ಕೊಪ್ಪಳ,: ಶ್ರೀ ಕೃಷ್ಣ ಜನ್ಮಾಷ್ಠಮಿಯಂದು ನಾನು ಅಧಿಕಾರ ಸ್ವೀಕರಿಸಿದ್ದು ನನಗೆ ಅತೀವ ಸಂತೋಷವಾಗಿದೆ, ಎಲ್ಲ ಸಮಾಜದ ಹಿರಿಯರ ಆಶಿರ್ವಾದದಿಂದ ನಗರಸಭೆ ಅಧ್ಯಕ್ಷನಾಗಿದ್ದು ಜನರಿಗೆ ಶಕ್ತಿ ಮಿರಿ ಸ್ಪಂದಿಸುದಾಗಿ ನಗರಸಭೆ ನೂತನ ಅಧ್ಯಕ್ಷ ಅಮ್ಜದ ಪಟೇಲ್ ಹೇಳಿದರು.
ನಗರದ ಶ್ರೀ ವಿಠ್ಠಲ ಕೃಷ್ಣ ದೇವಸ್ಥಾನದಲ್ಲಿ ಶ್ರೀಮದ್ಯೋಗೀಶ್ವರ ಯಾಜ್ಞವಲ್ಕ್ಯ ಪ್ರತಿಷ್ಠಾನದಿಂದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.ಶ್ರೀಕೃಷ್ಣ ಜನ್ಮಾಷ್ಠಮಿಯಂದು ಪೂಜೆ ಸಲ್ಲಿಸಿ ನಗರಸಭೆ ಅಧ್ಯಕ್ಷನಾಗಿ ಅಧಿಕಾರ ಸ್ವಿಕರಿಸಿದ್ದಾನೆ ನಗರದ ಸರ್ವಾಂಗಿಣ ಅಭಿವೃದ್ಧಿ ಹಾಗೂ ನನ್ನ ಶಕ್ತಮಿರಿ ಸ್ಪಂದಿಸುತ್ತೆನೆ ಎಂದು ಭರವಸೆ ನೀಡಿದರು.
ಶ್ರೀಕೃಷ್ಣ ಜನ್ಮಾಷ್ಠಮಿ ಅಂಗವಾಗಿ ವಿವಿಧ ದಾರ್ಮಿಕ ಹಾಗೂ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಮಂಗಳವಾರ ಬೆಳಿಗ್ಗೆ ಸುಪ್ರಭಾತ, ನಿರ್ಮಾಲ್ಯಾಭಿಷೇಕ, ತೋಟಿಲು ಸೇವೆ, ಪಂಚಾಮೃತ ಅಭಿಷೇಕ ನೈವೇದ್ಯ, ಮಹಾಮಂಗಳಾರತಿ ಪಾರಣಿ ತೀರ್ಥ ಪ್ರಸಾದ ಜರುಗಿತು. ಪಂಡಿತರಿಂದ ಪ್ರವಚನ ಸೇವಾಕರ್ತರಿಗೆ ಫಲ ಮಂತ್ರಾಕ್ಷತೆ, ಗ್ರಾಮ ಪ್ರದಕ್ಷಿಣೆ ಮಹಿಳೆರಿಂದ ಭಜನೆ ಜರುಗಿತು.
ದೇವಸ್ಥಾನದಲ್ಲಿ ಮಕ್ಕಳಿಂದ ಗೋಪಾಲ ಕಾವಲಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಈ ಸಂದರ್ಭದಲ್ಲಿ ಶ್ರೀಮದ್ಯೋಗೀಶ್ವರ ಯಾಜ್ಞವಲ್ಕ್ಯ ಪ್ರತಿಷ್ಠಾನದ ಅದ್ಯಕ್ಷ ರಾಘವೇಂದ್ರ ಪೋತೆದಾರ, ಕಾರ್ಯದರ್ಶಿ ರಾಜೇಂದ್ರ ಜಕ್ಲಿ, ಜೆಡಿಎಸ್ ಮುಖಂಡ ವಿರೇಶ ಮಹಾಂತಯ್ಯನಮಠ, ಮಂಜುನಾಥ ಹಳ್ಳಿಕೇರಿ ಇತರರು ಇದ್ದರು.
More Stories
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸರ್ಕಾರಿ ಶಾಲಾ ವಿದ್ಯಾರ್ಥಿಗಳು
ಬಿಎಸ್ ಪಿ ಸಂಘಟನೆ ಬೆಳೆಸಲು ಶ್ರಮಿಸಿ : ಕೃಷ್ಣಮೂರ್ತಿ
ಪರಿಸರ ಸಮತೋಲನಕ್ಕೆ ವನ್ಯಜೀವಿಗಳ ಪಾತ್ರ ಪ್ರಮುಖವಾಗಿದೆ : ಕೆ.ರಾಜಶೇಖರ ಹಿಟ್ನಾಳ