December 23, 2024

AKSHARA KRAANTI

AKSHARA KRAANTI




ನರೇಗಾ ಕೂಲಿಕಾರರು ಕಡ್ಡಾಯವಾಗಿ ಮತ ಚಲಾಯಿಸಿ : ಸಿಇಓ ರಾಹುಲ್‌ ರತ್ನಂ ಪಾಂಡೆಯ

ಲೋಕಸಭಾ ಚುನಾವಣೆಯ ಸ್ವೀಪ್ ಕಾರ್ಯಕ್ರಮಕೊ

ಕೊಪ್ಪಳ,: ಮತದಾನ ಎನ್ನುವದು ಪವಿತ್ರ ಕಾರ್ಯ, ಪ್ರಜಾಪ್ರಭುತ್ವದಲ್ಲಿ ಮತ ಚಲಾವಣೆಗೆ ಅವಕಾಶ ಇರುವದು ಸಂವಿಧಾನವು ನಮಗೆ ದೊಡ್ಡ ಕೊಡುಗೆಯಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಾಹುಲ್‌ ರತ್ನಂ ಪಾಂಡೆಯ ಹೇಳಿದರು.

ಅವರು ಗುರುವಾರ ಕೊಪ್ಪಳ ತಾಲೂಕಿನ ಬಂಡಿಹರ್ಲಾಪುರ ಗ್ರಾಮ ಪಂಚಾಯತಿಯ ನರೇಗಾ ಕಾಮಗಾರಿ ಸ್ಥಳವಾದ ಬಿ.ಹೊಸಳ್ಳಿ ಗ್ರಾಮದ ಕೆರೆ ಕಾಮಗಾರಿಯಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಹಾಗು ತಾಲೂಕ ಸ್ವೀಪ್ ಸಮಿತಿ ವತಿಯಿಂದ ಮತದಾರರಿಗೆ ಹಮ್ಮಿಕೊಂಡ ಸ್ವೀಪ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮೇ. 7 ರಂದು ಜರುಗುವ ಲೋಕಸಭಾ ಚುನಾವಣೆಯಲ್ಲಿ ಕಡ್ಡಾಯವಾಗಿ ಮತಗಟ್ಟೆ ಕೇಂದ್ರಕ್ಕೆ ಹೋಗಿ ಮತ ಚಲಾಯಿಸುವದರ ಮೂಲಕ ಸುಭದ್ರ ದೇಶವನ್ನಾಗಿ ನಿರ್ಮಿಸೋಣ. ಮತದಾನ ದಿನದಂದು ನಾವು ಸಮಯ ವ್ಯರ್ಥ ಮಾಡದೇ ಚುನಾವಣೆ ಆಯೋಗ ನಿಗದಿಪಡಿಸಿದ ದಾಖಲಾತಿಗಳನ್ನು ತೆಗೆದುಕೊಂಡು ಹೋಗಿ ನಮಗೆ ಸೂಕ್ತ ಎನಿಸುವ ವ್ಯಕ್ತಿಗೆ ಮತ ಚಲಾಯಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ಮಹಿಳಾ ಮತದಾರರಾದ ಯಂಕಮ್ಮ ಉಪ್ಪಾರ ಇವರನ್ನು ವೇದಿಕೆಗೆ ಆಹ್ವಾನಿಸಿದ್ದಕ್ಕೆ ಸಿಇಓ ರವರ ಕಾರ್ಯವೈಖರಿಗೆ ನರೇಗಾ ಕೂಲಿಕಾರರು ಖುಷಿಪಟ್ಟರು.

ಸ್ವೀಪ್‌ ಕಾರ್ಯಕ್ರಮದಲ್ಲಿ ತಾಲೂಕು ಸ್ವೀಪ್‌ ಸಮಿತಿ ಅಧ್ಯಕ್ಷರು ಹಾಗು ಕಾರ್ಯನಿರ್ವಾಹಕ ಅಧಿಕಾರಿಗಳಾದ ದುಂಡಪ್ಪ ತುರಾದಿ, ನರೇಗಾ ಸಹಾಯಕ ನಿರ್ದೇಶಕರು, ಹಿರಿಯ ಮಹಿಳಾ ಮತದಾರ ಯಂಕಮ್ಮ ಉಪ್ಪಾರ, ತಾಲೂಕ ಸ್ವೀಪ್‌ ಸಮಿತಿ ನೋಡಲ್‌ ಅಧಿಕಾರಿ, ತಾಲೂಕ ಯೋಜನಾಧಿಕಾರಿ, ತಾಲೂಕ ಸ್ವೀಪ್‌ ಸಮಿತಿ ಸದಸ್ಯರು, ತಾಲೂಕ ಐಇಸಿ ಸಂಯೋಜಕ, ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು, ತಾಂತ್ರಿಕ ಸಂಯೋಜಕ, ತಾಂತ್ರಿಕ ಸಹಾಯಕರುಗಳು, ಕಾಯಕ ಬಂಧುಗಳು, 1525 ನರೇಗಾ ಕೂಲಿಕಾರರು ಭಾಗವಹಿಸಿದ್ದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!