ಬಿತ್ತನೆ ಬೀಜಗಳ ವಿತರಣೆ ಹಾಗೂ ಬೀಜೋಪಚಾರದ ಕಾರ್ಯಕ್ರಮ
ಅಕ್ಷರಕ್ರಾಂತಿ ನ್ಯೂಸ್
ಕುಷ್ಟಗಿ,: ಇಲ್ಲಿನ ಕೃಷಿ ಇಲಾಖೆಯ ಕಛೇರಿಯಲ್ಲಿ ೨೦೨೪-೨೫ನೇ ಸಾಲಿನ ಬಿತ್ತನೆ ಬೀಜಗಳ ವಿತರಣೆ ಹಾಗೂ ಬೀಜೋಪಚಾರದ ಕಾರ್ಯಕ್ರಮ ಜರುಗಿತು.
ರೈತರಿಗೆ ಬಿತ್ತನೆ ಬೀಜಗಳನ್ನು ಮತ್ತು ರೈತರಿಗೆ ಸಲಕರಣೆಗಳು ವಿತರಣೆ ಮಾಡಿದ ಶಾಸಕ ಹಾಗೂ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್ ಮಾತನಾಡಿ, ಕೃಷಿ ಇಲಾಖೆಯ ವತಿಯಿಂದ ರೈತರಿಗೆ ಹಲವಾರು ಯೋಜನೆಗಳು ಇದ್ದು. ಅವುಗಳ ಸದುಪಯೋಗಕ್ಕೆ ರೈತರು ಮುಂದಾಗಬೇಕು. ಕೃಷಿ ಅಧಿಕಾರಿಗಳು ರೈತರಿಗೆ ಇರಬಹುದಾದ ಯೋಜನೆಗಳ ಬಗ್ಗೆ ಸಕಾಲದಲ್ಲಿ ಮಾಹಿತಿಯನ್ನು ನೀಡಿ ಇಲಾಖೆಯ ಯೋಜನೆಗಳು ಪ್ರತಿಯೊಂದು ರೈತರಿಗೆ ಮುಟ್ಟಿಸುವಲ್ಲಿ ಪ್ರಮಾಣಿಕ ಪ್ರಯತ್ನ ಮಾಡಬೇಕು. ರೈತರಿಂದ ದೂರು ಬರದಂತೆ ಕಾರ್ಯನಿರ್ವಹಿಸಿ ಎಂದರು.ವೇದಿಕೆಯ ಮೇಲೆ ವಾಮನಮೂರ್ತಿ, ರೈತ ಸಂಘದ ಮುಖಂಡರಾದ ನಜೀರಸಾಬ ಮೂಲಿಮನಿ, ಸಹದೇವ ರಾಜಶೇಖರ, ವಿಜಯಕುಮಾರ್ ಹಿರೇಮಠ, ಆಶೋಕ ಬಳೋಟಗಿ ಸೇರಿದಂತೆ ಅನೇಕರು ಇದ್ದರು.
ನಂತರ ಕೃಷಿ ಚಟವಟಿಕೆಗೆ ಸಂಬಂಧಿಸಿದಂತೆ ವಿವಿಧ ಸಲಕರಣೆಗಳು, ಮತ್ತು ಬಿತ್ತನೆ ಬೀಜಗಳು, ಹಾಗೂ ಬೀಜೋಪಚಾರದ ಮಾಹಿತಿಯನ್ನು ರೈತರಿಗೆ ನೀಡಲಾಯಿತು.
More Stories
ಚಂದ್ರಶೇಖರ್ ತುಮ್ಮರಗುದ್ದಿಗೆ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿ
ಹೆಣ್ಣನ್ನು ಅಸಮಾನಳಂತೆ ಕಾಣುವ ಸಮಯ ಈಗಿಲ್ಲ : ಜ್ಯೋತಿ ಗೊಂಡಬಾಳ
ಹನುಮಸಾಗರ ಗ್ರಾಪಂ ವ್ಯಾಪ್ತಿಯಲ್ಲಿ ಲೋಕಸಭಾ ಚುನಾವಣೆ ಸ್ವೀಪ್ ಕಾರ್ಯಕ್ರಮ