುಬ್ಬಳ್ಳಿಯ ಹೆಸಬೂರು ಬಳಿ ರಸ್ತೆ ಅಪಘಾತದಲ್ಲಿ ಮಂಗಳಾಪುರು ಗ್ರಾಮದ ಜಾಫರ್ ಸಾಬ್, ಮಗ ಮಹಮ್ಮದ್ ಮುಸ್ತಫಾ, ಮೊಮ್ಮಗ ಶೋಯಬ್ ಮೃತಪಟ ಸುದ್ದಿ ತಿಳಿದು ಮಂಗಳಾಪುರ ಗ್ರಾಮಕ್ಕೆ ತೆರಳಿ ಮೃತಪಟ್ಟ ಮೂವರ ಮೃತ ದೇಹಗಳಿಗೆ ಗವಿಮಠ ಶ್ರೀ ಗವಿಸಿದ್ಧೇಶ್ವರ ಸ್ವಾಮಿಜಿಗಳವರು ಶನಿವಾರ ಅಂತಿಮ ದರ್ಶನ ಪಡೆದರು. ಮೃತರ ಆತ್ಮಗಳಿಗೆ ಶಾಂತಿ ನೀಡಬೇಕು ಎಂದು ಸಂತಾಪ ಸೂಚಿಸಿದರು. ಕುಟುಂಬಸ್ಥರಿಗೆ ಸಾಂತ್ವಾನ ಹೇಳುವ ಮೂಲಕ ಧೈರ್ಯ ತುಂಬಿದರು.
More Stories
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸರ್ಕಾರಿ ಶಾಲಾ ವಿದ್ಯಾರ್ಥಿಗಳು
ಬಿಎಸ್ ಪಿ ಸಂಘಟನೆ ಬೆಳೆಸಲು ಶ್ರಮಿಸಿ : ಕೃಷ್ಣಮೂರ್ತಿ
ಪರಿಸರ ಸಮತೋಲನಕ್ಕೆ ವನ್ಯಜೀವಿಗಳ ಪಾತ್ರ ಪ್ರಮುಖವಾಗಿದೆ : ಕೆ.ರಾಜಶೇಖರ ಹಿಟ್ನಾಳ