December 23, 2024

AKSHARA KRAANTI

AKSHARA KRAANTI




ಕೊಪ್ಪಳ ನಗರಸಭೆ: ಕನ್ನಡ ಭಾಷೆ ನಾಮಫಲಕಗಳ ಅಳವಡಿಕೆಗೆ ಸೂಚನೆ

ಕೊಪ್ಪಳ,: ನಗರಸಭೆ ಕೊಪ್ಪಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅಂಗಡಿ, ಮುಂಗಟ್ಟುಗಳ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆ ಬಳಸಬೇಕು.
ಕರ್ನಾಟಕ ಸರ್ಕಾರದ ಅಧಿಸೂಚನೆ ಕನ್ನಡ ಭಾಷಾ ಅಭಿವೃದ್ಧಿ ಅಧಿನಿಯಮ 2023ರನ್ವಯ ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅಂಗಡಿ ವ್ಯಾಪಾರ, ಉದ್ದಿಮೆ ಹಾಗೂ ಇತರೆ ವಹಿವಾಟು ನಡೆಸುವ ಮಾಲೀಕರು ತಮ್ಮ ಎಲ್ಲಾ ಅಂಗಡಿ ಮುಂಗಟ್ಟು, ಹೋಟೆಲ್‌ಗಳು, ವ್ಯವಹಾರ ಉದ್ದಿಮೆಗಳು, ಟ್ರಸ್ಟ್ ಗಳು, ಸಮಾಲೋಚನಾ ಕೇಂದ್ರಗಳು, ಆಸ್ಪತ್ರೆಗಳು, ಪ್ರಯೋಗ ಶಾಲೆಗಳು ಹಾಗೂ ಮನೋರಂಜನಾ ಕೇಂದ್ರಗಳು ಸೇರಿದಂತೆ ಇವುಗಳ ಮೇಲೆ ಪ್ರದರ್ಶಿಸುವ ನಾಮಫಲಕಗಳಲ್ಲಿ ಕನ್ನಡ ಭಾಷೆಯು ಶೇ.60 ರಷ್ಟಿರಬೇಕು ಹಾಗೂ ಕನ್ನಡ ಭಾಷೆಯು ನಾಮಫಲಕದ ಮೇಲ್ಭಾಗದಲ್ಲಿರಬೇಕು. ಸರ್ಕಾರದ ಅಧಿಸೂಚನೆಯನ್ನು ಎಲ್ಲ ವ್ಯಾಪಾರಸ್ಥರು ಕಡ್ಡಾಯವಾಗಿ ಪಾಲಿಸಬೇಕು.
ಯಾವುದೇ ವ್ಯಾಪಾರಸ್ಥರ ನಾಮಫಲಕಗಳು ಶೇ.60ರಷ್ಟು ಕನ್ನಡ ಭಾಷೆಯಲ್ಲಿ ಇರದಿದ್ದರೆ ಅಂತಹ ನಾಮಫಲಕಗಳನ್ನು 7 ದಿನಗೊಳಗಾಗಿ ಬದಲಾಯಿಸಬೇಕು. ತಪ್ಪಿದಲ್ಲಿ ನಗರಸಭೆ/ಪುರಸಭೆ ಕಾಯ್ದೆಯ ಪ್ರಕಾರ ನಾಮಫಲಕಗಳನ್ನು ತೆರವುಗೊಳಿಸಿ ದಂಡ ವಿಧಿಸಲಾಗುವುದು ಎಂದು ನಗರಸಭೆಯ ಪೌರಾಯುಕ್ತರಾದ ಗಣಪತಿ ಪಾಟೀಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!