December 23, 2024

AKSHARA KRAANTI

AKSHARA KRAANTI




ಕೆಎಸ್ ಆಸ್ಪತ್ರೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ

ಕೆಎಸ್ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಬಸವರಾಜ್ ಕ್ಯಾವಟರ ಧ್ವಜಾರೋಹಣವನ್ನು ನೆರವೇರಿಸಿದರು

ಕೊಪ್ಪಳ,: ನಗರದ ಕೆಎಸ್ ಆಸ್ಪತ್ರೆ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.

ಕೆಎಸ್ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಬಸವರಾಜ್ ಕ್ಯಾವಟರ ಧ್ವಜಾರೋಹಣವನ್ನು ನೆರವೇರಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಾಗಿ ಡಾ. ಕೆ ಜಿ ಕುಲಕರ್ಣಿ ಅವರು ಮಾತನಾಡಿ ಸ್ವತಂತ್ರ ಹೋರಾಟಕ್ಕೆ ಹೋರಾಡಿದ ವೀರ ಯೋಧರನ ನೆನೆಯುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
ಸಾಧಕರ ಪರವಾಗಿ ಮಾತನಾಡಿದ ಪ್ರಭಾಕರ್ ಅವರು, 78ನೇ ಸ್ವಾತಂತ್ರ ದಿನಾಚರಣೆಯ ಪ್ರಯುಕ್ತ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನ ಸುತ್ತಿರುವುದು. ಕೆಎಸ್ ಆಸ್ಪತ್ರೆ ಎಲ್ಲಾ ಸಿಬ್ಬಂದಿಗಳಿಗೆ ಮತ್ತು ಮುಖ್ಯಸ್ಥರಿಗೆ ಅಭಿನಂದನೆಗಳನ್ನ ಸಲ್ಲಿಸುತ್ತೇನೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕೆಎಸ್ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಬಸವರಾಜ್ ಕ್ಯಾವಟರ ಅವರು ಮಾತನಾಡಿ, 78ನೇ ಸ್ವಾತಂತ್ರ ದಿನಾಚರಣೆಯಲ್ಲಿ ನಾವೆಲ್ಲ ಇಂದು ಸಂಪೂರ್ಣ ಸ್ವಾತಂತ್ರವನ್ನು ಪಡೆದಿದ್ದರೆ ಅದಕ್ಕೆ ಸಾವಿರಾರು ವ್ಯಕ್ತಿಗಳ ತ್ಯಾಗ ಬಲಿದಾನ ಮತ್ತು ಪ್ರಾಣಾರ್ಪಣೆಯ ಕಾರಣದಿಂದ ಸಾಧ್ಯವಾಗಿದೆ ಎಂಬುದನ್ನ ಎಂದಿಗೂ ಮರೆಯಬಾರದು. ಅವರ ಸ್ಮರಣೆಯಲ್ಲಿ ನಾವೆಲ್ಲ ಬದುಕುವಂತಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಡಾ. ಕೆ ಜಿ ಕುಲಕರ್ಣಿ, ಹಿರಿಯ ವೈದ್ಯರು ಕೊಪ್ಪಳ. ವೈ ಎಂ ಕೋಲ್ಕರ್ಹಿ, ಹಿರಿಯ ಪತ್ರಕರ್ತರು ಕೊಪ್ಪಳ, ಪ್ರಭಾಕರ್ ವಿಕಲಚೇತನ ತಜ್ಞರು ಸಾಮರ್ಥ್ಯ ಸಂಸ್ಥೆ, ಶಿವಪ್ಪ ಶೆಟ್ಟರ್, ಸ್ವಾತಂತ್ರ ಹೋರಾಟಗಾರರು, ವಿ ಆರ್ ಹಿರೇಮಠ, ವಿಜ್ಞಾನ ಶಿಕ್ಷಕರು ಗವಿಸಿದ್ದೇಶ್ವರ ಪ್ರೌಢಶಾಲೆ, ಕುಕುನೂರು, ಸತೀಶ್ ಶಿಕ್ಷಕರು, ಕಾಶಯ್ಯ ಸ್ವಾಮಿ, ಶಿಕ್ಷಣ ಪ್ರೇಮಿಗಳು ಹಿರಿಯ ನಾಗರಿಕರು ಹೊಸ ಬಂಡಿಹರ್ಲಾಪುರ, ಪ್ರಕಾಶ್ ಹಾದಿಮನಿ ವಕೀಲರು. ಪ್ರಧಾನ ಕಾರ್ಯದರ್ಶಿ ಕೊಪ್ಪಳ ಜಿಲ್ಲಾ ವಕೀಲರ ಸಂಘ ಕೊಪ್ಪಳ, ಕುಮಾರಿ ಪರಿಮಳ ವಿಜ್ಞಾನ ವಿಭಾಗದಲ್ಲಿ 91%, ನೀಟ್ 411, ಪ್ರಕಾಶ್ ಕಂದಕೂರ ಅಂತರಾಷ್ಟ್ರೀಯ ಛಾಯಾಗ್ರಾಹಕ ಪ್ರಶಸ್ತಿ ಪುರಸ್ಕೃತರು ಕೊಪ್ಪಳ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಸಿಬ್ಬಂದಿಗಳಾದ ವಿಶ್ವನಾಥ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಪೂರ್ಣಿಮಾ ಸಹಾಯಕ ವ್ಯವಸ್ಥಾಪಕ ಅಧಿಕಾರಿಗಳು, ಕೆಎಸ್ ಕಾಲೇಜಿನ ಪ್ರಾಚಾರ್ಯರಾದ ಲಕ್ಷ್ಮೀನಾರಾಯಣ ಅಯ್ಯರ, ಗಿರೀಶ್ ಪಾಟೀಲ್, ಡಾ.ರೇಖಾ ವಿ ಎಸ್, ಡಾ.ಸುಮಾ ಹಳ್ಳಿಗುಡಿ ಡಾ. ರವಿಕುಮಾರ್ ಎಂ, ಡಾ.ಕೃಷ್ಣಮೂರ್ತಿ ಡಾ.ನಾಹಿಲ್, ಆಸ್ಪತ್ರೆಯ ಸಿಬ್ಬಂದಿಗಳು, ಕೆ.ಎಸ್. ಸ್ಕೂಲ್ ಮತ್ತು ಕಾಲೇಜ್ ಆಫ್ ನರ್ಸಿಂಗ್, ಪ್ಯಾರಾ ಮೆಡಿಕಲ್ ಸೈನ್ಸ್, ಫಿಜಿಯೋಥೆರಪಿ ಕಾಲೇಜಿನ ಉಪನ್ಯಾಸಕರು ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಕಾರ್ಯಕ್ರಮಗಳನ್ನು ಉಪನ್ಯಾಸಕರಾದ ಶಿವನಗೌಡ ಪೊಲೀಸ್ ಪಾಟೀಲ್ ನವಲಹಳ್ಳಿ ನಿರೂಪಿಸಿ, ಸಂಪತ್ ಕುಮಾರ್ ಅವರು ನಿರ್ವಹಿಸಿದರು.

 

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!