December 23, 2024

AKSHARA KRAANTI

AKSHARA KRAANTI




ಪಲ್ಸ್ ಪೋಲಿಯೋ ಲಸಿಕೆ ಜಾಗೃತಿ ಜಾಥ

ಹುಲಿಗಿ ಗ್ರಾಮ ಪಂಚಾಯತಿಯಿಂದ ಜಾಗೃತಿ

ಕೊಪ್ಪಳ,: ಹುಲಿಗಿ ಗ್ರಾಮ ಪಂಚಾಯತ್ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಹುಲಿಗಿ ಇವರ ಸಂಯುಕ್ತ ಆಶ್ರಯದಲ್ಲಿ ಪಲ್ಸ್ ಪೋಲಿಯೋ ಲಸಿಕೆ ಜನ ಜಾಗೃತಿ ಜಾಥ ಕಾರ್ಯಕ್ರಮ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹುಲಿಗಿ ಮಕ್ಕಳಿಂದ ಪ್ರಭಾತ್ ಫೇರಿ ಮೂಲಕ ಲಸಿಕಾ ದಿನ ಲಸಿಕಾ ಕೇಂದ್ರಕ್ಕೆ 0-5 ವರ್ಷದೊಳಗಿನ ಎಲ್ಲಾ ಮಕ್ಕಳನ್ನು ಕರೆತವುದು ಹಾಗೂ ಎರಡು ಹನಿ ಪೋಲಿಯೋ ಲಸಿಕೆ ಹಾಕಿಸುವಂತೆ ಜಾಗೃತಿ ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರಾದ ಸುಧಾ
ಶಿಕ್ಷಕರಾದ ಮನೋಹರ್, ಜಗದೀಶ್ ರಾಮಲಿ, ಮಾರುತಿ, ರುದ್ರಮ್ಮ ಆಶಾ ಕಾರ್ಯಕರ್ತೆಯರು ಕೌಶಲ್ಯ, ಶಾಂತಮ್ಮ, ಸುನೀತಾ, ಗಿರಿಜಮ್ಮ, ಗ್ರಾಪಂ ಕಾರ್ಯದರ್ಶಿ ನಾಗರಾಜ ಹಲಿಗೇರಿ ಸೇರಿದಂತೆ ಅನೇಕರು ಇದ್ದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!