December 23, 2024

AKSHARA KRAANTI

AKSHARA KRAANTI




ನವ ವಧು-ವರರಿಂದ ಮತದಾನ ಜಾಗೃತಿ

ಮದುವೆ ಸಮಾರಂಭದಲ್ಲಿ ಸ್ವೀಪ್ ಸಮಿತಿಯಿಂದ ವಿನೂತನ ಕಾರ್ಯಕ್ರಮ

ಕೊಪ್ಪಳ,: ಹಾದರಮಗ್ಗಿ ಗ್ರಾಮದ ಪೂಜಾರ ಕುಟುಂಬದ ಸಹೋದರರ ವಿವಾಹ ಸಮಾರಂಭವು ಏಪ್ರಿಲ್ 4 ರಂದು ಭಾಗ್ಯನಗರದ ಬಾಲಾಜಿ ಪಂಕ್ಷನ್‌ ಹಾಲ್ ನಲ್ಲಿ ಜರುಗಿತು.
ವಿವಾಹ ಸಮಾಂಭದಲ್ಲಿ ನವ ವಧು-ವರರು ಮೇ.7 ರಂದು ಲೋಕಸಭಾ ಚುನಾವಣೆ ಜರುಗಲಿರುವ ಪ್ರಯುಕ್ತ ವೇದಿಕೆಯಲ್ಲಿ ನಮ್ಮ ಮತ, ನಮ್ಮ ಹಕ್ಕು, ಪ್ರತಿ ಮತ ಅತ್ಯಮೂಲ್ಯ ತಪ್ಪದೇ ಮತದಾನ ಮಾಡಿ, ನನ್ನ ಮತ ಮಾರಾಟಕ್ಕಿಲ್ಲ, ಮತ ಚಲಾಯಿಸೋಣ ಪ್ರಜಾಪ್ರಭುತ್ವ ಗಟ್ಟಿಗೊಳಿಸೊಣ ಇತ್ಯಾದಿ ಸ್ಲೋಗನ್‌ ಗಳನ್ನು ಒಳಗೊಂಡ ಬಟಿಂಗ್ಸ್‌ ಮೂಲಕ ನವ ವಧು-ವರರು ಮತದಾನ ಜಾಗೃತಿ ಮೂಡಿಸಿದ್ದು ಕಾರ್ಯಕ್ರಮದಲ್ಲಿ ಹಾಜರಿದ್ದವರಿಗೆ ಖುಷಿ ನೀಡಿತು.

ಕಾರ್ಯಕ್ರಮದಲ್ಲಿ ತಾಲೂಕ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ ರವರು ನವ-ವಧು ವರರಿಗೆ ಅಕ್ಷತೆ ಹಾಕುವದರ ಮೂಲಕ ಶುಭ ಆರೈಸಿದರು. ಕಡ್ಡಾಯವಾಗಿ ಮೇ. 7 ರಂದು ತಪ್ಪದೇ ಮತ ಚಲಾಯಿಸಿರೆಂದು ಪೂಜಾರ ಕುಟುಂಬದವರಿಗೆ ಹಾಗೂ ಹಾಜರಿದ್ದವರಿಗೆ ಕರೆ ನೀಡಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿಯ ಐಇಸಿ ಸಂಯೋಜಕರು, ಕಿನ್ನಾಳ ಪಂಚಾಯತ್ ಅಭಿವೃದ್ದಿ ಅಧಿಕಾರಿ ಪರಮೇಶ್ವರಯ್ಯ, ತಾಲೂಕ ಸ್ವೀಪ್‌ ಸಮಿತಿಯ ಸದಸ್ಯರು ಸೇರಿದಂತೆ ಇತರರು ಇದ್ದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!