ಕೊಪ್ಪಳ,: ಗದುಗಿನ ವೀರೇಶ್ವರ ಪುಣ್ಯಾಶ್ರಮದ ಸಪ್ತ ಸ್ವರದ ಮಹರ್ಷಿ ಡಾ. ಪಂಡಿತ ಪುಟ್ಟರಾಜ ಗವಾಯಿಗಳ 110 ನೇ ಜಯಂತ್ಯೊತ್ಸವದ ಪ್ರಯುಕ್ತ ಮಾ.3 ರವಿವಾರದಂದು ಗದುಗಿನ ಡಾ.ವ್ಹಿ.ಬಿ. ಹೀರೆಮಠ ಮೆಮೋರಿಯಲ್ ಪ್ರತಿಷ್ಠಾನ ಮತ್ತು ಅಶ್ವಿನಿ ಪ್ರಕಾಶನ ಗದಗ ಇವರಿಂದ ಕೊಡುವ “ಗುರು ಪುಟ್ಟರಾಜ ಶ್ರೀ ಸದ್ಭಾವನ ಪ್ರಶಸ್ತಿ” ಯನ್ನು ಕೊಪ್ಪಳ ತಾಲುಕಿನ ಮೈನಹಳ್ಳಿ ಗ್ರಾಮದ ಡಾ.ಷಣ್ಮುಖಯ್ಯ ತೋಟದವರ ಸಾಹಿತ್ಯ, ರಂಗಭೂಮಿ, ಕಿರುತೆರೆ, ಚಲನಚಿತ್ರ. ಸಮಾಜಸೇವೆ ಗುರುತಿಸಿ ಶ್ರೀವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿಗಳು ಹಾಗೂ ಸಂಸ್ಥೆಯ ಗೌರವಾಧ್ಯಕ್ಷರಾದ ಶ್ರೀಕಲ್ಲಯ್ಯಜ್ಜ ನವರು ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿ ಆಶೀರ್ವದಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಘ.ಮ.ಪು. ಧರ್ಮರತ್ನ ಡಾ.ಕೈಲಾಸನಾಥ ಸ್ವಾಮಿಗಳು ವಿಜಯಪುರ, ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ವ್ಹಿ.ವ್ಹಿ. ಹಿರೇಮಠ, ಸಾರ್ವಜನಿಕ ಗ್ರಂಥಾಲಯ ಇಲಾಖೆ ಬೆಂಗಳೂರಿನ
ನಿರ್ದೆಶಕರಾದ ಡಾ.ಸತೀಶ ಕುಮಾರ .ಎಸ್. ಹೊಸಮನಿ, ಬಿ.ಎಪ್. ದಂಡಿನ ಸೇರಿದಂತೆ ಅನೇಕರು ಇದ್ದರು.
More Stories
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸರ್ಕಾರಿ ಶಾಲಾ ವಿದ್ಯಾರ್ಥಿಗಳು
ಬಿಎಸ್ ಪಿ ಸಂಘಟನೆ ಬೆಳೆಸಲು ಶ್ರಮಿಸಿ : ಕೃಷ್ಣಮೂರ್ತಿ
ಪರಿಸರ ಸಮತೋಲನಕ್ಕೆ ವನ್ಯಜೀವಿಗಳ ಪಾತ್ರ ಪ್ರಮುಖವಾಗಿದೆ : ಕೆ.ರಾಜಶೇಖರ ಹಿಟ್ನಾಳ