December 23, 2024

AKSHARA KRAANTI

AKSHARA KRAANTI




ಆ. 24 ರಂದು ಮಹಾಶಕ್ತಿ ವೀರಭದ್ರ ಯಕ್ಷಗಾನ ಪ್ರದರ್ಶನ

ಕರಾವಳಿ ಬಳಗ ಕೊಪ್ಪಳ, ಜಿಲ್ಲಾ ಹೋಟೆಲ್ ಮಾಲೀಕರ ಸಂಘದಿಂದ ಯಕ್ಷಗಾನ

ಕೊಪ್ಪಳ,: ಕರಾವಳಿ ಬಳಗ ಕೊಪ್ಪಳ, ಜಿಲ್ಲಾ ಹೋಟೆಲ್ ಮಾಲೀಕರ ಸಂಘ, ಕೊಪ್ಪಳ ಇವರ ಸಂಯಕ್ತಾಶ್ರಯದಲ್ಲಿ
ಶ್ರೀಮಹಾಗಣಪತಿ ಯಕ್ಷಗಾನ ಮಂಡಳಿ , ನಡೂರು, ಮಂದಾರ್ತಿ ಇವರ ವತಿಯಿಂದ ಇದೇ ಆಗಸ್ಟ್ 24 ರಂದು ಶನಿವಾರ ಸಂಜೆ 6 ಗಂಟೆಗೆ ಕೊಪ್ಪಳ ನಗರದ ಹೊಸಪೇಟೆ ರಸ್ತೆಯ ಎಂ.ಪಿ. ಪ್ಯಾಲೇಸ್ ನಲ್ಲಿ ಮಹಾಶಕ್ತಿ ವೀರಭದ್ರ ಯಕ್ಷಗಾನ ಪ್ರದರ್ಶನ ಜರುಗುವುದು.ಕಾರ್ಯಕ್ರಮದ ಅಧ್ಯಕ್ಷತೆ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ವಹಿಸುವರು, ಉದ್ಘಾಟನೆಯನ್ನು ಸಂಸದ ಕೆ.ರಾಜಶೇಖರ ಹಿಟ್ನಾಳ ನೆರವೇರಿಸುವವರು, ಮುಖ್ಯ ಅತಿಥಿಗಳಾಗಿ ಮಾಜಿ ಸಂಸದ ಸಂಗಣ್ಣ ಕರಡಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಕರ್ನಾಟಕ ರಾಜ್ಯ ಹೋಟೆಲ್ ಸಂಘದ ಅಧ್ಯಕ್ಷ ಜಿ.ಕೆ. ಶೆಟ್ಟಿ, ಕರಾವಳಿ ಬಳಗ ಕೊಪ್ಪಳದ ಗೌರವಾಧ್ಯಕ್ಷ ಜೀವನ ಶೆಟ್ಟಿ, ಸಾಹಿತಿಗಳಾದ ಡಾ. ಮಹಾಂತೇಶ ಮಲ್ಲನಗೌಡರ್, ಮಂದಾರ್ತಿ ಮೇಳದ ಭಾಗವತರು ಸದಾಶಿವ ಅಮೀನ್ ಪಾಲ್ಗೊಳ್ಳುವರು.

ಈ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕು ಎಂದು ಕೊಪ್ಪಳ ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಶಶಿಕರ ಶೆಟ್ಟಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!