ಮೂರುವರೆ ದಶಕಗಳ ಬಳಿಕ ಅಲ್ಪಸಂಖ್ಯಾತ ಸಮುದಾಯದ ನಗರಸಭೆ ಸದಸ್ಯನಿಗೆ ಅಧ್ಯಕ್ಷ ಪಟ್ಟ
ಕೊಪ್ಪಳ,: ನಗರಸಭೆ ಕೊಪ್ಪಳ 14 ತಿಂಗಳ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಆ. 21 ಬುಧವಾರ ರಂದು ಚುನಾವಣೆ ನಿಗದಿಯಾಗಿದ್ದು, ಕೊಪ್ಪಳ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ಸದಸ್ಯ, ಅಲ್ಪಸಂಖ್ಯಾತರ ನಾಯಕ ಅಮ್ಮದ್ ಪಟೇಲ್ ಆಯ್ಕೆ ಬಹುತೇಕ ಖಚಿತವಾಗಿದೆ.
ಈ ಚುನಾವಣೆಗೆ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ ಅವರು ಚುನಾವಣಾಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಅವರೇ ಅಂದು ನೂತನ ಅಧ್ಯಕ್ಷರ ಘೋಷಣೆ ಮಾಡಲಿದ್ದಾರೆ. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ 14 ತಿಂಗಳು ಬಾಕಿಯಿದ್ದು, ನಗರಸಭೆ ಗಾದಿಗೇರಲು ಚಟುವಟಿಕೆಗಳು ಬಲು ಜೋರಾಗಿ ನಡೆಯುತ್ತಿವೆ. ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲಾತಿ ನಿಗದಿಯಾಗಿದ್ದು, ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರ ಪ್ರಯತ್ನದಿಂದಾಗಿ 35 ವರ್ಷಗಳ ಬಳಿಕ ಅಲ್ಪಸಂಖ್ಯಾತರಿಗೆ ನಗರಸಭೆ ಅಧ್ಯಕ ಪಟ್ಟ ದೊರೆಯಲಿದೆ. ಈ ಹಿನ್ನೆಲೆಯಲ್ಲಿ ಹಲವು ಸದಸ್ಯರ ಬೆಂಬಲದಿಂದಾಗಿ ಅಲ್ಪಸಂಖ್ಯಾತರ ಸಮುದಾಯದ ಮುಖಂಡ, ನಗರಸಭೆ ಮಾಜಿ ಉಪಾಧ್ಯಕ್ಷ, ಸತತ ನಾಲ್ಕು ಬಾರಿ ನಗರಸಭೆ ಚುನಾವಣೆಯಲ್ಲಿ ವಿಜಯಶಾಲಿಯಾದ ಹಿರಿಯ ಸದಸ್ಯ ಅಮ್ಜದ್ ಪಟೇಲ್ ಅವರು ನಗರಸಭೆ ಅಧ್ಯಕ್ಷರ ಗಾದಿ ಹಿಡಿಯುವ ಹಾದಿ ಸುಗಮವಾಗಿದೆ. ಅಲ್ಲದೆ, ಅಮ್ಮದ್ ಪಟೇಲ್ ರವರು ಸ್ಥಳೀಯ ವಲಯದಲ್ಲಿ ಗುರುತಿಸಿಕೊಂಡಿದ್ದು, ಸಚಿವ ಜಮೀರ್ ಅಹ್ಮದ್ ಖಾನ್ ರವರ ಪ್ರೀತಿಯ ಪ್ರಾತದ ವ್ಯಕ್ತಿಯಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗೆ ಸಹ ಚಿರಪರಿಚಿತ ರಾಗಿರುವುದರಿಂದ ಹೆಚ್ಚಿನ ಅಭಿವೃದ್ಧಿ ಇವರ ಅಧಿಕಾರ ಅವಧಿಯಲ್ಲಿ ನಡೆಯಬಹುದು ಎಂಬ ಲೆಕ್ಕಚಾರ ಮಾಡಲಾಗಿದೆ. ಕೊಪ್ಪಳ ನಗರಕ್ಕೆ ಇನ್ನೂ ಹೆಚ್ಚಿನ ಅನುದಾನ ತರುವಲ್ಲಿ ಇವರು ಶ್ರಮಿಸಬಹುದು