ಆಕರ್ಷಣೆಯಾಗದೆ ಆದರ್ಶವಾಗಿ ಜೀವನ ಸಾಗಿಸಿ : ನಳಿನಿ ಕಲ್ಬುರ್ಗಿಕರ್
ಅಕ್ಷರಕ್ರಾಂತಿ ನ್ಯೂಸ್
ಕೊಪ್ಪಳ,: ನೀವು ಇನ್ನೊಬ್ಬರಿಗೆ ಆಕರ್ಷಣೆ ಯಾಗಬೇಡಿ ಬದಲಿಗೆ ಆದರ್ಶವಾಗಿ, ಏಕೆಂದರೆ ಆಕರ್ಷಣೆ ಬೇಗ ಅಳಿಯುತ್ತದೆ ಆದರೆ, ಆದರ್ಶ ಇತಿಹಾಸದ ಉದ್ದಕ್ಕೂ ಉಳಿಯುತ್ತದೆ ಎಂದು ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಗಣಿತ ಶಿಕ್ಷಕರಾದ ಶ್ರೀಮತಿ ನಳಿನಿ
ಕಲ್ಬುರ್ಗಿಕರ್ ಹೇಳಿದರು.
ತಾಲೂಕಿನ ಟಣಕಣಕಲ್ ಗ್ರಾಮದಲ್ಲಿರುವ ಮುರಾರ್ಜಿ ದೇಸಾಯಿ ಅಲ್ಪಸಂಖ್ಯಾತರ ವಸತಿ ಶಾಲೆ ಸಭಾಂಗಣದಲ್ಲಿ 2009-10 ರಿಂದ 2017–18ನೇ ಸಾಲಿನ ಐದು ವರ್ಷಗಳ ಎಸ್ಎಸ್ಎಲ್ ಸಿ ಹಳೆಯ ವಿದ್ಯಾರ್ಥಿ ಬಳಗ ಏರ್ಪಡಿಸಿದ ಗುರುವಂದನಾ ಮತ್ತು ಸಮ್ಮಿಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಮುರಾರ್ಜಿ ದೇಸಾಯಿ ಅಲ್ಪಸಂಖ್ಯಾತರ ವಸತಿ ಶಾಲೆಯಲ್ಲಿ ಶಿಕ್ಷಕರಾಗಿದ್ದ ಸಂದರ್ಭದಲ್ಲಿನ ಅವಧಿಯ ವಿದ್ಯಾರ್ಥಿಗಳು ಸೇರಿ ಅದ್ದೂರಿ ಸಮ್ಮಿಲನ ಮತ್ತು ಗುರುವಂದನಾ ಕಾರ್ಯಕ್ರಮ ಏರ್ಪಡಿಸಿ ನಮ್ಮೆಲ್ಲರಿಗೆ ಆಹ್ವಾನಿಸಿ ಗೌರವಿಸಿರುವುದು ಸಂತಸ ಉಂಟು ಮಾಡಿದೆ ಎಂದರು. ನಾವು ಕಲಿಸಿದ ವಿದ್ಯಾರ್ಥಿಗಳು ಉತ್ತಮ ಜೀವನ ಸಾಗಿಸುತ್ತಿರುವುದು ಮತ್ತು ಸಕ್ರಿಯವಾಗಿ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ತಮ್ಮ ಬದುಕು ಕಟ್ಟಿಕೊಂಡಿರುವುದು ಹೆಮ್ಮೆಯ ವಿಷಯ, ಇದೇ ರೀತಿ ಇತರರಿಗೆ ಮಾದರಿಯಾಗಿ ಜೀವನ ಸಾಗಿಸಿ ವಿದ್ಯಾ ಕಲಿಸಿದ ಗುರುಗಳಿಗೆ ಮತ್ತು ತಮ್ಮ ಊರುಗಳಿಗೆ ಕೀರ್ತಿ ತರುವಂತಹ ಕೆಲಸ ಜೀವನದಲ್ಲಿ ನಿರಂತರವಾಗಿ ಮಾಡುತ್ತ ಮುಂದೆ ಸಾಗಿ ಎಂದರು. ಸಮಾರಂಭದ ಉದ್ಘಾಟನೆಯನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ನಿವೃತ್ತ ಅಧಿಕಾರಿ ಎಚ್ ಕೆ, ಬೆಟಗೇರಿ ನೆರವೇರಿಸಿದರುಸಮಾರಂಭದ ಅಧ್ಯಕ್ಷತೆಯನ್ನು ವಸತಿ ಶಾಲೆಯ ನಿಲಯ ಪಾಲಕಿ ಮಹಾದೇವಿ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ವೇದಿಕೆ ಮೇಲೆ ಹಿರಿಯ ಪತ್ರಕರ್ತ ಎಂ.ಸಾಧಿಕ್ ಅಲಿ, ಶಿಕ್ಷಕರುಗಳಾದ ಅಸಮಾ ಸುಲ್ತಾನ, ಶಕುಂತಲಾ, ಪ್ರಕಾಶ್ ರೆಡ್ಡಿ, ಸುಧಾಕರ್, ಶಿವಾನಂದ್, ಶ್ರೀಧರ್ ಗೌಡ ವಿಜಯಕುಮಾರ್, ಸಂಗನಗೌಡ ಪಾಟೀಲ್ ಸುರೇಶ್ ಹಳ್ಳಿಗುಡಿ, ಶ್ರೀಮತಿ ಶಾಂತಾ ಮುರಾಳ ಹಿಂದಿನ ಇತರ ಸಿಬ್ಬಂದಿಗಳಾದ ಮರ್ದಾನಮ್ಮ, ಗಾಳೆಮ್ಮ, ಯಾಶ್ಮಿನ್, ನಿಂಗಪ್ಪ, ಹುಸೇನ್ ಸಾಬ್, ಅಲ್ಲದೆ ವಿದ್ಯಾರ್ಥಿಗಳಾದ ನೀಲ ಕುಮಾರ್ ಮಂಜುನಾಥ್ ಪಾಟೀಲ್ ಅಜರುದ್ದೀನ್ ಅಶ್ವಿನಿ, ಅತಿಕ್ ಅಹಮದ್, ಆರಿಫ್ ಅಹಮದ್, ಅವಿನಾಶ್ ಪೂಜಾರ್, ಅನೇಕರು ಪಾಲ್ಗೊಂಡಿದ್ದರು.
More Stories
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸರ್ಕಾರಿ ಶಾಲಾ ವಿದ್ಯಾರ್ಥಿಗಳು
ಬಿಎಸ್ ಪಿ ಸಂಘಟನೆ ಬೆಳೆಸಲು ಶ್ರಮಿಸಿ : ಕೃಷ್ಣಮೂರ್ತಿ
ಪರಿಸರ ಸಮತೋಲನಕ್ಕೆ ವನ್ಯಜೀವಿಗಳ ಪಾತ್ರ ಪ್ರಮುಖವಾಗಿದೆ : ಕೆ.ರಾಜಶೇಖರ ಹಿಟ್ನಾಳ