December 23, 2024

AKSHARA KRAANTI

AKSHARA KRAANTI




ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ಯಾವಾಗ ? : ಡಾ. ಬಸವರಾಜ ಎಸ್ ಕ್ಯಾವಟರ್

ಕೊಪ್ಪಳ,: ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಬಹುದಿನಗಳ ಬೇಡಿಕೆಯಾದ ಪ್ರತ್ಯೇಕ ಸಚಿವಾಲಯ ಯಾವಾಗ ಸಚಿವ ಸಂಪುಟದಲ್ಲಿ ಪ್ರಸ್ತಾಪಿಸುವಿರಿ? ಎಂದು ಕೊಪ್ಪಳ ಲೋಕಸಭಾ ಕ್ಷೇತ್ರ ನಿಕಟಪೂರ್ವ ಅಭ್ಯರ್ಥಿ ಹಾಗೂ ಬಿಜೆಪಿ ರಾಜ್ಯ ಕಾರ್ಯಕರಣಿ ಸದಸ್ಯರಾದ ಡಾ. ಬಸವರಾಜ ಎಸ್ ಕ್ಯಾವಟರ್ ಪ್ರಶ್ನಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕಲ್ಯಾಣ ಕರ್ನಾಟಕ ಉತ್ಸವ ದಿನದಂದೇ ಸಚಿವ ಸಂಪುಟ ಸಭೆ ನಡೆಯುತ್ತಿದೆ, ಆದರೆ ಅದು ಕೇವಲ ಹೆಸರಿಗೆ ಮಾತ್ರ ಸೀಮಿತವಾಗಿದೆ. ಅತಿ ಹಿಂದುಳಿದ ಪ್ರದೇಶವಾಗಿರುವ ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ಅದಷ್ಟು ಬೇಗನೆ ಸ್ಥಾಪನೆ ಮಾಡಲಿ. ಈ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಕಾರ್ಯಗಳು ನೆನೆಗುದಿಗೆ ಬಿದ್ದಿವೆ, ಸಚಿವರು ಇದ್ದರು ಕೂಡ ಸಚಿವಾಲಯ ಇಲ್ಲದಿರುವುದರಿಂದ ಅನೇಕ ಕಾಮಗಾರಿಗಳು ಭೂಮಿ ಪೂಜೆಗೆ ಮಾತ್ರ ಸೀಮಿತವಾಗಿವೆ.

ಪ್ರತ್ಯೇಕ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಒತ್ತು ನೀಡಿರುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಅಭಿವೃದ್ಧಿ ಮಾಡುವುದಾಗಿದೆ. ಆದರೆ, ಸರ್ಕಾರ ಸಚಿವರು ಹಾಗೂ ಶಾಸಕರು ವಿಧಾನಸಭೆಯಲ್ಲಿ ಈ ಭಾಗದ ಅಭಿವೃದ್ಧಿಯ ಬಗ್ಗೆ ಗಟ್ಟಿ ಧ್ವನಿಯಾಗಿ ನಿಲ್ಲದಿರುವುದು ಬೇಸರದ ಸಂಗತಿ.

ಕಲ್ಯಾಣ ಕರ್ನಾಟಕ ಭಾಗಕ್ಕೆ ೩೭೧ (ಜೆ) ಕಲಂ ಜಾರಿಗೊಂಡು ಹತ್ತು ವರ್ಷ ಕಳೆದರು ೫೦೦೦ ಕೋಟಿ ಬಿಡುಗಡೆ ಆಗಿದೆ ಎನ್ನುವುದು ಕೇವಲ ಸಚಿವರ ಬಾಯಲ್ಲಿ ಮತ್ತು ಪತ್ರಿಕೆಗಳಲ್ಲಿ ಅಷ್ಟೇ ಸೀಮಿತವಾಗಿದೆ ಎನ್ನುವ ರೀತಿ ಭಾಸವಾಗುತ್ತಿದೆ.

ಕಲ್ಯಾಣ ಕರ್ನಾಟಕದ ಹೊಸ ತಾಲೂಕುಗಳಲ್ಲಿ ಮೂಲ ಸೌಕರ್ಯದ ಕೊರತೆ ಇದ್ದು, ಅದನ್ನು ಹೋಗಲಾಡಿಸಲು ಕಲ್ಯಾಣ ಕರ್ನಾಟಕ ಬೋರ್ಡ್ ಕೈಗೊಂಡ ಕಾರ್ಯಗಳು ಯಾವುವು? ಈಗಾಗಲೇ, ಕಲ್ಯಾಣ ಕರ್ನಾಟಕದ ಹೊಸ ತಾಲೂಕುಗಳಲ್ಲಿ ಮೂಲ ಸೌಕರ್ಯ ಹಾಗೂ ಇಲಾಖೆಯ ಕಛೇರಿಗಳು ನಿರ್ಮಾಣ ಮಾಡುವ ಕನಸು ಕನಸಾಗೆ ಉಳಿದಿದೆ ಎಂದು ಪತ್ರಿಕಾ ಪಕ್ರಟಣೆಯಲ್ಲಿ ಹೇಳಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಯಾವುದೇ ದೊಡ್ಡ ಕೈಗಾರಿಕಾ ಯೋಜನೆಗಳು ಜಾರಿಯಾಗಿಲ್ಲ. ಇಲ್ಲಿನ ಉದ್ಯಮಿಗಳಿಗಾಗಿ ಹಾಗೂ ನಿರುದ್ಯೋಗಿಗಳಿಗಾಗಿ ಪ್ರತ್ಯೇಕ ಕಲ್ಯಾಣ ಕರ್ನಾಟಕ ಕೈಗಾರಿಕಾ ನೀತಿ ಜಾರಿಗೆ ತರಬೇಕು. ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಮೆರಿಟ್ ವಿಚಾರದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಯುವಕರಿಗೆ ಅನ್ಯಾಯವಾಗುತ್ತಿದೆ ಇದಕ್ಕೆ ಪರಿಹಾರ ಸಿಗುವುದೇ?

ಡಾ. ಬಸವರಾಜ ಎಸ್ ಕ್ಯಾವಟರ್
ರಾಜ್ಯ ಕಾರ್ಯಕರಣಿ ಸದಸ್ಯ ಹಾಗೂ ಕೊಪ್ಪಳ ಲೋಕಸಭಾ ಕ್ಷೇತ್ರ ನಿಕಟಪೂರ್ವ ಅಭ್ಯರ್ಥಿ

 

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!