ಕನಕಗಿರಿ ಉತ್ಸವ: ಫೆ.28ರಿಂದ ಮಾರ್ಚ್ 3ರವರೆಗೆ ವಿವಿಧ ಕ್ರೀಡೆಗಳು
ಕೊಪ್ಪಳ,: ಕನಕಗಿರಿ ಉತ್ಸವ 2024ರ ಪ್ರಯುಕ್ತ ಉತ್ಸವದ ಕ್ರೀಡಾ ಸಮಿತಿಯಿಂದ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿದ್ದು, ಫೆಬ್ರವರಿ 28 ರಿಂದ ಮಾರ್ಚ 03ರವರೆಗೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಲಿವೆ ಎಂದು ಕನಕಗಿರಿ ಉತ್ಸವ ಕ್ರೀಡಾ ಸಮಿತಿ ಅಧ್ಯಕ್ಷರು ಆಗಿರುವ ಕೊಪ್ಪಳ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿಠ್ಠಲ್ ಜಾಬಗೌಡ್ರ ತಿಳಿಸಿದ್ದಾರೆ.
ಕ್ರೀಡೆಗಳ ವಿವರ: ಕನಕಗಿರಿಯ ಕಲ್ಮಠ ಹೊಸ ಬಿಲ್ಡಿಂಗ್ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಆವರಣದಲ್ಲಿ ಫೆ.28ರಂದು ಬೆಳಗ್ಗೆ 10 ಗಂಟೆಗೆ ರಾಜ್ಯ ಮಟ್ಟದ ಪುರುಷ ಹಾಗೂ ಮಹಿಳಾ ಕುಸ್ತಿ ಪಂದ್ಯಾವಳಿ, ಜಿಲ್ಲಾ ಮಟ್ಟದ ಪುರುಷ ಹಾಗೂ ಮಹಿಳಾ ಹ್ಯಾಂಡಬಾಲ್ ಹಾಗೂ ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆಗಳು, ಫೆ.28 ಮತ್ತು ಫೆ.29ರಂದು ಎರಡು ದಿನಗಳ ಕಾಲ ಮಧ್ಯಾಹ್ನ 3 ಗಂಟೆಗೆ ಹೊನಲು ಬೆಳಕಿನ ವಾಲಿಬಾಲ್ ಹಾಗೂ ಕಬಡ್ಡಿ ಪಂದ್ಯಾವಳಿಗಳು ನಡೆಯಲಿವೆ.
ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಫೆ.28ರಂದು ಸಂಜೆ 5 ಗಂಟೆಗೆ ಆಹ್ವಾನಿತ ನ್ಯಾಷ್ನಲ್ ತಂಡದಿAದ ಹೊನಲು ಬೆಳಕಿನ ವಾಲಿಬಾಲ್ ಹಾಗೂ ಕಬಡ್ಡಿ ಪ್ರದರ್ಶನ ಪಂದ್ಯಾವಳಿಗಳು, ಫೆ.28 & 29ಕ್ಕೆ ಮಲ್ಲಕಂಬ ಪ್ರದರ್ಶನ, ಫೆ.29ಕ್ಕೆ ಬೆಳಿಗ್ಗೆ 10 ಗಂಟೆಗೆ ಪುರುಷರಿಗೆ ಹಗ್ಗ-ಜಗ್ಗಾಟ, ದೇಶಿ ಕ್ರೀಡೆ ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೇಗಳು ಮತ್ತು ಮಾರ್ಚ್ 01ರಂದು ಮಧ್ಯಾಹ್ನ 3ಗಂಟೆಗೆ ಆಹ್ವಾನಿತ ಲೆಗ್ ಕ್ರಿಕೆಟ್ ಮಹಿಳೆಯರಿಗೆ ಕ್ರಿಕೆಟ್ ಪಂದ್ಯಾವಳಿ, ಸಂಜೆ 4 ಗಂಟೆಗೆ ಆಹ್ವಾನಿತ ಜನಪ್ರತಿನಿಧಿಗಳ, ಅಧಿಕಾರಿಗಳ ಹಾಗೂ ಪತ್ರಿಕಾ ಮಾಧ್ಯಮದವರ ಸ್ನೇಹ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿ ಜರುಗಲಿವೆ.
