ಕೊಪ್ಪಳ,: ನಗರದ ಅಟಲ್ ಬಿಹಾರಿ ವಾಜಪೇಯಿ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳ ಪ್ರವೇಶ ಶುಲ್ಕವನ್ನು ಪ್ರಸ್ತುತ ಸಾಲಿಗೆ 30 ಸಾವಿರ ರೂ.ಗಳಿಗೆ ಹೆಚ್ಚಿಸಿರುವ ಕ್ರಮವನ್ನು ದ್ವಿತೀಯ ಹಾಗೂ ತೃತೀಯ ವರ್ಷದ ವಿದ್ಯಾರ್ಥಿಗಳು ಕಾಲೇಜ್ ಆವರಣದಲ್ಲಿ ಪ್ರತಿಭಟನೆ ಮಾಡಿ, ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿದರು.
ಕಳೆದ ವರ್ಷದ ಶುಲ್ಕವೇ 2023-24 ನೇ ಸಾಲಿನ 22,450 ರೂ ಇತ್ತು. ಈ ಶುಲ್ಕವೇ ಬಹುತೇಕ ಎಲ್ಲ ವಿದ್ಯಾರ್ಥಿಗಳಿಗೆ ಹೊರೆಯಾಗಿತ್ತು, ಆದರೆ ಪ್ರಸ್ತುತ ಸಾಲಿನ ಶುಲ್ಕ 30,000 ರೂ ಆಗಿದೆ. ಇದರಿಂದ ಹಿಂದುಳಿದ ಪ್ರದೇಶವಾದ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿರು ಬಹುತೇಕ ವಿದ್ಯಾರ್ಥಿಗಳು ಬಡವರು ಇದ್ದಾರೆ. ಮತ್ತು ಪರಿ ಶಿಷ್ಟ ಜಾತಿ, ಪಂಗಡಕ್ಕೆ ಸೇರಿದವರು ಇದ್ದಾರೆ ಇಷ್ಟು ಶುಲ್ಕ ಪಾವತಿ ಸಲು ಸಾಧ್ಯವಾಗದೆ ಅನೇಕರು ನ್ಯಾಯವಾದಿಗಳಾಗುವ ಆಸೆ ಈಡೇರದೇ ಇರಬಹುದು ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.ಹಿಂದುಳಿದ ಪ್ರದೇಶದಲ್ಲಿರುವ ಕಾಲೇಜಿನ ಪ್ರವೇಶ ಶುಲ್ಕವನ್ನು ದಿಢೀರ್ ಹೆಚ್ಚಳ ಮಾಡಿರುವ ಆಡಳಿತ ಮಂಡಳಿಯ ಕ್ರಮ ಸರಿಯಾದದು ಅಲ್ಲ ಮತ್ತು ಈ ಕ್ರಮದಿಂದ ಅನೇಕ ವಿದ್ಯಾರ್ಥಿಗಳು ಕಾನೂನು ಪದವಿಯಿಂದ ವಂಚಿತರಾಗಲಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರಥಮ ವರ್ಷದ ಪ್ರವೇಶ ಪಡೆಯುವಾಗ ಹಿಂದೆ ಇದ್ದ ಪ್ರಾಚಾರ್ಯರು, ಪ್ರಥಮ ವರ್ಷದ ಶುಲ್ಕ ಹೆಚ್ಚು (22450) ಪಾವತಿಸಬೇಕು ನಂತರದ ದ್ವಿತೀಯ, ತೃತೀಯ ವರ್ಷಗಳಲ್ಲಿ ಕಡಿಮೆ ಗೊಳಿಸಲಾಗುವುದು ಎಂದು ನಮಗೆ ಭರವಸೆ ಕೊಟ್ಟಿದ್ದರು. ಆದರೆ, 2023-24 ನೇ ಸಾಲಿನ ಶುಲ್ಕದ ಜೊತೆಗೆ ಹೆಚ್ಚುವರಿಯಾಗಿ 1 ಸಾವಿರ ರೂ.ಗಳನ್ನು ಅಭಿವೃದ್ಧಿ ಶುಲ್ಕವಾಗಿ ಪಾವತಿಕೊಂಡಿದ್ದಾರೆ ಮತ್ತು ಪ್ರಥಮ ವರ್ಷದ ವಿದ್ಯಾರ್ಥಿಗಳಿಂದ ಶುಲ್ಕದ ಜೊತೆಗೆ 3 ಸಾವಿರ ರೂ.ಗಳನ್ನು ಹೆಚ್ಚುವರಿಯಾಗಿ ಪಾವತಿಕೊಂಡಿದ್ದಾರೆ. ವಿದ್ಯಾರ್ಥಿಗಳಿಗೆ ಕೊಟ್ಟ ಭರವಸೆಯ ವಿರುದ್ಧವಾಗಿ ಪ್ರಸ್ತುತ 7550 ರೂ.ಗಳನ್ನು ಏಕಾಏಕಿ ಶುಲ್ಕವನ್ನು ಹೆಚ್ಚಳ ಮಾಡಿ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ಅನ್ಯಾಯ ಮಾಡುತ್ತಿದೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ವಿವಿದ ಬೇಡಿಕೆಗಳು :
– ಏಕಾಏಕಿ ಹೆಚ್ಚಿಸಿರುವ ಹೊಸ ಶುಲ್ಕದ ಮಾದರಿಯನ್ನು ಕೈಬಿಟ್ಟು ಕಳೆದ ವರ್ಷದ ಪಾವತಿಸಿದ 22450 ರೂ.ಗಳನ್ನು ಶುಲ್ಕವನ್ನು ಮೊತ್ತಕ್ಕೆ ಪ್ರವೇಶಾತಿ ಪಡೆಯಲು ಅವಕಾಶ ಮಾಡಿಕೊಡಬೇಕು.
