December 23, 2024

AKSHARA KRAANTI

AKSHARA KRAANTI




ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ

ಸಂಸದ ಸಂಗಣ್ಣ ಕರಡಿಯವರ ಕಟ್ಟಾ ಬೆಂಬಲಿಗರು ಕಾಂಗ್ರೆಸ್ ಸೇರ್ಪಡೆ

ಅಕ್ಷರಕ್ರಾಂತಿ ನ್ಯೂಸ್

ಕೊಪ್ಪಳ,: ಯುಗಾದಿ ಹಬ್ಬದ ಸುಸಂದರ್ಭ ವೇಳೆ ನಗರದಲ್ಲಿ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ರವರ ಸಮ್ಮುಖದಲ್ಲಿ ಮಂಗಳವಾರ ದಂದು ಸರಳವಾಗಿ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಬಿಜೆಪಿ ಪಕ್ಷದ ಮಾಜಿ ತಾಪಂ ಸದಸ್ಯ ಜಂಬಣ್ಣ ಜಂತಕಲ್, ಆನಂದಳ್ಳಿ ಪ್ರಕಾಶ ವಕೀಲರು, ಬಿಜೆಪಿ ಜಿಲ್ಲಾ ಮಾಜಿ ವಕ್ತಾರ ಬಸವಲಿಂಗಯ್ಯ ಗದಗಿನಮಠ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯರು ಬಸವರಾಜ ಭೋವಿ, ಎಸ್.ಎಮ್.ಮೆಣಸಿನಕಾಯಿ ವಕೀಲರು,
ವೀರಯ್ಯ ಹುಲಿಗಿ, ಪರಶುರಾಮ ನಾಯಕ ಹುಲಿಗಿ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಕಾಂಗ್ರೆಸ್ ತತ್ವ ಸಿದ್ದಾಂತ ಹಾಗೂ ಜನಪರ ಕಾರ್ಯಕ್ರಮ ಮೆಚ್ಚಿ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಸಮ್ಮುಖದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು.

ನಂತರ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಮಾತನಾಡಿ, ದೇಶಾದ್ಯಂತ ಕಾಂಗ್ರೆಸ್ ಪರ ಹೊಸ ಅಲೆ ಸೃಷ್ಟಿಯಾಗಿದೆ. ಇಂಡಿಯಾ ಮೈತ್ರಿಕೂಟದ ಅಲೆಗೆ ಮೋದಿಯವರ ಅಲೆ ಕೊಚ್ಚಿಹೋಗಲಿದೆ. ಕಾಂಗ್ರೆಸ್ ಗ್ಯಾರಂಟಿಗೆ ಜನ ಮತಸೋತಿದ್ದಾರೆ. ಪ್ರತಿ ಹಳ್ಳಿಯಲ್ಲೂ ಸಹ ಕಾಂಗ್ರೆಸ್ ಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಈ ಬಾರಿ ನಿಶ್ಚಿತವಾಗಿ ಕಾಂಗ್ರೆಸ್ 28 ಸ್ಥಾನದಲ್ಲೂ ಜಯಭೇರಿ ಬಾರಿಸುವ ಮೂಲಕ ರಾಜ್ಯದಲ್ಲಿ ಹೊಸ ಅಧ್ಯಾಯ ಸೃಷ್ಟಿಸಲಿದೆ ಎಂದರು.

ಈ ವೇಳೆ ಕಾಂಗ್ರೆಸ್ ಮುಖಂಡರಾದ ವೈಜನಾಥ ದಿವಟರ್, ಪಾಲಕ್ಷಪ್ಪ ಗುಂಗಾಡಿ, ಪ್ರಸನ್ನ ಗಡಾದ, ವೀರುಪಾಕ್ಷಯ್ಯ ಗದಗಿನಮಠ, ವೀರಣ್ಣ ಗಾಣಿಗೇರ, ಅಂದಾನಪ್ಪ ಬೆಣಕಲ್ ಸೇರಿದಂತೆ ಅನೇಕರು ಇದ್ದಾರು

 

 

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!