December 23, 2024

AKSHARA KRAANTI

AKSHARA KRAANTI




ಬಣ್ಣ ಬಳಿದು, ಸಸಿ ನೆಟ್ಟು ಪರಿಸರ ದಿನ ಆಚರಿಸಿದ ಶಿಕ್ಷಕರು

ಕೊಪ್ಪಳ,: ತಾಲೂಕಿನ ಹಾಲಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಕಲಾಸಂಘ (ರಿ) ಕೊಪ್ಪಳ ಹಾಗೂ ಕಲರವ ಶಿಕ್ಷಕರ ಸೇವಾ ಬಳಗದವರ ಸಂಯುಕ್ತಾಶ್ರಯದಲ್ಲಿ ಪರಿಸರ ದಿನಾಚರಣೆ ವಿಶೇಷವಾಗಿ ಆಚರಿಸಲಾಯಿತು.

ಶಿಕ್ಷಕರ ಕಲಾಸಂಘ ಕೊಪ್ಪಳ ಇವರು ಹಾಲಳ್ಳಿ ಶಾಲಾ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು, ಕಲರವ ಶಿಕ್ಷಕರ ಸೇವಾ ಬಳಗದವರು ಹಾಲಳ್ಳಿ ಗ್ರಾಮದ ಶಾಲಾ ಕಟ್ಟಡಕ್ಕೆ ಬಣ್ಣ ಹಚ್ಚಿದರು.

ಪರಿಸರವನ್ನು ನಾವು ಸಂರಕ್ಷಿಸಿದರೆ, ಪರಿಸರ ನಮ್ಮನ್ನೆಲ್ಲ ಸಂರಕ್ಷಿಸುತ್ತದೆ. ಜಾಗತಿಕ ತಾಪಮಾನ ತೀವ್ರಗತಿಯಲ್ಲಿ ಹೆಚ್ಚಾಗುತ್ತಿದ್ದು, ಕೊಪ್ಪಳದಲ್ಲಿ ಈ ಬಾರಿ ಅತಿ ಹೆಚ್ಚು ಡಿಗ್ರಿ ಉಷ್ಣಾಂಶ ದಾಖಲಾಗಿರುವುದು ಕಳವಳಕಾರಿ ಸಂಗತಿ. ಇದಕ್ಕೆ ಪರಿಹಾರವೇಂದರೆ ಎಲ್ಲರೂ ಗಿಡಗಳನ್ನು ನೆಡುವುದೊಂದೆ ಪರಿಹಾರ ಎಂದು ಶಿಕ್ಷಕರ ಕಲಾಸಂಘದ ಅಧ್ಯಕ್ಷರಾದ ರಾಮಣ್ಣ ಶ್ಯಾವಿ ಮಾತನಾಡಿದರು.
ಹಾಲಳ್ಳಿ ಶಾಲಾ ಶಿಕ್ಷಕರು ಸೇವಾ ನಿರತ ಶಿಕ್ಷಕರನ್ನು ಗೌರವಿಸಿ ಸನ್ಮಾನ ಮಾಡಿದರು.

ಸದರಿ ಕಾರ್ಯಕ್ರಮಕ್ಕೆ ಕಲತಾವರಗೇರಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಪೀರಸಾಬ್ ವಾಲೀಕಾರ, ಗ್ರಾಮ ಪಂಚಾಯತ ಸದಸ್ಯರಾದ ಲಕ್ಷ್ಮಣ ಮಾಳಗಿ ಎಸ್.ಡಿ.ಎಮ್.ಸಿ ಅಧ್ಯಕ್ಷ ಮಾರುತಿ ಉಪ್ಪಾರ ಎಸ್.ಡಿ.ಎಮ್.ಸಿ ಸದಸ್ಯರಾದ ಹುಲಗಪ್ಪ ಭಜಂತ್ರಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ನಾಗರಾಜ ಜುಮ್ಮನ್ನವರ, ಕಾರ್ಯಾಧ್ಯಕ್ಷ ಶಿವಪ್ಪ ಜೋಗಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷ ಹೊಳಿಬಸಯ್ಯ ಪ್ರಧಾನ ಕಾರ್ಯದರ್ಶಿ ಬಾಳಪ್ಪ ಕಾಳೆ, ನಫೀಜಖಾನ್ ಪಠಾಣ, ಹಾಲಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ಯಮನೂರಪ್ಪ ಕಟಗಿ, ಶಿಕ್ಷಕರ ಕಲಾಸಂಘದ ಪ್ರಾಣೇಶ ಪೂಜಾರ, ಮಂಜುನಾಥ ಪೂಜಾರ, ಫಕೀರಪ್ಪ ಗುಳದಳ್ಳಿ, ಪರಶುರಾಮ ಬಾವಿ, ಗವಿಸಿದ್ಧಪ್ಪ ಕೊನಸಾಗರ, ಕಲರವ ಶಿಕ್ಷಕರ ಸೇವಾ ಬಳಗದ ಸುರೇಶ ಕಂಬಳಿ, ಅಣ್ಣಪ್ಪ ಹಳ್ಳಿ, ಹನುಮಂತಪ್ಪ ಕುರಿ, ಹುಲಗಪ್ಪ ಭಜಂತ್ರಿ, ಗುರಸ್ವಾಮಿ, ಶರಣಪ್ಪ ರೆಡ್ಡೇರ್, ವಿರೇಶ ಕೌಟಿ, ಮರ್ದಾನಪ್ಪ ಬೆಲ್ಲದ, ಜೆಸ್ಕಾಂ ಇಲಾಖೆಯ ಮಹೇಶ್ವರಿ, ಸಹ ಗ್ರಂಥಪಾಲಕ ನಾಗರಾಜನಾಯಕ ಡೊಳ್ಳಿನ ಹಾಲಳ್ಳಿ ಶಾಲೆಯ ಶಿಕ್ಷಕರಾದ ವಿನಾಯಕ, ಫಕೀರಸಾಬ್ ತಹಶೀಲ್ದಾರ್ ಸೇರಿದಂತೆ ಅನೇಕರು ಇದ್ದರು.

 

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!