December 23, 2024

AKSHARA KRAANTI

AKSHARA KRAANTI




ಅನುದಾನಿತ ಶಾಲೆಗಳು ಸ್ಥಳೀಯರ ಸಹಕಾರದಿಂದ ಅಭಿವೃದ್ದಿ ಸಾಧ್ಯ : ಬಸವರಾಜ ಸಂಶಿ

ಕೊಪ್ಪಳ,: ಅನುದಾನಿತ ಶಾಲೆಗಳು ಸ್ಥಳೀಯರ, ಜನ ಪ್ರತಿನಿಧಿಗಳ ಸಹಕಾರದಿಂದ ಅಭಿವೃದ್ದಿ ಹೊಂದಲು ಸಾಧ್ಯವಾಗುತ್ತದೆ ಎಂದು ಬಿಸರಳ್ಳಿ ನೃಪತುಂಗ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಸವರಾಜ ಸಂಶಿ ಹೇಳಿದರು.

ತಾಲೂಕಿನ ಬಿಸರಳ್ಳಿ ಗ್ರಾಮದ ನೃಪತುಂಗಾ ಪ್ರೌಢ ಶಾಲೆಯ ದೈಹಿಕ ಶಿಕ್ಷಕ ಎನ್. ಎಂ ಹಾರೋಗೇರಿಯವರ ವಯೋ ನಿವೃತ್ತಿ ಬಿಳ್ಕೊಡುಗೆ ಹಾಗೂ ಶಾಲೆಗೆ ದೇಣಿಗೆ ನೀಡಿದ ದಾನಿಗಳಿಗೆ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಬಿಸರಹಳ್ಳಿ ಗ್ರಾಮದ ಈ ಶಾಲೆಯನ್ನು ಮಲ್ಲಿಕಾರ್ಜುನ ದಿವಟರ್ ಸಂಸ್ಥಾಪಿಸಲು ಗ್ರಾಮದ ಹಿರಿಯರಾಗಿದ್ದ ದೇವೇಂದ್ರಗೌಡ ಮಾಲಿಪಾಟೀಲ್ ಇವರ ಸಹಕಾರದಿಂದ 1985ರಲ್ಲಿ ಶಾಲೆಯನ್ನು ಪ್ರಾರಂಭಿಸಿದರು.
ಅಂದು ಪ್ರಾರಂಭಿಸಿದ ಶಾಲೆಯು ದೇವಸ್ಥಾನಗಳಲ್ಲಿ, ಮಸೀದಿಗಳಲ್ಲಿ ನಡೆಯುತಿತ್ತು, ನಂತರದ ದಿನಗಳಲ್ಲಿ ದಿವಟರ್ ಅವರು ತಮ್ಮ ಸ್ವಂತ ಹಣದಿಂದ ಶಾಲೆಗೆ ಜಾಗೆಯನ್ನು ನೀಡಿದರು.
ಅಂದಿನಿಂದ ಪ್ರಾರಂಭಗೊಂಡ ಶಾಲೆಗೆ 1987ರಲ್ಲಿ ಈ ಶಾಲೆಗೆ ಬಂದವರೇ ದೈಹಿಕ ಶಿಕ್ಷಕ ಎನ್ ಎಂ ಹಾರೋಗೇರಿ ಇವರು ತಮ್ಮ ಸಹ ಶಿಕ್ಷಕರೊಂದಿಗೆ ಸೇರಿ ಗವೀಸಿದ್ದೇಶ್ವರ ಬೋರ್ಡಿಂಗ್ ಮಾಡಿ ವಿದ್ಯಾರ್ಥಿಗಳ ಭೋಜನಕ್ಕೆ ಗ್ರಾಮದ ಮನೆಗಳಲ್ಲಿ ಕಜ್ಜಾಯವೆತ್ತಿ ಈ ಶಾಲೆಯ ಮಕ್ಕಳ ಸಂಖ್ಯೆ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಎಂದರು.

ನಂತರದಲ್ಲಿ ಗ್ರಾಮ ಪಂಚಾಯತಿ ಒಧ್ಯಕ್ಷ ರಮೇಶ ಮೂಲಿಮನಿ ಮಾತನಾಡಿ, ನಮ್ಮ ಶಾಲೆಗೆ ಗ್ರಾಮದ ಹಿರಿಯರ ಕೊಡುಗೆ ಅಮೋಘವಾಗಿದ್ದು, ಶಿಕ್ಷಕರ ಪರಿಶ್ರಮದಿಂದ ಇಂದು ನೂರಾರು ವಿದ್ಯಾರ್ಥಿಗಳು ಉನ್ನತ ಹುದ್ದೆಯಲ್ಲಿದ್ದಾರೆ ಎಂದರು.