ಮ್ಯಾರಥಾನ್ ಓಟ, ರಂಗೋಲಿ ಸ್ಪರ್ಧೆ: ಮಾ.1ರಂದು ಬೆಳಗ್ಗೆ 6.30 ಗಂಟೆಗೆ ಕನಕಗಿರಿಯ ಬಸವೇಶ್ವರ ಸರ್ಕಲ್ನಿಂದ ಕರ್ನಾಟಕ ಪಬ್ಲಿಕ್ ಸ್ಕೂಲ್ನವರೆಗೆ ರಾಜ್ಯ ಮಟ್ಟದ ಪುರುಷ ಹಾಗೂ ಮಹಿಳಾ ಮ್ಯಾರಥಾನ್ ಓಟ ಹಾಗೂ ಅಂದು ಬೆಳಗ್ಗೆ 10 ಗಂಟೆಗೆ ಕನಕಗಿರಿ ಎ.ಪಿ.ಎಂ.ಸಿ ಸಿಸಿ ರಸ್ತೆಯ ಆವರಣದಲ್ಲಿ ಮಹಿಳೆಯರ ರಂಗೋಲಿ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.
ಎತ್ತಿನ ಬಂಡಿ ಶೃಂಗಾರ ಸ್ಪರ್ಧೆ: ಕನಕಗಿರಿ ಎಪಿಎಂಸಿ ಸಿಸಿ ರಸ್ತೆಯ ಆವರಣದಲ್ಲಿ ಮಾರ್ಚ್ 3ರಂದು ಬೆಳಿಗ್ಗೆ 10 ಗಂಟೆಗೆ ಎತ್ತುಗಳೊಂದಿಗೆ ಎತ್ತಿನ ಬಂಡಿ ಶೃಂಗಾರ ಸ್ಪರ್ಧೆ ನೆಡೆಲಿದ್ದು, ಈ ಎಲ್ಲಾ ಸ್ಪರ್ಧೆಗಳಲ್ಲಿ ಯಾವುದೇ ರೀತಿಯ ಪ್ರವೇಶ ಧನ (ಎಂಟ್ರಿ ಫೀ) ಇರುವುದಿಲ್ಲ. ಕೊಪ್ಪಳ ಜಿಲ್ಲೆಯವರು ಭಾಗವಹಿಸಬಹುದಾಗಿದೆ.
ಷರತ್ತುಗಳು: ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಾಳುಗಳು ಆಯಾ ಸಂಬAಧಿಸಿದ ಕ್ರೀಡೆಗಳಿಗೆ ಸಂಘಟನಾ ಸ್ಥಳದಲ್ಲಿ ಬೆಳಿಗ್ಗೆ 9 ಗಂಟೆಯೊಳಗಾಗಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ಗುಂಪು ಕ್ರೀಡೆಗಳಿಗೆ ತಳಕು ಹಾಕಿದ ನಂತರ ಬರುವಂತಹ ತಂಡಗಳಿಗೆ ಅವಕಾಶವಿರುವುದಿಲ್ಲ. ತಂಡವನ್ನು ನೋಂದಾಯಿಸಿ ನಿಗದಿತ ಸಮಯಕ್ಕೆ ಬರದೇ ಇದ್ದ ತಂಡವನ್ನು ಅಸಿಂಧುಗೊಳಿಸಲಾಗುವುದು. ಭಾಗವಹಿಸಲು ಜಿಲ್ಲಾ ಮಟ್ಟದ ಕ್ರೀಡಾ ಪಂದ್ಯಾವಳಿಗಳಲ್ಲಿ ಕೊಪ್ಪಳ ಜಿಲ್ಲೆಯ ಕ್ರೀಡಾಪಟುಗಳಿಗೆ ಮಾತ್ರ ಅವಕಾಶವಿದ್ದು, ರಾಜ್ಯ ಮಟ್ಟದ ಪಂದ್ಯಾವಳಿಗಳಿಗೆ ಮುಕ್ತ ಅವಕಾಶವಿರುತ್ತದೆ. ಒಂದು ತಂಡದಲ್ಲಿ ಭಾಗವಹಿಸಿದ ಕ್ರೀಡಾಪಟುವಿಗೆ ಇನ್ನೊಂದು ತಂಡದಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ. ಒಂದು