ಕೇಂದ್ರಕ್ಕೆ ಒತ್ತಡ ಹೇರಲು ಸಂಸದ ಕೆ.ರಾಜಶೇಖರ ಹಿಟ್ನಾಳರಿಗೆ ಮನವಿ
ಕೊಪ್ಪಳ,: ಸಾರ್ವಜನಿಕರು ತುಂಬುವ ಎಲ್‍ಐಸಿ ಪ್ರಿಮಿಯಮ್ ಮೇಲೆ ಹಾಕಲಾಗಿರುವ ಜಿ.ಎಸ್.ಟಿ.ಯನ್ನು ಕೂಡಲೇ ರದ್ದುಗೊಳಿಸಲು ಲೋಕಸಭೆಯಲ್ಲಿ ಧ್ವನಿ ಎತ್ತಬೇಕೆಂದು ಕೊಪ್ಪಳ ಲೋಕಸಭಾ ಸದಸ್ಯರಾದ ಕೆ.ರಾಜಶೇಖರ ಹಿಟ್ನಾಳ ಅವರಿಗೆ ಭಾರತೀಯ ಜೀವ ವಿಮಾ ನಿಗಮದ ಉದ್ಯೋಗಿ ಮತ್ತು ಪ್ರತಿನಿಧಿಗಳ ಸಂಘದಿಂದ ಮನವಿ ಪತ್ರ ಸಲ್ಲಿಸಲಾಯಿತು.
ವಿಭಾಗೀಯ ಕಾರ್ಯದರ್ಶಿಯಾದ ಕಾ.ಎಂ.ರವಿ ಮಾತನಾಡಿ, ತಮ್ಮ ವೈಯಕ್ತಿಕ ಜೀವನ ಭದ್ರತೆಗಾಗಿ ತುಂಬುವ ಎಲ್‍ಐಸಿ ಪ್ರಿಮಿಯಮ್ ಮೇಲೆ ಜಿ.ಎಸ್.ಟಿ ಹೇರುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸಿದರು. ಈಗಾಗಲೇ ಹಲವಾರು ಬಾರಿ ಉದ್ಯೋಗಿ ಮತ್ತು ಪ್ರತಿನಿಧಿಗಳ ಸಂಘದಿಂದ ಪ್ರತಿಭಟನೆ ಮಾಡಿ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಲೋಕಸಭಾ ಸದನದಲ್ಲಿ ಕೊಪ್ಪಳ ಲೋಕಸಭಾ ಸ್ಥಾನಕ್ಕೆ ಪ್ರತಿನಿಧಿಸುತ್ತಿರುವ ತಾವುಗಳು ಸದನದಲ್ಲಿ ಈ ಕುರಿತು ಧ್ವನಿ ಎತ್ತಬೇಕೆಂದು ಮನವಿ ಪತ್ರ ಸಲ್ಲಿಸಿದರು. ಇದರಿಂದ ಇಡೀ ದೇಶದ ಜನತೆಗೆ ಅನುಕೂಲವಾಗುತ್ತದೆ ಎಂದರು. ಇನ್ನು ಆದಾಯ ತೆರಿಗೆ ಕಡಿತಗೊಳಿಸುವ ವಿಷಯದಲ್ಲಿ ಜನತೆಯ ಪರವಾಗಿ ಧ್ವನಿ ಎತ್ತಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಲ್.ಐ.ಸಿ ನೌಕರರರಾದ ಕಾಂ.ವೀರೇಶ, ಕಾಂ.ಸಂತೋಷ, ಕಾಂ.ಹೆಚ್.ವಿ.ಪೂಜಾ, ಕಾಂ.ಮಲ್ಲಿಕಾರ್ಜುನ, ಕಾಂ.ಶೇಖರಪ್ಪ, ಕಾಂ.ಸಾಗರ ಮತ್ತು ಪ್ರತಿನಿಧಿ ಮಿತ್ರರರು, ಅಭಿವೃದ್ಧಿ ಅಧಿಕಾರಿಗಳು, ಆಡಳಿತ ಸಿಬ್ಬಂದಿ ವರ್ಗದ ಎಲ್ಲಾ ನೌಕರರು ಹಾಜರಿದ್ದರು.
More Stories
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸರ್ಕಾರಿ ಶಾಲಾ ವಿದ್ಯಾರ್ಥಿಗಳು
ಬಿಎಸ್ ಪಿ ಸಂಘಟನೆ ಬೆಳೆಸಲು ಶ್ರಮಿಸಿ : ಕೃಷ್ಣಮೂರ್ತಿ
ಪರಿಸರ ಸಮತೋಲನಕ್ಕೆ ವನ್ಯಜೀವಿಗಳ ಪಾತ್ರ ಪ್ರಮುಖವಾಗಿದೆ : ಕೆ.ರಾಜಶೇಖರ ಹಿಟ್ನಾಳ