December 23, 2024

AKSHARA KRAANTI

AKSHARA KRAANTI




ತುಂಗಭದ್ರಾ ಜಲಾಶಯಕ್ಕೆ ಪ್ರವಾಸೋದ್ಯಮ ಸಚಿವ ಹೆಚ್.ಕೆ. ಪಾಟೀಲ್ ಭೇಟಿ

ಸ್ಟಾಪಲಾಗ್ ಅಳವಡಿಕೆ ಕಾರ್ಯ ವೀಕ್ಷಣೆ

ಕೊಪ್ಪಳ,: ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಮತ್ತು ಪ್ರವಾಸೋದ್ಯಮ ಇಲಾಖೆ ಸಚಿವರಾದ ಹೆಚ್.ಕೆ ಪಾಟೀಲ್ ಅವರು ಆಗಸ್ಟ್ 17ರಂದು ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿದರು.

ತುಂಗಭದ್ರಾ ಜಲಾಶಯ ಗೇಟ್ ನಂ.19ರ ಚೈನ್ ಲಿಂಕ್ ಕಡಿತವಾಗಿ ಗೇಟ್ ದುರಸ್ತಿ ಹಿನ್ನೆಲೆಯಲ್ಲಿ ನದಿಗೆ ನೀರು ಬಿಟ್ಟಿರುವುದನ್ನು ಸಚಿವರು ಇದೆ ವೇಳೆ ವೀಕ್ಷಣೆ ನಡೆಸಿದರು. ಬಳಿಕ ಡ್ಯಾಮನ್ ನಂ.19ರ ಗೇಟ್‌ಗೆ ಸ್ಟಾಪಲಾಗ್ ಅಳವಡಿಕೆ ಕಾರ್ಯದ ಬಗ್ಗೆ ಮಾಹಿತಿ ಪಡೆದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಬಹಳ ದೊಡ್ಡ ಪ್ರದೇಶಕ್ಕೆ ನೀರಾವರಿ ಯೋಜನೆ ಹೊಂದಿರುವಂತಹ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಹೊಂದಿದ ಒಂದು ಅಧ್ಬುತವಾದ ಸೃಷ್ಟಿ ತುಂಗಭದ್ರಾ ಜಲಾಶಯವಾಗಿದೆ. ಆದರೆ ಏನೋ ದುರ್ದೈವ ಆಕಸ್ಮಿಕ ಘಟನೆಯಿಂದಾಗಿ ಜಲಾಶಯದ ಕ್ರಸ್ಟ್ ಗೇಟ್ 19 ಚೈನ್ ಲಿಂಕ್ ಕಟ್ಟಾದ ಹಿನ್ನಲೆಯಲ್ಲಿ ನೀರು ತುಂಬಾ ರಭಸವಾಗಿ ನೀರು ಹರಿಯುತ್ತಿರುವುದರಿಂದ ಸ್ಟಾಪ್ ಲಾಗ್ ಗೇಟನ್ನು ಅಳವಡಿಸಲು ಸತತ ಪ್ರಯತ್ನಗಳು ನೆಡಿದಿದ್ದು, ಕರ್ನಾಟಕದ ಜಲ ಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಇಂಜಿನಿಯರಗಳ ತಂಡ ಸ್ಥಳದಲ್ಲಿಯೇ ಇದ್ದಾರೆ. ಕೊಪ್ಪಳ ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರು ಪ್ರತಿ ಹಂತದ ಕಾರ್ಯಚರಣೆ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಒಂದು ಸ್ಟಾಪ್ ಲಾಗ್ ಗೇಟ್ ಅಳವಡಿಕೆ ಕಾರ್ಯ ಯಶಸ್ವಿಯಾಗಿದ್ದು, ಇನ್ನೂ ಎರಡು ಸ್ಟಾಪ್ ಲಾಗ್ ಗೇಟ್ ಗಳಿಗಾಗಿ ಜೆ.ಎಸ್.ಡಬ್ಲೂ ನಿಂದ ಉಳಿದ ಭಾಗಗಳು ಬರುತ್ತವೆ. ಇನ್ನೂ ಎರಡು ದಿನಗಳಲ್ಲಿ ಅವುಗಳನ್ನು ಯಶಸ್ವಿಯಾಗಿ ಜೋಡಣೆಗೊಂಡರೆ ಉತ್ತಮ ಸುದ್ದಿ ಸಿಗಲಿದೆ ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಅಮರೇಗೌಡ ಪಾಟೀಲ ಬಯ್ಯಾಪೂರ, ಮುಖಂಡರಾದಜನಾರ್ಧನ ಹುಲಿಗಿ, ಕೆ.ಕಾಳಪ್ಪ ಸೇರಿದಂತೆ ಇತರರು ಇದ್ದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!