ನಂತರದಲ್ಲಿ ಇದೇ ಶಾಲೆಯಲ್ಲಿ ವ್ಯಾಸಾಂಗ ಮಾಡಿ ವಕೀಲರಾಗಿರುವ ಮಹೇಶ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಶಿಕ್ಷಕರಾದ ಕೊಟ್ರೇಶ ಹಾಗೂ ರಮೇಶ ಬುಡ್ಡನಗೌಡ್ರ, ಎಸ್. ಎ ಪಾಟೀಲ್, ಹನುಮಂತ ಲಮಾಣಿ ಶಿಕ್ಷಕರು ತಮ್ಮ ಅನಿಸಿಕೆಗಳನ್ನು ಮಂಡಿಸಿದರು.

ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಕ ಎನ್. ಎಮ್ ಹಾರೋಗೇರಿ ಸನ್ಮಾನ ಸ್ವೀಕರಿಸಿ ಮಾತನಾಡಿ, ನಾನು ಈ ಶಾಲೆಗೆ 1985ರಲ್ಲಿ ಬಂದಾಗ ಸಂಬಳವಿಲ್ಲದೇ ಶಾಲೆಯ ಶಿಕ್ಷಕ ವೃತ್ತಿಯನ್ನು ಸುಮಾರು ಹತ್ತು ವರ್ಷಗಳ ಕಾಲ ಮುನ್ನೇಡಸಿಕೊಂಡು ಬಂದೆ, ಆಗ ಗ್ರಾಮದ ಅಮೀನ್ ಸಾಬ ಎನ್ನುವವರು ನಮ್ಮ ಶಾಲೆಗೆ ಗಣೇಶನನ್ನು ಕೊಡಿಸುತ್ತಿದ್ದರು, ಅವರು ಕೂಲಿ ಕೆಲಸ ಮಾಡುತ್ತಾ ಇದ್ದರು. ಶಾಲೆಗೆ ಕೊಠಡಿ ನಿರ್ಮಿಸಲು ಉಚಿತ ಆಳಾಗಿ ದುಡಿದರು.ಅಂತವರ ಸಾಲಿನಲ್ಲಿ ಗ್ರಾಮದ ರಮೇಶ ಮ್ಯಾಗಳಮನಿಯವರು ವ್ಯಾಪಾರ ಮಾಡುತ್ತಾ ಶಾಲೆಯ ಬಗ್ಗೆ ಕಾಳಜಿ ಹೊಂದಿ ಮಕ್ಕಳಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವದನ್ನು ಮನಗಂಡು ನಮ್ಮ ಶಾಲೆಯಲ್ಲಿ ತಮ್ಮ ಸ್ವಂತ ಹಣದಿಂದ ಬೋರವೆಲ್ ನಿರ್ಮಿಸಲು ಮುಂದಾಗಿದ್ದು, ಇಂದು ನೀರು ಸಹ ಸಾಕಷ್ಟು ದೊರೆತಿದೆ. ಜೊತೆಗೆ ವಿರುಪಾಕ್ಷಪ್ಪನವರು ಸಹಕರಿಸಿದರು, ಶಾಲೆಗೆ ಪಿಲ್ಟರ್ ನೀರಿನ ವ್ಯವಸ್ಥೆ ನೀಡಲು ಯಲ್ಲೇಶ ಹುಲ್ಲೂರ ಮುಂದೆ ಬಂದಿದ್ದಾರೆ ಎಂದರು.

ಕಾರ್ಯಕ್ರಮಕ್ಕೂ ಮುನ್ನ ಶಿಕ್ಷಕ ಎನ್.ಎಮ್ ಹಾರೋಗೇರಿ ಇವರನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಶಾಲೆಗೆ ಕರೆದುಕೊಂಡು ಬರಲಾಯಿತು.

ವಿಷೇಶವಾಗಿ ಕಾರ್ಯಕ್ರಮವನ್ನು ಗಂಗೆಗೆ ಪೂಜೆ ಸಲ್ಲಿಸಿ ಬೋರ್ ವೆಲ್ ಚಾಲನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ನಂತರದಲ್ಲಿ ಶಿಕ್ಷಕರಿಗೆ ದಾನಿಗಳಿಗೆ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಪಂ ಅಭಿವೃದ್ದಿ ಅಧಿಕಾರಿ ಬಸವರಾಜ, ಶಿಕ್ಷಕರಾದ ಶಾಂತವೀರಪ್ಪ, ಸೋಮಶೇಖರ್ ಜೋಗಿನ್, ಸಿ.ಎಮ್ ಸೂಡಿ, ಕೊಟ್ರೇಶ ಬಳಗೇರಿ ಇನ್ನಿತರ ಶಿಕ್ಷಕರು ಹಾಗೂ ಗ್ರಾಪಂ, ಸಿಬ್ಬಂದಿಯವರು,ಹಿರಿಯರು ಗ್ರಾಮದ ಮುಖಂಡರು ಪಾಲ್ಗೋಂಡಿದ್ದರು.
ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿನಿ ಶ್ರೀದೇವಿ ಸಂಗಡಿಗರು ಪ್ರಾರ್ಥಿಸಿದರು, ಹನುಮಂತಪ್ಪ ಚಲವಾದಿ ನಿರ್ವಹಿಸಿದರು, ಶಿವರುದ್ರಪ್ಪ ವಂದಿಸಿದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!