– ಪ್ರವೇಶಾತಿ ದಿನಾಂಕ ಇದೇ 24 ಅಂತಿಮ ವಾಗಿರುವುದರಿಂದ ಕಾರಣ ಆದಷ್ಟು ಬೇಗ ನಿರ್ದಿಷ್ಟ ಅವಧಿಯೊಳಗೆ ಶುಲ್ಕ ಮರು ಪರಿಷ್ಕರಿಸಿ ರೂ. 22450 ಕ್ಕೆ ದ್ವಿತೀಯ, ತೃತೀಯ ವರ್ಷದ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಪಡೆಯಲು ಅನುಮತಿ ಕೊಡಬೇಕು.
– ಕಾಲೇಜಿನಲ್ಲಿ ಕಾನೂನು ಪದವಿ ಪಡೆಯುತ್ತಿರುವ ಹಲವಾರು ವಿದ್ಯಾರ್ಥಿಗಳು ಬಡ ವರ್ಗದವರಾಗಿರುವುದರಿಂದ ಪ್ರವೇಶಾತಿ ಶುಲ್ಕವನ್ನು ಕಂತುಗಳ ಮೂಲಕ ಪಾವತಿಸಲು ಅವಕಾಶ ನೀಡಬೇಕು.
-ಪ್ರವೇಶಾತಿ ಸಮಯದಲ್ಲಿ ನಮ್ಮ ಬಳಿ ಪಡೆದ ಮೂಲ ಅಂಕಪಟ್ಟಿಗಳನ್ನು ನಮಗೆ ಅವಶ್ಯಕತೆ ಇದ್ದಾಗ ಮರಳಿ ಪಡೆಯಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
– ಈ ಎಲ್ಲ ಬೇಡಿಕೆಗಳನ್ನು ತ್ವರಿತ ರೀತಿಯಲ್ಲಿ ಬಗೆಹರಿಸುವಿರೆಂದು ನಂಬಿದ್ದೇವೆ ಇಲ್ಲವಾದರೆ ನಮಗೆ ನ್ಯಾಯ ದೊರಕುವವರಗೆ ನಿರಂತರ ಪ್ರತಿಭಟನೆಯಲ್ಲಿ
ತೊಡಗುವೆವೆಂದು ತಿಳಿಸಿದ್ದಾರೆ.
– ನೂರಾರು ವಿದ್ಯಾರ್ಥಿಗಳು ಸಹಿ ಮಾಡಿದ ಮನವಿ ಪತ್ರವನ್ನು ಕೊಪ್ಪಳ ಕಾಲೇಜು ಪ್ರಾಂಶುಪಾಲರಿಗೆ ಕೊಟ್ಟಿದ್ದಾರೆ.
More Stories
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸರ್ಕಾರಿ ಶಾಲಾ ವಿದ್ಯಾರ್ಥಿಗಳು
ಬಿಎಸ್ ಪಿ ಸಂಘಟನೆ ಬೆಳೆಸಲು ಶ್ರಮಿಸಿ : ಕೃಷ್ಣಮೂರ್ತಿ
ಪರಿಸರ ಸಮತೋಲನಕ್ಕೆ ವನ್ಯಜೀವಿಗಳ ಪಾತ್ರ ಪ್ರಮುಖವಾಗಿದೆ : ಕೆ.ರಾಜಶೇಖರ ಹಿಟ್ನಾಳ