December 23, 2024

AKSHARA KRAANTI

AKSHARA KRAANTI




ಆರೋಗ್ಯ ವೃದ್ಧಿಗೆ ಕ್ರೀಡೆ ಮದ್ದು : ವಿಠ್ಠಲ ಜಾಬಗೌಡರ

ಕೊಪ್ಪಳ,: ದೈಹಿಕ ಸಧೃಢತೆಗಾಗಿ ಪ್ರತಿಯೊಬ್ಬರು ಕ್ರೀಡಾಸಕ್ತಿ ಬೆಳಸಿಕೊಳ್ಳಬೇಕು ಮನುಷ್ಯನ ಆರೋಗ್ಯ ವೃದ್ಧಿಗೆ ಕ್ರೀಡಯೇ ಮದ್ದು ಎಂದು ಜಿಲ್ಲಾ ಯುವಜನ ಸೇವ ಇಲಾಖೆಯ ಸಹಾಯಕ ನಿರ್ದೇಶಕವಿಠ್ಠಲ ಜಾಬ‌ಗೌಡರ ಹೇಳಿದರು.

ಶನಿವಾರ ಜಿಲ್ಲಾ ಕ್ರೀಡಾಂಗಣದಲ್ಲಿ ಕರ್ನಾಟಕ ಕಾರ್ಯನಿತರ ಪತ್ರಕರ್ತರ ಸಂಘದ ವತಿಯಿಂದ ಏರ್ಪಡಿಸಿದ ವಾರ್ಷಿಕ ಕ್ರೀಡಾಕೂಟವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಸ್ಪರ್ಧೆ ಕ್ರೀಡೆಗಳಲ್ಲಿ ಪಾಲ್ಗೊಳವುದು ಬಹಳ ಮುಖ್ಯ ಎಂದ ಅವರು ಪತ್ರಕರ್ತರು ದಿನದ ಎಲ್ಲಾ ಸಮಯ ಕಾರ್ಯದಲ್ಲಿ‌ ಮಗ್ನರಾಗಿರುತ್ತಿರಿ‌ ಎಂದ ಅವರು ಸ್ವಲ್ಪ ಸಮಯ ಕ್ರೀಡೆಗೆ ಮೀಸಲು ಇಡಬೇಕು. ಜಿಲ್ಲಾ ಕ್ರೀಡಾಂಗಣ ಇನ್ನಷ್ಟು ಅಭಿವೃದ್ಧಿ ಪಡಿಸಲು ಪತ್ರಕರ್ತರು ಸಹಕಾರ ಅಗತ್ಯ ಎಂದರು.
ಮುಖ್ಯ ಅಥಿತಿಯಾಗಿ ಪಾಲ್ಗೊಂಡಿದ್ದ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎ. ಬಸವರಾಜ ಮಾತನಾಡಿ, ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಕ್ರೀಡೆ ಸಹಾಕಾರಿಯಾಗಿದೆ ಎಂದರು.

ನಿರ್ಣಾಯಕರಾಗಿ ದೈಹಿಕ ಶಿಕ್ಷಕರಾದ ಬಸವರಾಜ ಹನುಮಸಾಗರ ಮತ್ತು ಶರಣ ಬಸವಸ್ವಾಮಿ ಪಾಲ್ಗೊಂಡಿದ್ದು, ಸಂಘದ ಜಿಲ್ಲಾಧ್ಯಕ್ಷ ಬಸವರಾಜ್ ತಿಪ್ಪಣ್ಣನವರ ಅಧ್ಯಕ್ಣತೆ ವಹಿಸಿದ್ದರು. ಸಂಘದ ರಾಜ್ಯ ಸಮಿತಿ ಸದಸ್ಯ ಎಂ. ಸಾದಿಕ ಅಲಿ ಪ್ರಸ್ತಾವಿಕವಾಗಿ ಮಾತನಾಡಿದರು. ನಾಮಕರಣ ರಾಜ್ಯ‌ ಸದಸ್ಯ ಹರೀಶ್ ಹೆಚ್ ಎಸ್, ಜಿ.ಎಸ್ ಗೋನಾಳ. ಜಿಲ್ಲಾ ಉಪಾಧ್ಯಕ್ಷ ಹನುಮಂತ ಹಳ್ಳಿಕೇರಿ ಕ್ರೀಡಾ ಸಮಿತಿ ಮುಖ್ಯಸ್ಥ ಬಿ.ಆರ್.ರಾಜು ಸೇರಿದಂತೆ ಕಾರ್ಯನಿತರ ಪತ್ರಕರ್ತರ ಸಂಘದ ಸದಸ್ಯರು ಇದ್ದರು.

ಕಟ್ಟಡ ಸಮಿತಿ ಅಧ್ಯಕ್ಷ ಎನ್.ಎಂ.ದೊಡ್ಡಮನಿ ಸ್ವಾಗತಿಸಿ, ನಿರೂಪಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ ವಂದಿಸಿದರು, ಮಂಜುನಾಥ್ ಗೊಂಡಬಾಳ ಪ್ರಾರ್ಥಿಸಿದರು.

ಬಾಹುಬಲಿ ಮತ್ತು ಚಕ್ರವರ್ತಿ ತಂಡಗಳ ಮಧ್ಯ ಕ್ರಿಕೆಟ್ ಪಂದ್ಯ ಜರುಗಿತು. ಚಕ್ರವರ್ತಿ ತಂಡ ಜಯ ಶಾಲಿಯಾಯಿತು. ನಂತರ ವಿವಿಧ ಕ್ರೀಡೆಗಳು ಜರುಗಿದವು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!