December 23, 2024

AKSHARA KRAANTI

AKSHARA KRAANTI




ಅಶೋಕ ವಿಜಯದಶಮಿ ಆಚರಣೆ

ಅಶೋಕ ವಿಜಯದಶಮಿ ಆಚರಣೆ

ಅಕ್ಷರಕ್ರಾಂತಿ ನ್ಯೂಸ್
ಕೊಪ್ಪಳ,: ನಗರದಲ್ಲಿ ಅಶೋಕ ವಿಜಯ ದಶಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಚಕ್ರವರ್ತಿ ಸಾಮ್ರಾಟ್ ಅಶೋಕ ಮಹಾರಾಜರು ಕಳಿಂಗ ಯುದ್ಧದ ಗೆಲುವಿನ ನಂತರ ಅಪಾರ ಸಾವು ನೋವುಗಳನ್ನು ನೋಡಿ ಮನ ಪರಿವರ್ತನೆಯಾಗಿ 9 ದಿನಗಳ ಉಪವಾಸದ ಸಂಕಲ್ಪ ತೊಟ್ಟು 10 ನೇ ದಿನ ಬೌದ್ಧ ಧಮ್ಮವನ್ನು ಸ್ವಿಕರಿಸಿದ ಸ್ಮರಣಾರ್ಥ ದೇಶ ಹಾಗೂ ವಿವಿಧ ದೇಶಗಳಲ್ಲಿ ಈ ದಿನವನ್ನು ಅಶೋಕ ವಿಜಯ ದಶಮಿಯನ್ನಾಗಿ ವಿಜೃಂಭಣೆಯಿಂದ ಆಚರಿಸುತ್ತಾರೆ.ಅದರಂತೆ ಇತಿಹಾಸವನ್ನು ತಿಳಿದ ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೂಡ ಇದೆ ಅಶೋಕ ವಿಜಯ ದಶಮಿ ದಿನದಂದು (14/10/1956) ರಂದು ತಮ್ಮ ಸರಿಸುಮಾರು10 ಲಕ್ಷ ಅನುಯಾಯಿಗಳ ಸಮೇತವಾಗಿ ಭಾರತದ ಮಧ್ಯಭಾಗವಾದ ಮಹಾರಾಷ್ಟ್ರದ ನಾಗಪುರದಲ್ಲಿ ಬೌದ್ಧ ಧರ್ಮವನ್ನು ಸ್ವಿಕರಿಸಿದರು.

ಹೀಗಾಗಿ ಪ್ರತಿರ್ಷದಂತೆ ಈ ವರ್ಷವೂ ಕೊಪ್ಪಳ ನಗರದ ಶ್ರೀ ಗವಿಸಿದ್ಧೆಶ್ವರ ಮಠದ ಹಿಂಭಾಗದಲ್ಲಿರುವ ಅಶೋಕ ಶಿಲಾಶಾಸನದ ಹತ್ತಿರ ಬುದ್ಧನ ಅನುಯಾಯಿಗಳು ಸೇರಿ ಅಶೋಕ ವಿಜಯದಶಮಿ ಆಚರಿಸಿದರು.ಈ ಸಂದರ್ಭದಲ್ಲಿ ರಾಘು ಚಾಕ್ರಿ, ಮಂಜು ದೊಡ್ಡಮನಿ, ಗೌತಮ್ ಬಳಗಾನೂರ, ಕಾಶಪ್ಪ ಚಲವಾದಿ, ಮಾರ್ಕೇಂಡಿ ಬೆಲ್ಲದ್, ಮಲ್ಲು ಬಡಿಗೇರಿ, ನಾಗರಾಜ, ಪ್ರವೀಣ, ಸತೀಶ್, ಪ್ರಮೋದ್, ರಾಹುಲ್, ಮನೋಜ್, ಪ್ರೇಮ್, ಶ್ರೀಧರ್, ನವೀನ, ವಿಶ್ವನಾಥ್, ಕಿರಣ್, ಮಂಜು, ಪ್ರದಿಪ್, ತರುಣ್ ಕಿಶೋರ್, ಪ್ರೇಮ್ ಬೆಲ್ಲದ್ ಸೇರಿದಂತೆ ಅನೇಕ ಅನುಯಾಯಿಗಳು ಇದ್ದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!