ಬಿಜೆಪಿ -ಜೆಡಿಎಸ್ ರವರು ರಾಜಕೀಯ ಮಾಡಲಿ, ನಾವು ಮೂರ್ನಾಲ್ಕು ತಿಂಗಳಲ್ಲಿ ರಸ್ತೆ ಮಾಡಿ ತೋರುಸುತ್ತೇವೆ
ಅಕ್ಷರಕ್ರಾಂತಿ ನ್ಯೂಸ್
ಕೊಪ್ಪಳ,: ಕವಲೂರು ಭಾಗದ ಎಲ್ಲಾ ರಸ್ತೆಗಳ ಅಭಿವೃದ್ಧಿಗೆ ಅನುದಾನ ಮಿಸಲಿಟ್ಟಿದ್ದೇವೆ ಮುಂದಿನ 3-4 ತಿಂಗಳ ಒಳಗಡೆ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿ ಪಡಿಸುತ್ತೇವೆ ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಳೆದ ಮೂರ್ನಾಲ್ಕು ದಿನದ ಹಿಂದೆ ರಸ್ತೆ ಅಭಿವೃದ್ಧಿಗಾಗಿ ಕೊಪ್ಪಳ ತಾಲೂಕಿನ ಕವಲೂರು ಗ್ರಾಮದಲ್ಲಿ ನಡೆದ ಪ್ರತಿಭಟನೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಈ ಪ್ರತಿಭಟನೆಯನ್ನು ಕೊಪ್ಪಳದ ಬಿಜೆಪಿ -ಜೆಡಿಎಸ್ ನಾಯಕರು ರಾಜಕೀಯಕ್ಕೆ ಎಳೆದು ತರುವ ಕೆಲಸ ಮಾಡುತ್ತಿದ್ದಾರೆ. ಅವರು ರಾಜಕೀಯ ಮಾಡಲಿ, ನಾವು ರಸ್ತೆ ಮಾಡಿ ತೋರಿಸುತ್ತೇವೆ ಎಂದರು.
ಈಗಾಗಲೇ ಈ ಭಾಗದ ಎಲ್ಲಾ ರಸ್ತೆಗಳ ಅಭಿವೃದ್ಧಿಗೆ ಅನುದಾನ ಮೀಸಲಿಡುವ ಕೆಲಸ ಮಾಡಿದ್ದೇವೆ. ಕೆಲವೊಂದು ಕಾಮಗಾರಿಗಳು ಟೆಂಡರ್ ಹಂತದಲ್ಲಿದ್ದು ಎಲ್ಲಾ ಕ್ರಿಯೆ ಮುಗಿಸಿ ಶೀಘ್ರದಲ್ಲಿ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಪ್ರಾರಂಭ ಮಾಡಿ ಮುಂದಿನ 3-4 ತಿಂಗಳ ಒಳಗಡೆ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿ ಪಡಿಸುತ್ತೇವೆ. ಅಳವಂಡಿ ವ್ಯಾಪ್ತಿಯಲ್ಲಿ ಅಂದಾಜು 68.48 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಂಡಿದ್ದೇವೆ ಎಂದರು.
ಕೊಪ್ಪಳ ತಾಲ್ಲೂಕು ಕವಲೂರಿನಿಂದ ಮುರ್ಲಾಪುರ ವರೆಗೆ ರಸ್ತೆ ಅಭಿವೃದ್ಧಿ 3.5 ಕೋಟಿ, ಕವಲೂರು-ಬನ್ನಿಕೊಪ್ಪ-ಗುಡಗೇರಿ 2.25 ಕೋಟಿ, ಕವಲೂರು -ಬನ್ನಿಕೊಪ್ಪ 7.5 ಕೋಟಿ, ಕವಲೂರು -ಮುರ್ಲಾಪುರ 2.19 ಕೋಟಿ, ಗುಡಗೇರಿ-ಹಳ್ಳಿಕೇರಿ 7.26 ಕೋಟಿ, ಗುಡಗೇರಿ- ಏಕ್ಸಲಾಪುರ 4.47 ಕೋಟಿ, ಅಳವಂಡಿ- ನಿಲೋಗಿಪುರ 1.7 ಕೋಟಿ, ಅಳವಂಡಿ- ಘಟ್ಟರಡ್ಡಿಹಾಳ 3.66 ಕೋಟಿ, ಬೈರಾಪುರ- ಬೆಟಗೇರಿಯ 7.64 ಕೋಟಿ, ಮೋರನಾಳ- ಬೋಚನಹಳ್ಳಿ 1.52 ಕೋಟಿ, ಹೈದರ್ ನಗರ- ಹಟ್ಟಿ 5 ಕೋಟಿ, ಕೇಸಲಾಪುರ ಯಿಂದ ರಾಜ್ಯ ಹೆದ್ದಾರಿ SH -129 ರಸ್ತೆ ಅಭಿವೃದ್ಧಿಗೆ 1.77 ಕೋಟಿ, ಅಳವಂಡಿ- ಬೆಳಗಟ್ಟಿ 20 ಕೋಟಿ ಅನುದಾನ ನೀಡಲಾಗಿದೆ ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಮಾಹಿತಿ ನೀಡಿದ್ದಾರೆ.
More Stories
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸರ್ಕಾರಿ ಶಾಲಾ ವಿದ್ಯಾರ್ಥಿಗಳು
ಬಿಎಸ್ ಪಿ ಸಂಘಟನೆ ಬೆಳೆಸಲು ಶ್ರಮಿಸಿ : ಕೃಷ್ಣಮೂರ್ತಿ
ಪರಿಸರ ಸಮತೋಲನಕ್ಕೆ ವನ್ಯಜೀವಿಗಳ ಪಾತ್ರ ಪ್ರಮುಖವಾಗಿದೆ : ಕೆ.ರಾಜಶೇಖರ ಹಿಟ್ನಾಳ