December 22, 2024

AKSHARA KRAANTI

AKSHARA KRAANTI




ಅ. 24 ರಂದು ಒಳ ಮೀಸಲಾತಿ ಜಾರಿ ಮಾಡಿ : ವೈ.ಜಯರಾಜ್

ಒಳ ಮೀಸಲಾತಿ ಜಾರಿ ಮಾಡಿ, ಕೊಪ್ಪಳ ಜಿಲ್ಲಾ ಪರಿಶಿಷ್ಟ ಜಾತಿ ವಕೀಲರ ಒಳ ಮೀಸಲಾತಿ ಹೋರಾಟ ಸಮಿತಿ ಒತ್ತಾಯ

ಅಕ್ಷರಕ್ರಾಂತಿ ನ್ಯೂಸ್
ಕೊಪ್ಪಳ,: ಕರ್ನಾಟಕ ರಾಜ್ಯದಲ್ಲಿ ತಕ್ಷಣವೇ ಪರಿಶಿಷ್ಟ ಜಾತಿಯಲ್ಲಿನ ಒಳಮೀಸಲಾತಿಯನ್ನು ಅಕ್ಟೋಬರ 24ನೇ ತಾರಿಖೀನ ಅಧಿವೇಶನದಲ್ಲಿ ಜಾರಿ ಮಾಡಬೇಕೆಂದು ಘನ ಸರಕಾರಕ್ಕೆ ವಕೀಲರಾದ ವೈ. ಜಯರಾಜ್ ಒತ್ತಾಯಿಸಿದರು.

ಸೋಮವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿ, ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಆಗಸ್ಟ್-1, 2024 ರ ಪ್ರಕಾರ ಪರಿಶಿಷ್ಟ ಜಾತಿಯಲ್ಲಿ 101 ಜಾತಿಗಳು ಒಳಗೊಂಡಿದ್ದು ಇರುತ್ತದೆ, ಅತ್ಯಂತ ಹಿಂದುಳಿದ ಜಾತಿಯಾದ ಮಾದಿಗ ಮತ್ತು ಛಲವಾದಿ ಮತ್ತು ಇವುಗಳ ಉಪಜಾತಿಗಳು ಅಸ್ಪೃಶ್ಯ ಸಮುದಾಯ ವಾಗಿರುತ್ತದೆ. ಈಗಿರುವ ಮೀಸಲಾತಿಯಲ್ಲಿ ಸದರಿ ನಮ್ಮ ಜನಾಂಗಕ್ಕೆ ಸರಿಯಾದ ರೀತಿಯ ಸೌಲಭ್ಯಗಳು ದೊರಕದೇ ಇರುವುದರಿಂದ 30 ವರ್ಷಗಳಿಂದ ನಿರಂತರವಾಗಿ ಸಾಕಷ್ಟು ಹೋರಾಟಗಳನ್ನು ಮಾಡಿದ್ದು ಇರುತ್ತದೆ, ಹಲವಾರು ಜನ ಪ್ರಾಣ ತೆತ್ತಿದ್ದಾರೆ, ಎಷ್ಟೋ ಕುಟುಂಬಗಳು ತಮ್ಮ ಮಕ್ಕಳನ್ನು ಕಳೆದುಕೊಂಡಿವೆ. ಆಯಾ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ವರ್ಗೀಕರಣ ಮಾಡುವುದಾಗಿ ಎಸ್.ಎಂ.ಕೃಷ್ಣ ಮಾಜಿ ಮುಖ್ಯಮಂತ್ರಿಯವರು ಕಾಂಗ್ರೆಸ್ ಸರಕಾರದಲ್ಲಿ ನಿವೃತ್ತ ನ್ಯಾಯಮೂರ್ತಿ ಸದಾಶಿವ ಆಯೋಗ ರಚಿಸಿ ಸದರಿ ಆಯೋಗವು ರಾಜ್ಯಾದ್ಯಂತ ಪರಿಶಿಷ್ಟ ಜಾತಿಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿಗಳನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿ ರಾಜ್ಯ ಸರಕಾರಕ್ಕೆ ಸದಾಶಿವ ಆಯೋಗದ ವರದಿ ಸಲ್ಲಿಸಿ ಅವರಲ್ಲಿ ಅತ್ಯಂತ ಸರಕಾರಿ ಸೌಲಭ್ಯ ವಂಚಿತ ಸಮುದಾಯವಾದ ಮಾದಿಗರಿಗೆ /ಮಾದರ(ಅಸ್ಪೃಶ್ಯ) ಮತ್ತು ಮಾದರ ಮತ್ತು ಅದರ ಉಪ ಸಮುದಾಯಕ್ಕೆ ಚಲವಾದಿ ಮತ್ತು ಅದರ ಉಪ ಸಮುದಾಯಕ್ಕೆ ಶೇ.6. ಹಾಗೂ ಚಲುವಾದಿ ಸಮುದಾಯಕ್ಕೆ ಶೇ.5 ಹಾಗೂ ಸ್ಪರ್ಶ ಸಮುದಾಯಗಳಾದ ಭೋವಿ, ಲಂಬಾಣಿ ಮುಂತಾದ ಸಮುದಾಯಗಳಿಗೆ ಶೇ.3 ಹಾಗೂ ಇನ್ನಿತರ ಅಲೆಮಾರಿ ಸಮುದಾಯಗಳಿಗೆ ಶೇ.1ನ್ನು ನಿಗದಿ ಮಾಡಿ ರಾಜ್ಯ ಸರಕಾರಕ್ಕೆ ಸದಾಶಿವ ಆಯೋಗದ ಸಮಿತಿ ವರದಿ ನೀಡಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ವಕೀಲರಾದ ಶಿವಾನಂದ ಹೊಸಮನಿ, ಡಿಎಂ ಪೂಜಾರ, ವಿಜಿ ಕಟ್ಟಿಮನಿ, ಪ್ರಕಾಶ ಹಾದಿಮನಿ, ಸಂತೋಷ ಕವಲೂರ, ಶಿವಕುಮಾರ ದೊಡ್ಡಮನಿ, ಮಾರುತಿ ಚಾಮಲಾಪುರ, ರಮೇಶ ಗಾಯಕವಾಡ ಇದ್ದರು.

 

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!