ಕೊಪ್ಪಳ,: ಜಿಲ್ಲೆಯ ಯಲಬುರ್ಗಾ ಹಾಗೂ ಕುಕನೂರ ತಾಲೂಕಿನ ರೈತರು ತಮ್ಮ ಜಮೀನಿನಲ್ಲಿ ಅತೀ ಹೆಚ್ಚಾಗಿ ಕೊತಂಬರಿ ಸೊಪ್ಪನ್ನು ಬೆಳೆದಿದ್ದು ಉತ್ತಮ ಆದಾಯದ ನಿರೀಕ್ಷೆಯಲ್ಲಿಯಿದ್ದರು.
ಆದರೆ, ಕೊತಂಬರಿ ಬೆಲೆ ದಿಡೀರ್ ಕುಸಿತ ಕಂಡಿದ್ದು, ಖರ್ಚು ಮಾಡಿದ ಹಣವು ಹಿಂದಿರುಗಲಾರದ ಪರಿಸ್ಥಿತಿ ನಿರ್ಮಾಣವಾಗಿದೆ.
ಹಾವೇರಿ ಜಿಲ್ಲೆಯ ಅನೇಕ ಕೊತಂಬರಿ ಸೊಪ್ಪಿನ ಖರೀದಿದಾರರು ಆಗಮಿಸಿದ್ದು, ರೈತರು ಹೇಳುವ ಬೆಲೆಗೆ ಖರೀದಿಸಲು ಹಿಂಜರಿಯುತ್ತಿದ್ದಾರೆ. ಯಾಕೆಂದರೆ ಅವರಿಗೂ ಸಹಿತ ಬೆಲೆ ಕುಸಿತದ ಹೊಡೆತ ಬಿದ್ದಿದೆ.ಖರೀದಿದಾರರು ಮಾಧ್ಯಮದವರೊಂದಿಗೆ ಮಾತನಾಡಿ, ನಾವು ಸುಮಾರು ಹತ್ತು ವರ್ಷಕ್ಕಿಂತ ಹೆಚ್ಚು ಈ ವ್ಯಾಪಾರ ಮಾಡಿಕೊಂಡು ಬರುತ್ತಿದ್ದು ಕಳೆದ ಬಾರಿ ನಷ್ಟವಾಗಿದ್ದರಿಂದ ಕಂಗಾಲಾಗಿದ್ದ ನಮಗೆ, ಈ ಬಾರಿ ಅದಕ್ಕಿಂತ ಹತ್ತು ಪಟ್ಟು ನಷ್ಟವಾಗಿದೆ. ಬೆಲೆ ಕುಸಿತದಿಂದ ನಮಗೆ ಹಾಗೂ ರೈತರಿಗೆ ತುಂಬಾ ನಷ್ಟವಾಗಿದೆ. ನಮ್ಮ ಒಂದು ಗಾಡಿಯ ಬಾಡಿಗೆ 32 ಸಾವಿರವಾಗುತ್ತದೆ ಹಾಗೂ ಕೂಲಿಯವರಿಗೆ 15 ಸಾವಿರ ಹಾಗೂ ಒಂದು ಏಕರೆ ಕೊತಂಬರಿ ಸೊಪ್ಪಿಗೆ ರೈತರಿಗೆ ಹತ್ತರಿಂದ ಹದಿನೈದು ಸಾವಿರ ಹಣ ನೀಡಬೇಕು. ಇಷ್ಟೆಲ್ಲಾ ಖರ್ಚುಮಾಡಿದ ವ್ಯಾಪಾರ ಮಾಡಲು ಹೋದರೆ ಕೇಳುವವರೇ ಇಲ್ಲವಾಗಿದೆ. ಸರಕಾರ ಈ ಕೂಡಲೆ ರೈತರ ಹಾಗೂ ಖರಿದಿದಾರರ ಬೆಂಬಲಕ್ಕೆ ಬರಬೇಕು. ಇಲ್ಲವಾದಲ್ಲಿ ರೈತರಿಗೆ ಹಾಗೂ ಖರೀದಿದಾರರು ತುಂಬಾ ದೊಡ್ಡ ಮಟ್ಟದ ನಷ್ಟ ಅನುಭವಿಸಬೇಕಾಗುತ್ತದೆ. ಆದ್ದರಿಂದ ಕರ್ನಾಟಕ ಸರಕಾರ ಹಾಗೂ ಮಹಾರಾಷ್ಟ್ರ ಸರಕಾರಗಳು ವ್ಯಾಪಾರಕ್ಕೆ ಅನುಕೂಲ ಕಲ್ಪಿಸಬೇಕು ಎಂದರು.
ಈ ಸಂದರ್ಭದಲ್ಲಿ ಖರೀದಿದಾರರಾದ ಸಮೀರ್ ಅಹ್ಮದ್ ಚನ್ನಾಪೂರ.ಭಾಷು ಶೇಷಗೀರಿ. ಇರಪಾನ್ ಎಣ್ಣಿ. ಮಕ್ಬುಲ್ ಚನ್ನಾಪೂರ.ಸಾಧಿಕ್ ಇಟಗಿ. ಮುನೀರ್ ತಹಸೀಲ್ದಾರ ಸೇರಿದಂತೆ ಅನೇಕರು ಇದ್ದರು.
More Stories
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸರ್ಕಾರಿ ಶಾಲಾ ವಿದ್ಯಾರ್ಥಿಗಳು
ಬಿಎಸ್ ಪಿ ಸಂಘಟನೆ ಬೆಳೆಸಲು ಶ್ರಮಿಸಿ : ಕೃಷ್ಣಮೂರ್ತಿ
ಪರಿಸರ ಸಮತೋಲನಕ್ಕೆ ವನ್ಯಜೀವಿಗಳ ಪಾತ್ರ ಪ್ರಮುಖವಾಗಿದೆ : ಕೆ.ರಾಜಶೇಖರ ಹಿಟ್ನಾಳ