365 ದಿನವೂ ಕಾರ್ಯನಿರ್ವಹಿಸುವ ಬ್ಯಾಂಕ್
ಕೊಪ್ಪಳ,: ವಿಕಾಸ ಬ್ಯಾಂಕ್ ತನ್ನ 14ನೇ ಶಾಖೆಯನ್ನು ಕೊಪ್ಪಳ ನಗರದಲ್ಲಿ ಮಾ.18 ಸೋಮವಾರ ರಂದು ಬೆಳಿಗ್ಗೆ 9-3೦ಕ್ಕೆ ಹೊಸಪೇಟೆ ರಸ್ತೆಯ ಶರ್ಮಾ ಕಾಂಪ್ಲೆಕ್ಸ್ ಮಳಿಗೆಯಲ್ಲಿ ಆರಂಭವಾಗುತ್ತದೆ ಎಂದು ವಿಕಾಸ ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಹಿರೇಮಠ ತಿಳಿಸಿದರು.
ಶನಿವಾರ ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿದ್ದೇಶಿಸಿ ಅವರು ಮಾತನಾಡಿದರು. ಕೊಪ್ಪಳದ ಗವಿಮಠದ ಶ್ರೀಗವಿಸಿದ್ದೇಶ್ವರ ಮಹಾಸ್ವಾಮಿಗಳವರು
ದಿವ್ಯ ಸಾನಿಧ್ಯ ವಹಿಸುವರು, ಸದಾ ಮುಂಚೂಣಿಯಲ್ಲಿರುವ ವಿಕಾಸ ಬ್ಯಾಂಕ್ ಇತರೇ ಮುಖ್ಯ ವಾಹಿನಿ ಬ್ಯಾಂಕ್‌ಗಳಿಗೆ ಕಡಿಮೆಯಿಲ್ಲದಂತೆ ನವಪೀಳಿಗೆಯ ಬ್ಯಾಂಕಿಂಗ್ ಸೌಲಭ್ಯಗಳಾದ ಎಟಿಎಂ, ಮೊಬೈಲ್ ಬ್ಯಾಂಕಿಂಗ್, ಯುಪಿಎಗಳ ಗೂಗಲ್ ಪೇ, ಫೋನ್‌ಪೇ, ಪೇಟಿಎಂ ಇತ್ಯಾದಿ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳು ಹಾಗೂ ಸೌಲಭ್ಯ ಸೇರಿದಂತೆ ಎಲ್ಲ ರೀತಿಯ ತಂತ್ರಜ್ಞಾನ ಸೇವೆಗಳನ್ನು ನೀಡುತ್ತ ಗ್ರಾಹಕರ ಸೇವೆಗೆ ಆದ್ಯತೆ ನೀಡುತ್ತ ಬಂದಿದೆ, ಭಾರತೀಯ ರಿಜರ್ವ ಬ್ಯಾಂಕಿನ ಹೊಸ ಮಾನದಂಡಗಳ ಪ್ರಕಾರ ಆಡಳಿತ ಮಂಡಳಿಯ ಅಲ್ಲದೇ ವ್ಯವಸ್ಥಾಪನಾ ಮಂಡಳಿಯನ್ನು ರಚಿಸಿದ ರಾಜ್ಯದ ಮೊದಲ ಸಹಕಾರ ಬ್ಯಾಂಕ್ ನಮ್ಮದಾಗಿದೆ ಎಂದ ಅವರು 755ಕೋಟಿ ರೂಪಾಯಿಗಳ ಠೇವಣಿ, 564 ಕೋಟಿ ರೂಪಾಯಿಗಳು ಸಾಲಗಳು,1319 ಕೋಟಿ ರೂಪಾಯಿಗಳ ಒಟ್ಟು ವ್ಯವಹಾರ ಹೊಂದಿದ್ದು ವರ್ಷದ 365 ದಿನಗಳ ನಿರಂತರ ಬ್ಯಾಂಕಿಂಗ್ ಸೇವೆ ಒದಗಿಸುತ್ತೀರುವ ದೇಶದ ಏಕೈಕ ಬ್ಯಾಂಕ್ ಆಗಿದೆ ಈಗ ವಿಕಾಸ ಬ್ಯಾಂಕ್ 14ನೇ ಶಾಖೆ ಕೊಪ್ಪಳ ನಗರದಲ್ಲಿ ಆರಂಭವಾಗುತ್ತಿದ್ದು ಎಲ್ಲಾರನ್ನು ಸ್ವಾಗತಿಸುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಪ್ರಸನ್ನ ಹಿರೇಮಠ, ಬ್ಯಾಂಕಿನ ಅನಂತ್ ಜೋಷಿ, ಉದಯ, ಹನುಮೇಶ ಸೇರಿದಂತೆ ಅನೇಕರು ಇದ್ದರು.
More Stories
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸರ್ಕಾರಿ ಶಾಲಾ ವಿದ್ಯಾರ್ಥಿಗಳು
ಬಿಎಸ್ ಪಿ ಸಂಘಟನೆ ಬೆಳೆಸಲು ಶ್ರಮಿಸಿ : ಕೃಷ್ಣಮೂರ್ತಿ
ಪರಿಸರ ಸಮತೋಲನಕ್ಕೆ ವನ್ಯಜೀವಿಗಳ ಪಾತ್ರ ಪ್ರಮುಖವಾಗಿದೆ : ಕೆ.ರಾಜಶೇಖರ ಹಿಟ್ನಾಳ