December 23, 2024

AKSHARA KRAANTI

AKSHARA KRAANTI




ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪ್ರತಿಭಾ ಪುರಸ್ಕಾರ

ಹಾವೇರಿಯಲ್ಲಿ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ

ಕೊಪ್ಪಳ,: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ಮತ್ತು ಜಿಲ್ಲಾ ಘಟಕ, ಹಾವೇರಿ ವತಿಯಿಂದ 2024ನೇ ಸಾಲಿನ ರಾಜ್ಯಮಟ್ಟದ ಪತ್ರಕರ್ತರ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದರಾದ ಬಸವರಾಜ ಬೊಮ್ಮಾಯಿ, ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್, ವಿಧಾನ ಪರಿಷತ್ ಮುಖ್ಯ ಸಚೇತಕರಾದ ಸಲೀಂ ಅಹ್ಮದ್, ಕರ್ನಾಟಕ ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಕಾನಿಪ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಶೇ. 90ಕ್ಕಿಂತ ಅಧಿಕ ಅಂಕ ಪಡೆದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿತ್ತು. ಕ್ರಮವಾಗಿ 2500 ಮತ್ತು 3000 ನಗದು ಪುರಸ್ಕಾರ ನೀಡಲಾಯಿತು.

ಕೊಪ್ಪಳ ಜಿಲ್ಲೆಯಿಂದ ಪತ್ರಕರ್ತ ಮಂಜುನಾಥ ಜಿ. ಗೊಂಡಬಾಳ ಮಗಳು ಸಾಹಿತ್ಯ ಎಂ. ಗೊಂಡಬಾಳ (ಶೇ. 93.92 ಎಸ್.ಎಸ್.ಎಲ್.ಸಿ), ಮುನಿರಾಬಾದಿನ ಪತ್ರಕರ್ತ ನಾರಾಯಣ್ ರಾವ್ ಅವರ ಮಗಳು ಬೃಂಧ ಎಸ್.ಎನ್. (ಶೇ. 90.72 ಎಸ್.ಎಸ್.ಎಲ್.ಸಿ), ಪತ್ರಕರ್ತ ವೀರಣ್ಣ ಕಳ್ಳಿಮನಿ ಅವರ ಮಗ ಸಾಹಿಲ್ ಕುಮಾರ (ಪಿಯುಸಿ ಶೇ. 95) ಹಾಗೂ ಕುಕನೂರಿನ ಪತ್ರಕರ್ತ ಬಸವರಾಜ ಕೊಡ್ಲಿರವರ ಮಗಳು ಕಾವ್ಯ (ಪಿಯುಸಿ ಶೇ. 95) ರವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲೆಯ ಕಾನಿಪ ರಾಜ್ಯ ಕಾರ್ಯಕಾರಣಿ ವಿಶೇಷ ಆಹ್ವಾನಿತ ಸದಸ್ಯರಾದ ಎಚ್.ಎಸ್ ಹರೀಶ್, ಜಿಲ್ಲಾಧ್ಯಕ್ಷ ಬಸವರಾಜ ಗುಡ್ಲಾನೂರ, ಮಂಜುನಾಥ ಗೊಂಡಬಾಳ, ಈರಣ್ಣ ಕಳ್ಳಿಮನಿ, ಬಸವರಾಜ ಕೊಡ್ಲಿ ಭಾಗವಹಿಸಿದ್ದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!