ವೇಳೆ ಒಂದು ತಂಡದಲ್ಲಿ ಭಾಗವಹಿಸಿ, ನಂತರ ಇನ್ನೊಂದ ತಂಡದಲ್ಲಿ ಭಾಗವಹಿಸಿದಲ್ಲಿ ಅಂತಹ ತಂಡಗಳನ್ನು ಅನರ್ಹಗೊಳಿಸಲಾಗುವುದು. ಸ್ಪರ್ಧೆಗಳಲ್ಲಿ ನಿರ್ಣಾಯಕರ ನಿರ್ಣಯವೇ ಅಂತಿಮ ತೀರ್ಮಾನವಾಗಿರುತ್ತದೆ. ಈ ಕ್ರೀಡಾಕೂಟಕ್ಕೆ ಭಾಗವಹಿಸುವ ಕ್ರೀಡಾಪಟುಗಳಿಗೆ ಯಾವುದೇ ರೀತಿಯ ಪ್ರಯಾಣ ಭತ್ಯೆ, ದಿನಭತ್ಯೆ ನೀಡಲಾಗುವುದಿಲ್ಲ. ಕ್ರೀಡಾಪಟುಗಳಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗುವದು. ನೋಂದಣಿ ಮಾಡಿಸುವಾಗ ತಂಡದ ಪ್ರತಿಯೊಬ್ಬ ಸದಸ್ಯರ ಆಧಾರಕಾರ್ಡ್, ಬ್ಯಾಂಕ್ ಖಾತೆ ಪಾಸ್ ಪುಸ್ತಕದ ಝರಾಕ್ಸ್ ಪ್ರತಿಯನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ವಿಜೇತರಾದ ತಂಡಗಳಿಗೆ ಹಾಗೂ ಸ್ಪರ್ಧಾಳುಗಳಿಗೆ ನಗದು ಬಹುಮಾನವನ್ನು ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುವುದು.
ಮೇಲುಸ್ತವಾರಿಗಳ ವಿವರ: ಕುಸ್ತಿ ಸ್ಪರ್ಧೆಗೆ ಎ.ಎನ್.ಯತಿರಾಜು ಮೊ.ಸಂ: 9448633146 ಹಾಗೂ ತಿಪ್ಪಣ್ಣ ಮೊ.ಸಂ: 9008867656, ವಾಲಿಬಾಲ್ ಸ್ಪರ್ಧೆಗೆ ಸುರೇಶ ಮೊ.ಸಂ: 9901527333, ಕಮಲ್ ಸಿಂಗ್ ಬಿಶ್ಟ್ ಮೊ.ಸಂ: 6360146300 ಹಾಗೂ ರುದ್ರಗೌಡ ಮೊ.ಸಂ: 9663829332, ಕಬಡ್ಡಿ ಸ್ಪರ್ಧೆಗೆ ಶರಣಬಸವ ಬಂಡಿಹಾಳ ಮೊ.ಸಂ: 9036773070, ಪಾಮಣ್ಣ ಮೊ.ಸಂ: 9964672046 ಹಾಗೂ ಕರಿಯಪ್ಪ ಮೊ.ಸಂ: 9740644642, ಮ್ಯಾರಥಾನ್ ಸ್ಪರ್ಧೆಗೆ ಶರಣಬಸವ ಬಂಡಿಹಾಳ ಮೊ.ಸಂ: 9036773070 ಹಾಗೂ ತಿಪ್ಪಣ್ಣ ಮೊ.ಸಂ: 9008867656, ಹಗ್ಗ-ಜಗ್ಗಾಟ ಮತ್ತು ಮಲ್ಲಕಂಬ ಪ್ರದರ್ಶನ ಸ್ಪರ್ಧೆಗಳಿಗೆ ತಿಪ್ಪಣ್ಣ ಮೊ.ಸಂ: 9008867656, ದೇಶಿಯ ಕ್ರೀಡೆಗಳು ಮತ್ತು ಗ್ರಾಮೀಣ ಕ್ರೀಡೆಗಳಿಗಾಗಿ ನಾಗರಾಜ ಟಿ. ಮೊ.