December 23, 2024

AKSHARA KRAANTI

AKSHARA KRAANTI




ಅಖಿಲ ಭಾರತ 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಹಿಳಾ ಸಾಹಿತಿಯನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಲು ಮನವಿ

ಕೊಪ್ಪಳ,: ಮಹಿಳಾ ಸಾಹಿತಿಗಳು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಲು 1971 ರ ತನಕ ಕಾಯ ಬೇಕಾಯಿತು. ಮಂಡ್ಯದಲ್ಲಿ 31ನೇ ಮೇ ಇಂದ ಎರಡನೇ ಜೂನ್ 1971 ರತನಕ ಕಾಯಬೇಕಾಯತು. ಮಂಡ್ಯದಲ್ಲಿ 31ನೇ ಯಿಂದ ಮೇ ಇಂದ ಎರಡನೇ ಜೂನ್ 1971ರಂದು ಸಮ್ಮೇಳನದ ಅಧ್ಯಕ್ಷರನ್ನಾಗಿ ಪ್ರಥಮವಾಗಿ ಮಹಿಳಾ ಸಾಹಿತಿಯದ ಜಯದೇವಿತಾಯಿ ಲಿಗಾಡೆ ಯವರನ್ನು ಪ್ರಥಮವಾಗಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ನಂತರ ಶಾಂತದೇವಿ ಮಾಳವಾಡ, ಕಮಲಾ ಹಂಪನಾ, ಗೀತಾ ನಾಗಭೂಷಣ ಅವನು ಮಾತ್ರ ಸಮ್ಮೇಳದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಲು ಮಹಿಳಾ ಸಾಹಿತಿಗಳಾದ ಭಾನು ಮಸ್ತಾಕ್, ಪ್ರತಿಭಾ ನಂದಕುಮಾರ, ವಸುಂದರ ಭೂಪತಿ, ಎಚ್ .ಎಲ್. ಪುಷ್ಪಾ, ವೈದೇಹಿ, ವೈದೇಹಿ, ವೀಣಾ ಶಾಂತೇಶ್ವರ, ಮಾಲತಿ ಪಟ್ಟಣಶೆಟ್ಟಿ, ಬಿ .ಟಿ .ಲಲಿತಾ ನಾಯಕ ಅಥವಾ ತಮಗೆ ಸರಿ ಎನಿಸಿದ, ಅರ್ಹತೆ ಹೊಂದಿದ ಮಹಿಳಾ ಸಾಹಿತಿಯನ್ನು ಅಥವಾ ಇವರನ್ನು ಹೊರತುಪಡಿಸಿ ಇನ್ಯಾರಾದರೂ ತಮಗೆ ಸರಿ ಎನಿಸಿದ ಮಹಿಳೆಯ ಸಾಹಿತಿಯನ್ನು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ನಾಡೋಜ ಡಾ. ಮಹೇಶ್ ಜೋಶಿ ಮತ್ತು ಪದಾಧಿಕಾರಿಗಳು ಮತ್ತು ಅದಕ್ಕೆ ಸಂಬಂಧಪಟ್ಟವರು ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕೆಂದು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಹನುಮಂತಪ್ಪ ಅಂಡಗಿ ಚಿಲವಾಡಗಿ ಮನವಿ ಮಾಡಿಕೊಂಡಿದ್ದಾರೆ.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!