ಹೋಳಿ ಹಬ್ಬದ ಸಂಭ್ರಮ
ಕೊಪ್ಪಳ,: ಹೋಳಿ ಹಬ್ಬದ ಪ್ರಯುಕ್ತ ರವಿವಾರ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಸಡಗರ ಸಂಭ್ರಮದಿಂದ
ಬಣ್ಣದಾಟ ನಡೆಯಿತು. ಹಿರಿಯರು, ಕಿರಿಯರು, ಮಕ್ಕಳು, ಮಹಿಳೆಯರು, ಯುವಕ-ಯುವತಿಯರು ಎಲ್ಲರೂ ಪರಸ್ಪರ ಬಣ್ಣ ಹಚ್ಚಿಕೊಂಡು ಸಂಭ್ರಮಿಸಿದರು. ಬೆಳಗ್ಗೆಯಿಂದಲೇ ಬಣ್ಣದೋಕುಳಿ ಶುರುವಾಯಿತು. ನಗರದ ವಿವಿಧ ಬಡಾವಣೆಗಳಲ್ಲಿ ಪುರುಷರು ಗುಂಪುಗುಂಪಾಗಿ ಹಾಗೂ ಮನೆಗಳಿಗೆ ತೆರಳಿ ಬಣ್ಣ ಎರಚಿದರೆ, ಮಹಿಳೆಯರು, ಚಿಕ್ಕ-ಚಿಕ್ಕ ಮಕ್ಕಳು ಮನೆ ಹಾಗೂ ಗಲ್ಲಿಗಳಲ್ಲಿ ಗುಂಪಾಗಿ ಬಣ್ಣದಾಟವಾಡಿ ಗಮನ ಸೆಳೆದರು. ಯುವತಿಯರು, ಚಿಕ್ಕ-ಚಿಕ್ಕ ಮಕ್ಕಳು ಕೂಡ ಹೋಳಿಯಾಟವಾಡಿದರು.
ಕೊಪ್ಪಳ ತಾಲೂಕಿನ ಗಿಣಿಗೇರಾ ಗ್ರಾಮದಲ್ಲಿ ಜಾತಿ, ಧರ್ಮದ ಹಂಗಿಲ್ಲದೆ ಮಕ್ಕಳಿಂದ ದೊಡ್ಡವರು ತನಕ ಎಲ್ಲರೂ ಸೇರಿ ವಿವಿಧ ರೀತಿಯಲ್ಲಿ ಹೋಳಿ ಆಚರಿಸಿ ಹೋಳಿ ಹಬ್ಬವನ್ನು ಸಂಭ್ರಮದಿಂದ ವಿಶೇಷವಾಗಿ ಹಬ್ಬವನ್ನು ರಂಗುರಂಗಿನ ಬಣ್ಣ ಎರಚುವುದ ರೊಂದಿಗೆ ಸ್ನೇಹಿತರು,ಬಂಧು-ಬಳಗದವರು,ನೆರೆಹೊರೆಯವರೊಂದಿಗೆ ಪ್ರೀತಿಯಿಂದ ಹಬ್ಬವನ್ನು ಆಚರಿಸಲಾಯಿತು.
ಈ ವೇಳೆ ಶಿಲ್ಪ ರಂಗಾರಿ, ಹೆಚ್.ರೂಪಾ ಹಲಿಗೇರಿ, ಪದ್ಮಾ ಬಡಿಗೇರ, ರೇಣುಕಾ, ಐಶ್ವರ್ಯ, ಸಂಜನಾ, ಸಾವಿತ್ರಿ, ರಾಹುಲ್, ನಾಗರಾಜ ಹಲಿಗೇರಿ, ಕೊಟ್ರಯ್ಯ ಮೈನಳಿ, ಐಶ್ ಗೌಳಿ ಇನ್ನಿತರೆ ಚಿನ್ನರ ಚಿಲಿಪಿಲಿಗಳು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.
More Stories
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸರ್ಕಾರಿ ಶಾಲಾ ವಿದ್ಯಾರ್ಥಿಗಳು
ಬಿಎಸ್ ಪಿ ಸಂಘಟನೆ ಬೆಳೆಸಲು ಶ್ರಮಿಸಿ : ಕೃಷ್ಣಮೂರ್ತಿ
ಪರಿಸರ ಸಮತೋಲನಕ್ಕೆ ವನ್ಯಜೀವಿಗಳ ಪಾತ್ರ ಪ್ರಮುಖವಾಗಿದೆ : ಕೆ.ರಾಜಶೇಖರ ಹಿಟ್ನಾಳ