ಸಂ: 9731293305 ಹಾಗೂ ಶಿವಕಾಂತ ತಳವಾರ ಮೊ.ಸಂ: 9916799482, ಎತ್ತಿನ ಬಂಡಿ ಶೃಂಗಾರ ಸ್ಪರ್ಧೆಗೆ ಎ.ಎನ್.ಯತಿರಾಜು ಮೊ.ಸಂ: 9448633146 ಹಾಗೂ ತಿಪ್ಪಣ್ಣ ಮೊ.ಸಂ: 9008867656, ಮಹಿಳೆಯರ ರಂಗೋಲಿ ಸ್ಪರ್ಧೆಗೆ ಸುನಿತಾ ಮೊ.ಸಂ: 9449231986 ಹಾಗೂ ಜಯಲಕ್ಷ್ಮೀ ಮೊ.ಸಂ: 92416-41054, ಹ್ಯಾಂಡಬಾಲ್ ಸ್ಪರ್ಧೆಗೆ ಶ್ರೀಧರ ಮೊ.ಸಂ: 9972643181 ಹಾಗೂ ಚಾಂದಪಾಷಾ ಮೊ.ಸಂ: 9900905452, ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆಗೆ ಬಸವರಾಜ ಬಿ. ಮೊ.ಸಂ: 9901101803 ಹಾಗೂ ವೀರಕುಮಾರ ಮೊ.ಸಂ: 7411353680, ಆಹ್ವಾನಿತ ಮಹಿಳೆಯರ ಲೆಗ್ ಕ್ರಿಕೆಟ್ ಸ್ಪರ್ಧೆಗಾಗಿ ಪವಿತ್ರಾ ಮೊ.ಸಂ: 6362993593 ಹಾಗೂ ಗೀತಾ ಮೊ.ಸಂ: 9611733918, ಆಹ್ವಾನಿತ ಅಧಿಕಾರಿಗಳ ಕ್ರಿಕೆಟ್ ಸ್ಪರ್ಧೆಗೆ ಫೈರೋಜ್ ಮೊ.ಸಂ: 9663694781 ಮತ್ತು ಆಹ್ವಾನಿತ ನ್ಯಾಷ್ನಲ್ ತಂಡದ ವಾಲಿಬಾಲ್ ಪ್ರದರ್ಶನ ಪಂದ್ಯಾವಳಿಗೆ ಶರಣಬಸವ ಬಂಡಿಹಾಳ ಮೊ.ಸಂ: 9036773070 ಹಾಗೂ ಪಾಮಣ್ಣ ಮೊ.ಸಂ: 9964672046, ಇವರನ್ನು ಮೇಲುಸ್ತುವಾರಿಗಳನ್ನಾಗಿ ನೇಮಕ ಮಾಡಲಾಗಿದೆ.
ನೊಂದಣಿಗಾಗಿ ಮತ್ತು ಹೆಚ್ಚಿನ ಮಾಹಿತಿಗಾಗಿ ಆಯಾ ಕ್ರೀಡೆಗಳಲ್ಲಿರುವ ಮೇಲುಸ್ತುವಾರಿಗಳಲ್ಲಿ ಸಂಪರ್ಕಿಸಬಹುದು ಎಂದು ಕೊಪ್ಪಳ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪ್ರಕಟಣೆ ತಿಳಿಸಿದೆ.
More Stories
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸರ್ಕಾರಿ ಶಾಲಾ ವಿದ್ಯಾರ್ಥಿಗಳು
ಬಿಎಸ್ ಪಿ ಸಂಘಟನೆ ಬೆಳೆಸಲು ಶ್ರಮಿಸಿ : ಕೃಷ್ಣಮೂರ್ತಿ
ಪರಿಸರ ಸಮತೋಲನಕ್ಕೆ ವನ್ಯಜೀವಿಗಳ ಪಾತ್ರ ಪ್ರಮುಖವಾಗಿದೆ : ಕೆ.ರಾಜಶೇಖರ ಹಿಟ್ನಾಳ