ಕನಕಗಿರಿ ಉತ್ಸವ : ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ತಂಡದಿಂದ ಸಮೂಹ ನೃತ್ಯ
ಕೊಪ್ಪಳ,: ನಾಡಿನ ಪ್ರಸಿದ್ಧ ಉತ್ಸವಗಳಲ್ಲಿ ಒಂದಾದ ಕನಕಗಿರಿ ಉತ್ಸವ ಮಾರ್ಚ್ 2 ಮತ್ತು 3ರಂದು ಕನಕಗಿರಿಯಲ್ಲಿ ನಡೆಯಲಿದೆ. ಮಾ. 2ರಂದು ಕನಕಗಿರಿಯ ಮುಖ್ಯ ವೇದಿಕೆ ರಾಜ ಉಡಚಪ್ಪ ನಾಯಕ ವೇದಿಕೆಯಲ್ಲಿ ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆಯ ತಂಡದಿಂದ ಸಮೂಹ ನೃತ್ಯದ ಸಾಂಸ್ಕೃತಿಕ ಕಾರ್ಯಕ್ರಮದ ಪ್ರದರ್ಶನ ನೀಡಲು ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕ ತಂಡವನ್ನು ಆಯ್ಕೆ ಮಾಡಿ ಪ್ರದರ್ಶನ ನೀಡಲು ಅವಕಾಶ ನೀಡಲಾಗಿದೆ.
ಈ ಕಾರ್ಯಕ್ರಮವು ಕನಕಗಿರಿ ಉತ್ಸವದ ರಾಜಾ ಉಡಚಪ್ಪ ನಾಯಕ ವೇದಿಕೆಯಲ್ಲಿ 2 ರ ಸಂಜೆ 4.50 ರಿಂದ 5ಗಂಟೆಯರವರೆಗೆ ಹತ್ತು ನಿಮಿಷಗಳ ಕಾಲ ಸಮೂಹ ನೃತ್ಯ ಪ್ರದರ್ಶನವನ್ನು ಮಾಡಲಿದೆ. ಕನ್ನಡ ನಾಡಿನ ಸಾಂಸ್ಕೃತಿಕ ವೈಭವವನ್ನು ಸಾರುವ ಹಾಡಿಗೆ ಸುಮಾರು 25ಕ್ಕೂ ಹೆಚ್ಚು ಕಲಾವಿದರು ನೃತ್ಯ ರೂಪಕವನ್ನು ಪ್ರದರ್ಶಿಸಲಿದ್ದಾರೆ.
ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆಯ ತಂಡವು ಬಿಜಾಪುರ. ಧಾರವಾಡ. ಕಲಬುರ್ಗಿ ರಾಯಚೂರುಗಳಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳಲ್ಲಿ. ಹಂಪಿ ಉತ್ಸವ, ಕಲಬುರ್ಗಿ ಕಲ್ಯಾಣ ಕರ್ನಾಟಕ ಉತ್ಸವ, ಆನೆಗುಂದಿ ಉತ್ಸವ ಕೊಪ್ಪಳದ ರಜತ ಮಹೋತ್ಸವ. ಇಟಗಿ ಉತ್ಸವ, ಮೈಸೂರು ದಸರಾ, ಕಿತ್ತೂರು ಉತ್ಸವ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಯುವ ಸೌರಭ, ಸುಗ್ಗಿ ಹುಗ್ಗಿ, ಜನಪದ ಜಾತ್ರೆ, ಸ್ವಾತಂತ್ರ ದಿನಾಚರಣೆ, ಕನ್ನಡ ರಾಜ್ಯೋತ್ಸವ, ಗೋವಾ ಕನ್ನಡಿಗರ ಸಮ್ಮೇಳನ, ಕೊಪ್ಪಳ ಜಿಲ್ಲಾ ಉತ್ಸವ, ತಿರುಳುಗನ್ನಡ ಸಮ್ಮೇಳನ, ಮಕ್ಕಳ ಸಾಂಸ್ಕೃತಿಕ ಸಮ್ಮೇಳನ ಹೀಗೆ ಹಲವು ಕಾರ್ಯಕ್ರಮಗಳಲ್ಲಿ 2009 ರಿಂದಲೂ ಸಾಂಸ್ಕೃತಿಕ ನೃತ್ಯ ಪ್ರದರ್ಶನವನ್ನು ನೀಡುತ್ತಾ ಬಂದಿದೆ.
ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆಯ ಸಮೂಹ ನೃತ್ಯ ಪ್ರದರ್ಶನ ಕನಕಗಿರಿ ಉತ್ಸವದಲ್ಲಿ ಗಮನ ಸೆಳೆಯಲಿದೆ ಎಂದು ನಾಗರಿಕರ ವೇದಿಕೆಯ ಅಧ್ಯಕ್ಷ
ಮಹೇಶ್ ಬಾಬು ಸುರ್ವೆ ಅವರು ತಿಳಿಸಿದ್ದಾರೆ.
*******************************************
*******************************************
More Stories
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸರ್ಕಾರಿ ಶಾಲಾ ವಿದ್ಯಾರ್ಥಿಗಳು
ಬಿಎಸ್ ಪಿ ಸಂಘಟನೆ ಬೆಳೆಸಲು ಶ್ರಮಿಸಿ : ಕೃಷ್ಣಮೂರ್ತಿ
ಪರಿಸರ ಸಮತೋಲನಕ್ಕೆ ವನ್ಯಜೀವಿಗಳ ಪಾತ್ರ ಪ್ರಮುಖವಾಗಿದೆ : ಕೆ.ರಾಜಶೇಖರ ಹಿಟ್ನಾಳ