ಕೊಪ್ಪಳ,: ಕೆಲವರು ಹೇಳುತ್ತಾರೆ, ಮಾಡುವುದಿಲ್ಲ, ಕೆಲವರು ಮಾಡುತ್ತಾರೆ ಹೇಳುವುದಿಲ್ಲ. ಆದರೆ, ಶ್ರೀಗವಿಸಿದ್ಧೇಶ್ವರ ಮಹಾಸ್ವಾಮಿಗಳು ಹೇಳುವವರಲ್ಲ, ಮಾಡಿ ತೋರಿಸುವವರು ಎಂದು ಮುಂಡರಗಿಯ ನಾಡೋಜ ಡಾ. ಶ್ರೀಅನ್ನದಾನೇಶ್ವರ ಮಹಾಸ್ವಾಮಿಗಳು ಹೇಳಿದರು.
ನಗರದ ಗವಿಮಠ ಆವರಣದಲ್ಲಿ ಶ್ರೀ ಮರಿಶಾಂತವೀರ ಮಹಾಸ್ವಾಮಿಗಳ ಪುಣ್ಯಾರಾಧನೆ ನಿಮಿತ್ಯ 5 ಸಾವಿರ ವಿದ್ಯಾರ್ಥಿಗಳ ವಸತಿ ಹಾಗೂ ಪ್ರಸಾದ ನಿಲಯದ ಲೋಕಾರ್ಪಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಈಗಿನ ಗವಿಮಠ ಶ್ರೀಗಳಿಗೆ ದೂರದೃಷ್ಟಿಯಿದೆ. ಕಳಕಳಿ ಇದೆ. ಹೀಗಾಗಿಯೇ ಇಂಥ ಮಹಾನ್ ಕಾರ್ಯಗಳನ್ನು ಮಾಡುತ್ತಿದ್ದಾರೆ. ಸುಂದರವಾದ ಉಚಿತ ವಸತಿ ಹಾಗೂ ಪ್ರಸಾದ ನಿಲಯ ಲೋಕಾರ್ಪಣೆ ಮಾಡಿರುವುದು ಸಂತಸ ತರಿಸಿದೆ. ಗವಿಸಿದ್ದೇಶ್ವರ ಕೃಪೆ ದೊಡ್ಡದು, ವಿದ್ಯಾರ್ಥಿಗಳಿಗೆ ವಸತಿ ನಿಲಯ ಉದ್ಘಾಟನೆ ಮಾಡಿದ್ದು ಸಂತಸ ತರಿಸಿದೆ.
ಶ್ರೀಗವಿಮಠದ ಮಹಾ ಶಕ್ತಿ ನಮಗೆ ಕಾಣುತ್ತಿದೆ. ಅವರ ಕ್ರಿಯಾಶೀಲತೆ ದೊಡ್ಡ ಪ್ರಮಾಣದಲ್ಲಿ ನಾಡಿಗೆ ದೊಡ್ಡ ಕೊಡುಗೆ ಕೊಟ್ಟಿದೆ. ಇಲ್ಲಿನ ದಾನಿಗಳು ಸಹ ದಾನ ಕೊಡುವ ಮೂಲಕ ಇಂತಹ ಮಹಾನ್ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ಅನ್ನದಾನ ಮಾಡೋದು ಶ್ರೇಷ್ಠ, ವಿದ್ಯಾದಾನ ಮಾಡುವುದರಿಂದ ಜೀವನ ಪರ್ಯಂತ ಜೀವನ ಸುಧಾರಣೆ ಕಾಣುತ್ತದೆ. ಅಂಥ ಕೆಲಸಕ್ಕೆ ಶ್ರೀಗವಿಮಠವು ಮುಂದಾಗಿದೆ. ಹಿಂದಿನ ಶ್ರೀಗಳು ಹಾಕಿ ಕೊಟ್ಟ ಶಿಕ್ಷಣದ ಬುನಾದಿಯು ಇಂದು ಎಲ್ಲ ಹಂತದಲ್ಲಿಯೂ ಬೆಳೆದು ನಿಂತಿವೆ. ಕೊಪ್ಪಳ ಗವಿಮಠದ ಶಿಕ್ಷಣ ಸಂಸ್ಥೆಗಳು ಎಲ್ಲೆಡೆಯೂ ಹೆಸರಾಗಿವೆ. ಗವಿಶ್ರೀಗಳ ಮಾಡುವ ಕಾರ್ಯ ಮಾಡಿದ ಮೇಲೆಯೇ ನಮಗೆ ಗೊತ್ತಾಗುತ್ತವೆ. ಈನಾಡನ್ನು ಉದ್ದರಿಸುವ ಕಾರ್ಯ ಹೀಗೆ ಸಾಗಲಿ ಎಂದರು.
ಅಕ್ಷರಕ್ರಾಂತಿ ಮೂಡಿಸಿದ ಹಾಜಬ್ಬ ಹಾಗೆಯೇ ಹುಚ್ಚಮ್ಮ ಅವರಿಂದ ಕಟ್ಟಡ ಲೋಕಾರ್ಪಣೆಗೊಳಿಸಲಾಯಿತು.ಕಾರ್ಯಕ್ರಮದಲ್ಲಿ ವಿವಿಧ ಮಠಾದೀಶರು, ಜಿಲ್ಲಾಧಿಕಾರಿ ನಲಿನ್ ಅತುಲ್, ಎಸ್ಪಿ ಯಶೋಧಾ ವಂಟಗೋಡಿ, ಮಾಜಿ ಸಂಸದ ಸಂಗಣ್ಣ ಕರಡಿ, ಶಾಸಕರಾದ ದೊಡ್ಡನಗೌಡ ಪಾಟೀಲ್, ಜನಾರ್ಧನ ರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ, ಶರಣೇಗೌಡ ಪಾಟೀಲ ಬಯ್ಯಾಪೂರ, ಕಾಡಾ ಅಧ್ಯಕ್ಷ ಹಸನಸಾಬ ದೋಟಿಹಾಳ, ಡಾ.ಬಸವರಾಜ ಕ್ಯಾವಟರ, ಸಿದ್ದಾರ್ಥ ಆನಂದಸಿಂಗ್, ಬಸವರಾಜ ಹಿಟ್ನಾಳ, ಹೆಚ್. ಆರ್. ಶ್ರೀನಾಥ್, ಕರಿಯಣ್ಣ ಸಂಗಟಿ, ಸಿವಿ ಚಂದ್ರಶೇಖರ, ನವೀನ್ ಗುಳಗಣ್ಣವರ, ಮಹಾಂತೇಶ ಪಾಟೀಲ ಮೈನಳ್ಳಿ, ಸುರೇಶ ಭೂಮರಡ್ಡಿ, ಬಸವರಾಜ ಪುರದ ಸೇರಿದಂತೆ ಭಕ್ತರು ಇದ್ದರು.
More Stories
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸರ್ಕಾರಿ ಶಾಲಾ ವಿದ್ಯಾರ್ಥಿಗಳು
ಬಿಎಸ್ ಪಿ ಸಂಘಟನೆ ಬೆಳೆಸಲು ಶ್ರಮಿಸಿ : ಕೃಷ್ಣಮೂರ್ತಿ
ಪರಿಸರ ಸಮತೋಲನಕ್ಕೆ ವನ್ಯಜೀವಿಗಳ ಪಾತ್ರ ಪ್ರಮುಖವಾಗಿದೆ : ಕೆ.ರಾಜಶೇಖರ ಹಿಟ್ನಾಳ