ಎನ್ನಲಾಗಿದೆ. ಇನ್ನೂ ಅಧ್ಯಕ್ಷ ಸ್ಥಾನದ ಅವಧಿ ಕೇವಲ 14 ತಿಂಗಳು ಮಾತ್ರ ಉಳಿದ್ದು, ಕೊಪ್ಪಳ ನಗರದ ಅಭಿವೃದ್ಧಿಗಾಗಿ ಹತ್ತು ಹಲವಾರು ಸಮಸ್ಯೆಗಳಿವೆ. ಆದರೆ, ಅಮ್ಮದ್ ಪಟೇಲ್ ಅವರು ನಿರಂತರವಾಗಿ 4 ಬಾರಿ ಗೆಲವು ದಾಖಲಿಸಿ, ಮೂರು ಬಾರಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಇದರ ಜೊತೆಗೆ ಕೆಲವು ದಿನಗಳ ಕಾಲ ಪ್ರಭಾರಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕಡಿಮೆ ಸಮಯವಿದ್ದರೂ ಸಹ ಈ ಸುವರ್ಣ ಅವಕಾಶ ಓರ್ವ ಹಿರಿಯ ಸದಸ್ಯನಿಗೆ ಒಲಿದು ಬಂದಿರುವುದು ಕೊಪ್ಪಳ ನಗರವು ಮತ್ತಷ್ಟು ಅಭಿವೃದ್ಧಿಗೆ ಕಾಣಲಿ ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.ಇನ್ನೂ ಉಪಾಧ್ಯಕ್ಷ ಸ್ಥಾನಕ್ಕೆ ಅಶ್ವಿನಿ ಗದಗಿನಮಠ ರವರ ಹೆಸರು ದಟ್ಟವಾಗಿ ಕೇಳಿ ಬರುತ್ತಿದೆ. ಮಾಜಿ ಸಂಸದ ಸಂಗಣ್ಣ ಕರಡಿಯವರ ಬೆಂಬಲಿಗ ಅಭ್ಯರ್ಥಿ ಯಾಗಿರುವ ಅವರು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಗೊಳ್ಳುವ ಸಾಧ್ಯತೆಗೆ ಇದ್ದು, ಕೊಪ್ಪಳ ನಗರದಲ್ಲಿ ಈ ಹಿಂದೆ ಕರಡಿ ವರ್ಸಸ್ ಹಿಟ್ನಾಳ ರವರ ಸ್ಪರ್ಧೆಯಾಗುತ್ತಿತ್ತು. ಆದರೆ, ಈಗ ಅವರಿಬ್ಬರು ಒಂದೇ ಪಕ್ಷದಲ್ಲಿರುವುದರಿಂದ ಕೊಪ್ಪಳ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಸುಗಮವಾಗಲಿದೆ.
ಇನ್ನೂ ಆ.21 ಬುಧವಾರ ಕೊಪ್ಪಳ ನಗರಸಭೆ ಸಭಾಂಗಣದಲ್ಲಿ ನೂತನ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಅಧ್ಯಕ್ಷರಾಗಿ ಅಮ್ಜದ್ ಪಟೇಲ್, ಉಪಾಧ್ಯಕ್ಷರಾಗಿ ಅಶ್ವಿನಿ ಭಗತ್ ಗದಗಿನಮಠ ಅವರನ್ನು ಆಯ್ಕೆ ಮಾಡಲು ತೀರ್ಮಾನ ಮಾಡಿದ್ದು, ಈಗೇನಿದ್ದರೂ ಚುನಾವಣೆ ಪ್ರಕ್ರಿಯೆ ನಡೆಯುವುದೊಂದೇ ಬಾಕಿ ಇದೆ.
-ಶಿವಕುಮಾರ್ ಹಿರೇಮಠ, ಪತ್ರಕರ್ತರು, ಕೊಪ್ಪಳ
More Stories
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸರ್ಕಾರಿ ಶಾಲಾ ವಿದ್ಯಾರ್ಥಿಗಳು
ಬಿಎಸ್ ಪಿ ಸಂಘಟನೆ ಬೆಳೆಸಲು ಶ್ರಮಿಸಿ : ಕೃಷ್ಣಮೂರ್ತಿ
ಪರಿಸರ ಸಮತೋಲನಕ್ಕೆ ವನ್ಯಜೀವಿಗಳ ಪಾತ್ರ ಪ್ರಮುಖವಾಗಿದೆ : ಕೆ.ರಾಜಶೇಖರ ಹಿಟ್ನಾಳ