ಮಲ್ಲಮ್ಮ ದೇವಸ್ಥಾನಕ್ಕೆ ನಾಲ್ಕು ಲಕ್ಷ ದೇಣಿಗೆ
ಕೊಪ್ಪಳ,: ನಗರದ ಕಿನ್ನಾಳ ರಸ್ತೆಯಲ್ಲಿರುವ ಶ್ರೀ ಶಿವಶರಣೇ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಕೈಜೋಡಿಸಲು ರೆಡ್ಡಿ ಸಮಾಜದ ಸರ್ಕಾರಿ ನೌಕರರು 406100 ರೂಪಾಯಿ ದೇಣಿಗೆಯನ್ನು ಶನಿವಾರ ನೀಡಿದ್ದಾರೆ.
ರೆಡ್ಡಿ ಸಮಾಜದ ಸರ್ಕಾರಿ ನೌಕರರು ತಲಾ ಐದು ಸಾವಿರ ರುಪಾಯಿಯಂತೆ ಸಂಗ್ರಹಿಸಿ, ನೀಡುವ ಮೂಲಕ ದೇವಸ್ಥಾನದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಕ್ಕೆ ಕೈಜೋಡಿಸಿದ್ದಾರೆ.ಸಮಾಜದ ಹಿರಿಯರಾದ ಎಸ್. ಬಿ. ನಾಗರಳ್ಳಿ, ವೆಂಕರಡ್ಡಿ ವಕೀಲರು, ಹನುಮರಡ್ಡಿ ಹಂಗನಕಟ್ಟಿ, ಹೇಮರಡ್ಡಿ ಬಿಸರಳ್ಳಿ, ಹಳ್ಳಿಕೇರಿ ಬಸವರಡ್ಡಿ, ವಿರುಪಾಕ್ಷಪ್ಪ ನವೋದಯ ಹಾಗೂ ರೆಡ್ಡಿ ಸಮಾಜದ ನೌಕರರ ಇದ್ದರು.
More Stories
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸರ್ಕಾರಿ ಶಾಲಾ ವಿದ್ಯಾರ್ಥಿಗಳು
ಬಿಎಸ್ ಪಿ ಸಂಘಟನೆ ಬೆಳೆಸಲು ಶ್ರಮಿಸಿ : ಕೃಷ್ಣಮೂರ್ತಿ
ಪರಿಸರ ಸಮತೋಲನಕ್ಕೆ ವನ್ಯಜೀವಿಗಳ ಪಾತ್ರ ಪ್ರಮುಖವಾಗಿದೆ : ಕೆ.ರಾಜಶೇಖರ ಹಿಟ್ನಾಳ